ನಿಮ್ಮನ್ನು ಸುರಕ್ಷಿತವಾಗಿರಿಸಲು ನಾವು ಹೇಗೆ ಸಹಾಯ ಮಾಡುತ್ತಿದ್ದೇವೆ
ನಿಮ್ಮ ಅನುಭವವು ಧನಾತ್ಮಕ, ಅಂತರ್ಗತ ಮತ್ತು ಸುರಕ್ಷಿತವಾಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ನಾವು ನವೀನ ತಂತ್ರಜ್ಞಾನವನ್ನು ಪರಿಚಯಿಸಿದ್ದೇವೆ.
ಸುರಕ್ಷತೆಯ ಕುರಿತು ಹೆಚ್ಚು ಕಾಳಜಿವಹಿಸುವುದು
ಹೊಂದಿಕೊಳ್ಳಬಲ್ಲ ತಂತ್ರಜ್ಞಾನ
ನಿಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡಲೆಂದು ನಾವು ಇನ್-ಆ್ಯಪ್ ವೈಶಿಷ್ಟ್ಯಗಳನ್ನು ನಿರ್ಮಿಸುತ್ತೇವೆ—ಟ್ರಿಪ್ ಅಸಹಜವಾಗಿ ದಾರಿ ತಪ್ಪುತ್ತಿದೆ ಎಂಬುದನ್ನು ಕಂಡುಹಿಡಿಯುವ GPS ಟ್ರ್ಯಾಕಿಂಗ್‌ನಿಂದ ಹಿಡಿದು, ಫೇಸ್ ಕವರ್‌ಗಳನ್ನು ಪರಿಶೀಲಿಸುವ ಪರಿಕರಗಳವರೆಗೆ.
ಹಂಚಿತ ಹೊಣೆಗಾರಿಕೆ
ಚಾಲಕರು, ಸವಾರರು, ಡೆಲಿವರಿ ಪಾರ್ಟ್‌ನರ್‌ಗಳು ಮತ್ತು ಆಹಾರಪ್ರೇಮಿಗಳು ಸೇರಿದಂತೆ ಪ್ರತಿಯೊಬ್ಬರೂ Uber ಬಳಸುವಾಗ ಒಬ್ಬರನ್ನೊಬ್ಬರು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಅವಕಾಶವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ.
ಸುರಕ್ಷತಾ ಸಂಯೋಜನೆಗಳು
ಕೆಲವು ಮಾರುಕಟ್ಟೆಗಳಲ್ಲಿ, Concur Locate ಮತ್ತು International SOS ಜೊತೆಗಿನ ಸಂವಹನಗಳ ಮೂಲಕ ಅಪಾಯವನ್ನು ನಿರ್ವಹಿಸಲು ನಾವು ಸಹಾಯ ಮಾಡುತ್ತೇವೆ.
ಪ್ರತಿ ತಿರುವಿನಲ್ಲಿಯೂ ನಿಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವುದು
Concur Locate ಮತ್ತು International SOS ಏಕೀಕೃತಗೊಂಡಿವೆ
ಪ್ರಬಲ ಉದ್ಯೋಗಿ ಅಪಾಯ ನಿರ್ವಹಣೆ ಮತ್ತು ಸುರಕ್ಷತಾ ಸಂವಹನ ಪರಿಹಾರಗಳ ಜೊತೆಗೆ ನಾವು ಪಾಲುದಾರಿಕೆ ಹೊಂದಿದ್ದೇವೆ, ಅದು ನಿಮ್ಮ ನೌಕರರ ಜೊತೆಗೆ ತ್ವರಿತವಾಗಿ ಪರಿಶೀಲಿಸಲು ನಿಮಗೆ ಅವಕಾಶ ನೀಡುತ್ತದೆ.
ಪ್ರತಿಯೊಂದು ಟ್ರಿಪ್‌ಗೂ ವಿಮೆ ಸೌಲಭ್ಯವಿದೆ
ಸವಾರರ ಜೊತೆಗೆ ಪ್ರಯಾಣಿಸುವಾಗ ಯುಎಸ್ ಚಾಲಕರ ಪರವಾಗಿ Uber ಕನಿಷ್ಠ $1 ಮಿಲಿಯನ್ ವಾಣಿಜ್ಯ ವಾಹನ ಹೊಣೆಗಾರಿಕೆ ವಿಮೆಯನ್ನು ನಿರ್ವಹಿಸುತ್ತದೆ.
ಚಾಲಕ ಮತ್ತು ಡೆಲಿವರಿ ಪಾರ್ಟ್‌ನರ್ ತಪಾಸಣೆ
Uber ಪ್ಲಾಟ್‌ಫಾರ್ಮ್ ಅನ್ನು ಬಳಸಲು ಸಾಧ್ಯವಾಗುವ ಮೊದಲು ಚಾಲಕರು ಮತ್ತು ಡೆಲಿವರಿ ಪಾರ್ಟ್‌ನರ್‌ಗಳನ್ನು ತಪಾಸಣೆ ಮಾಡಲಾಗುತ್ತದೆ.
ಸಮುದಾಯ ಮಾರ್ಗಸೂಚಿಗಳು
ನಮ್ಮ ಎಲ್ಲಾ ಆ್ಯಪ್‍ಗಳಲ್ಲಿ Uber ಖಾತೆಗೆ ಸೈನ್ ಅಪ್ ಮಾಡುವ ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ವರ್ತಿಸುತ್ತಾರೆ, ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡುತ್ತಾರೆ ಮತ್ತು ಕಾನೂನನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲರ ಮನಸ್ಸಿಗೆ ಶಾಂತಿ ಒದಗಿಸುವುದು
ಸವಾರರು, ಚಾಲಕರು, ಡೆಲಿವರಿ ಪಾರ್ಟ್‌ನರ್‌ಗಳು ಮತ್ತು ವ್ಯವಹಾರಗಳು ಸೇರಿದಂತೆ, ನಾವು ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಮುದಾಯಗಳ ಸುರಕ್ಷತೆಯನ್ನು ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.
ಆ್ಯಪ್‍ನಲ್ಲಿನ ಸುರಕ್ಷತಾ ಟೂಲ್‌ಕಿಟ್
ಇದು ಆ್ಯಪ್‌ನಲ್ಲಿರುವ ಮೀಸಲು ಸ್ಥಳವಾಗಿದ್ದು, ಇಲ್ಲಿ ಸವಾರರು ಮತ್ತು ಚಾಲಕರು ಪ್ರಮುಖ ಸುರಕ್ಷತಾ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದು, ತುರ್ತು ಸಹಾಯವನ್ನು ತ್ವರಿತವಾಗಿ ತಲುಪಬಹುದು ಮತ್ತು ತುರ್ತು ರವಾನೆದಾರರ ಜೊತೆಗೆ ತಮ್ಮ ಸ್ಥಳವನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಕಲಿಯಬಹುದು.
RideCheck
ಟ್ರಿಪ್ ಅಸಹಜ ರೀತಿಯಲ್ಲಿ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂದು ಸೆನ್ಸಾರ್ ಮತ್ತು GPS ಬಳಸಿ RideCheck ಪರಿಶೀಲಿಸುತ್ತದೆ. ಅನಿರೀಕ್ಷಿತ ದೀರ್ಘ ನಿಲುಗಡೆ ಇದ್ದರೆ ಅಥವಾ ಅಪಘಾತ ಸಂಭವಿಸಿದಲ್ಲಿ, ಬೆಂಬಲವನ್ನು ಒದಗಿಸುವ ಸಹಾಯ ಮಾಡಲು ಇದು ನೆರವಾಗುತ್ತದೆ. ನಿಖರ ವೈಶಿಷ್ಟ್ಯಗಳು ಮಾರುಕಟ್ಟೆಯ ಪ್ರಕಾರವಾಗಿ ಬದಲಾಗುತ್ತವೆ.
ತುರ್ತು ಸಹಾಯ ಬಟನ್
ನಿಮಗೆ ಅಗತ್ಯವಿರುವಾಗ ಸಹಾಯ ಪಡೆಯುವುದಕ್ಕಾಗಿ 911 ಗೆ ಕರೆ ಮಾಡಲು, ಆ್ಯಪ್ ಒಳಗಿನ ತುರ್ತು ಬಟನ್ ಅನ್ನು ಬಳಸಬಹುದು. ಆ್ಯಪ್ ನಿಮ್ಮ ಸ್ಥಳ ಮತ್ತು ಟ್ರಿಪ್ ವಿವರಗಳನ್ನು ಪ್ರದರ್ಶಿಸುತ್ತದೆ. ಆದ್ದರಿಂದ, ನೀವು ಅದನ್ನು 911 ರವಾನೆದಾರರ ಜೊತೆಗೆ ತ್ವರಿತವಾಗಿ ಹಂಚಿಕೊಳ್ಳಬಹುದು. ಆಯ್ದ US ನಗರಗಳಲ್ಲಿ, ನೀವು ಕರೆ ಮಾಡಿದಾಗ ಈ ಮಾಹಿತಿಯನ್ನು ಸ್ವಯಂಚಾಲಿತವಾಗಿ ತುರ್ತು ಸೇವೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಯುಎಸ್ನಲ್ಲಿ ಚಾಲಕರ ತಪಾಸಣೆ
ಎಲ್ಲಾ ಚಾಲಕರು Uber ಬಳಕೆಯನ್ನು ಪ್ರಾರಂಭಿಸುವ ಮೊದಲೇ ತಪಾಸಣೆ ನಡೆಸಲಾಗುತ್ತದೆ ಮತ್ತು ಅದಾದ ಬಳಿಕ ವಾರ್ಷಿಕವಾಗಿ ತಪಾಸಣೆ ನಡೆಸಲಾಗುತ್ತದೆ.* ಇದು ಪೂರ್ವ-ತಪಾಸಣೆ ಮತ್ತು ದಾಖಲಾತಿ, ಚಾಲನೆ ಇತಿಹಾಸ ವಿಮರ್ಶೆ, ಕ್ರಿಮಿನಲ್ ಇತಿಹಾಸ ವಿಮರ್ಶೆ ಮತ್ತು ಇದೀಗ ಹೊಸ ಅಪರಾಧ ಸೂಚನೆಗಳನ್ನು (ಲಭ್ಯವಿರುವಲ್ಲಿ) ಒಳಗೊಂಡಿದೆ.
ರೆಸ್ಟೋರೆಂಟ್ ಆಹಾರ ಸುರಕ್ಷತೆ
ರೆಸ್ಟೋರೆಂಟ್ಗಳು ಎಲ್ಲಾ ಸಂಬಂಧಿತ ಪರವಾನಗಿ ಅಗತ್ಯತೆಗಳನ್ನು ಪೂರೈಸುತ್ತವೆ, ನಿಯಮಗಳನ್ನು ಅನುಸರಿಸುತ್ತವೆ ಮತ್ತು ಆರ್ಡರ್ ಪಿಕಪ್ಗಳಿಗಾಗಿ ಸುರಕ್ಷಿತ ಪ್ರದೇಶವನ್ನು ಒದಗಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
ಸಂಪರ್ಕ-ರಹಿತ ಡೆಲಿವರಿ
Uber Eats ಬಳಕೆದಾರರು "ಬಾಗಿಲ ಬಳಿ ಬಿಡಿ" ಡೆಲಿವರಿಗಳನ್ನು ಆಯ್ಕೆ ಮಾಡಬಹುದು ಮತ್ತು ಸಂಪರ್ಕ-ರಹಿತ ಡೆಲಿವರಿಯನ್ನು ಆಯ್ಕೆ ಮಾಡಬಹುದು.
ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.
*Uber ಪ್ಲಾಟ್‌ಫಾರ್ಮ್ ಅನ್ನು ಆ್ಯಕ್ಸೆಸ್ ಮಾಡುವ ಚಾಲಕರಿಗಾಗಿ ಟ್ಯಾಕ್ಸಿ ಮತ್ತು ಲಿಮೋಸಿನ್ ಆಯೋಗದಿಂದ ಚಾಲನೆ ಇತಿಹಾಸ ಪರಿಶೀಲನೆಗಳನ್ನು ನಡೆಸಲಾಗುವ ನ್ಯೂಯಾರ್ಕ್ ನಗರವನ್ನು ಹೊರತುಪಡಿಸಿ.