Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಓಡಾಡಲು ನಿರ್ಮಿಸಲಾದ ಪ್ಲಾಟ್‌ಫಾರ್ಮ್

ನಿಮ್ಮ ಕಂಪನಿಯು ತನ್ನ Uber for Business ನ ಮೂಲಕ ಪ್ರಯಾಣಿಸುವ ಮತ್ತು ಆಹಾರವನ್ನು ನೀಡುವ ವಿಧಾನವನ್ನು ಪರಿವರ್ತಿಸಿ.

ಉದ್ಯೋಗಿ ಮತ್ತು ಗ್ರಾಹಕರ ಅಗತ್ಯಗಳಿಗಾಗಿ ಏಕೈಕ ಪ್ಲಾಟ್‌ಫಾರ್ಮ್

  • ಬಿಸಿನೆಸ್ ಸಂಬಂಧಿತ ಪ್ರಯಾಣ

    ಕೇವಲ ಒಂದು ಟ್ಯಾಪ್ ಮೂಲಕ, ನಿಮ್ಮ ತಂಡವು ವಿಶ್ವದಾದ್ಯಂತ 70 ಕ್ಕೂ ಹೆಚ್ಚು ದೇಶಗಳಲ್ಲಿ ಸವಾರಿ ಮಾಡಲು ವಿನಂತಿಸಬಹುದು. ನಾವು ಅನುಮತಿಗಳನ್ನು ನಿಗದಿಸುವುದು ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವುದನ್ನು ಸುಲಭಗೊಳಿಸುತ್ತೇವೆ.

  • ಊಟ ಡೆಲಿವರಿ

    ನೌಕರರು ಮತ್ತು ಗ್ರಾಹಕರು 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡಲು ಅವಕಾಶ ಮಾಡಿಕೊಡಿ, ಹಾಗೆಯೇ ನೀವು ಬಜೆಟ್ ಮತ್ತು ನೀತಿಗಳನ್ನು ನಿಯಂತ್ರಿಸಿ.

  • ನಿಯಮಿತ ಪ್ರಯಾಣ ಪ್ರೋಗ್ರಾಂಗಳು

    ಕಚೇರಿಗಳಿಗೆ ಮತ್ತು ಕಚೇರಿಗಳಿಂದ ಮಾಡುವ ಸವಾರಿಗಳಿಗೆ ರಿಯಾಯಿತಿ ನೀಡುವ ಮೂಲಕ ನಿಮ್ಮ ಉದ್ಯೋಗಿಗಳಿಗೆ ಕೆಲಸಕ್ಕೆ ಬರುವುದಕ್ಕೆ ಸಹಾಯ ಮಾಡಿ. ನಾವು ಹೊಸ ಸುರಕ್ಷತಾ ಮಾನದಂಡಗಳನ್ನು ಪ್ರಾರಂಭಿಸಿದ್ದೇವೆ, ಮತ್ತು ಸ್ಥಳ, ದಿನದ ಸಮಯ ಮತ್ತು ಬಜೆಟ್‌ನಲ್ಲಿ ಮಿತಿಗಳನ್ನು ನಿಗದಿಪಡಿಸುವುದು ಬಹಳ ಸುಲಭ.

  • ಗ್ರಾಹಕರು ಸವಾರಿಗಳು

    ಗ್ರಾಹಕರು ಮತ್ತು ಅತಿಥಿಗಳು ಎಲ್ಲಿಗೆ ಹೋಗಬೇಕೋ ಅಲ್ಲಿ ಸಹಾಯ ಒದಗಿಸುವುದಕ್ಕೆ ವೋಚರ್‌ಗಳನ್ನು ವಿತರಿಸಿ. ಅಥವಾ ಸೆಂಟ್ರಲ್ ಡ್ಯಾಶ್‌ಬೋರ್ಡ್‌ನಿಂದ ಅವರಿಗೆ ಸವಾರಿಗಳನ್ನು ವಿನಂತಿಸಿ.

  • ಸ್ಥಳೀಯ ಡೆಲಿವರಿ

    ನಿಮಗೆ ಮತ್ತು ನಿಮ್ಮ ಗ್ರಾಹಕರಿಗೆ Uber ಮೂಲಕ ಬೇಡಿಕೆಯ ಮೇರೆಗೆ ಸ್ಥಳೀಯ ಡೆಲಿವರಿಗಳನ್ನು ವಿನಂತಿಸಿ. ಇದು ಸವಾರಿಯನ್ನು ವಿನಂತಿಸುವಷ್ಟೇ ಸುಲಭ ಮತ್ತು ಶೀಘ್ರವಾಗಿದೆ.

  • ಗ್ರಾಹಕರನ್ನು ಪಡೆದುಕೊಳ್ಳುವಿಕೆ

    ನಿಮ್ಮ ಅಂಗಡಿಗೆ ಜನದಟ್ಟಣೆಯನ್ನು ಹೆಚ್ಚಿಸಲು ಸಹಾಯ ಮಾಡುವುದಕ್ಕೆ ವೋಚರ್‌ಗಳು ಉತ್ತಮ ಪ್ರಚಾರ ಸಾಧನವಾಗಿದೆ. ಗ್ರಾಹಕರ ಮೆಚ್ಚುಗೆಯನ್ನು ತೋರಿಸಲು ಸಹ ಇದನ್ನು ಬಳಸಬಹುದು.

1/6

Uber for Business ಪ್ಲಾಟ್‌ಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿ

ನಿಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನಗಳು

Central ನೊಂದಿಗೆ ಸವಾರಿಗಳನ್ನು ಯೋಜಿಸಿ ಮತ್ತು ಕಳುಹಿಸಿ

ಗ್ರಾಹಕರು ಮತ್ತು ಅತಿಥಿಗಳ ಬಳಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ' ಕೂಡ ಸವಾರಿಗಳನ್ನು ವಿನಂತಿಸಲು ಸೆಂಟ್ರಲ್ ಡ್ಯಾಶ್‌ಬೋರ್ಡ್ ಬಳಸಿ.

ವೋಚರ್‌ಗಳೊಂದಿಗೆ ಸವಾರಿ ಮತ್ತು ಊಟವನ್ನು ಕವರ್ ಮಾಡಿ

ಹೊಸ ಗ್ರಾಹಕರನ್ನು ತಲುಪಿ ಮತ್ತು ಉದ್ಯೋಗಿಗಳು ಊಟಗಳಿಗಾಗಿ ಮತ್ತು ಸ್ಥಳಗಳಿಗೆ ತೆರಳುವುದಕ್ಕಾಗಿ ಬಳಸಬಹುದಾದ ವೋಚರ್‌ಗಳ ಮೂಲಕ ಅವರ ಕೆಲಸದ ಹುರುಪನ್ನು ಹೆಚ್ಚಿಸಿ.

ನಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಪ್ರೋಗ್ರಾಂಗಳನ್ನು ರಚಿಸಿ

ನಿಮ್ಮ ಟೀಮ್ ಅನ್ನು ನಿಮ್ಮ ವ್ಯಾಪಾರ ಖಾತೆಗೆ ಲಿಂಕ್ ಮಾಡುವ ಮೂಲಕ ಕಸ್ಟಮೈಸ್ ಮಾಡಿದ ವ್ಯವಹಾರ ಪ್ರಯಾಣ, ಊಟ ಮತ್ತು ನಿಯಮಿತ ಪ್ರಯಾಣ ಕಾರ್ಯಕ್ರಮಗಳಿಗೆ ಸೇರಲು ಅವರನ್ನು ಆಹ್ವಾನಿಸಿ.

ನಮ್ಮ ಪ್ಲಾಟ್‌ಫಾರ್ಮ್‌ನೊಂದಿಗೆ ಬೆಳೆಯುತ್ತಿರುವ ವ್ಯವಹಾರಗಳನ್ನು ಭೇಟಿ ಮಾಡಿ

Uber ನ API ನೊಂದಿಗೆ ಸಂಯೋಜಿಸುವ ಮೂಲಕ Ryder ಗ್ರಾಹಕರಿಗೆ 100,000 ಕ್ಕೂ ಹೆಚ್ಚು ಸವಾರಿಗಳನ್ನು ಕೋರಿದ್ದು, ಸಿಬ್ಬಂದಿ ಸಮಯ ಮತ್ತು ಸಂಪನ್ಮೂಲಗಳನ್ನು ಉತ್ತಮವಾಗಿ ನಿಯೋಜಿಸಲು ಕಂಪನಿಗೆ ಅನುವು ಮಾಡಿಕೊಡುತ್ತದೆ.

ಚೇಸ್ ಕೇಂದ್ರದಲ್ಲಿ ಅಭಿಮಾನಿಗಳ ಅನುಭವವನ್ನು elevate ಮಾಡುವುದಕ್ಕೆ ನವೀನ ಮಾರ್ಗಗಳನ್ನು ಕಂಡುಕೊಳ್ಳಲು The Golden State Warriors ಸಂಸ್ಥೆಯು Uber for Business ಜೊತೆ ಕೈಜೋಡಿಸಿದೆ.

Twenty Four Seven Hotels ತಮ್ಮ ಸಾಂಪ್ರದಾಯಿಕ ಸಾರಿಗೆ ಸೇವೆಯನ್ನು ಬಳಸುವ ಬದಲು ಸವಾರಿಗಳನ್ನು ವಿನಂತಿಸಲು Uber for Business ಅನ್ನು ಆಶ್ರಯಿಸಿದವು ಮತ್ತು ತಮ್ಮ ಅತಿಥಿಗಳ ಮೇಲೆ ಶಾಶ್ವತವಾದ ಪ್ರಭಾವ ಬೀರಿದವು.

ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಸುಧಾರಿತ ವೈಶಿಷ್ಟ್ಯಗಳು

ನಿಮ್ಮ ಪ್ರೋಗ್ರಾಂಗಳನ್ನು ಕಸ್ಟಮೈಸ್ ಮಾಡಿ

ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ಸವಾರಿ ಮತ್ತು ಊಟದ ಮಿತಿಗಳನ್ನು ಹೊಂದಿಸಿ. ಒಂದೇ ಕಂಪನಿಯ ಖಾತೆಗೆ ಅಥವಾ ಅವರ ಸ್ವಂತ ವೈಯಕ್ತಿಕ ಕಾರ್ಡ್‌ಗಳಿಗೆ ಶುಲ್ಕ ವಿಧಿಸುವುದಕ್ಕೂ ಕೂಡ ನೀವು ನಿಮ್ಮ ಟೀಮ್ ಅನ್ನು ಅನುಮತಿಸಬಹುದು.

ವೆಚ್ಚವನ್ನು ಸ್ವಯಂಚಾಲಿತಗೊಳಿಸಿ

ನಾವು SAP Concur ನಂತಹ ಪ್ರಮುಖ ಖರ್ಚು ವೆಚ್ಚ ನಮೂದಿಸುವ ಸಾಫ್ಟ್‌ವೇರ್ ಪೂರೈಕೆದಾರರೊಂದಿಗೆ ಸಂಯೋಜನೆಗೊಳ್ಳುತ್ತೇವೆ ಆದ್ದರಿಂದ ಖರ್ಚುಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಬಹುದು. ಯಾವುದೇ ಉದ್ಯೋಗಿಗಳು ರಸೀತಿಗಳನ್ನು ಹುಡುಕಿಕೊಂಡು ಕೂರುವ ಅವಶ್ಯಕತೆಯಿಲ್ಲ.

ಆಳವಾದ ಒಳನೋಟಗಳನ್ನು ಪಡೆಯಿರಿ

ನಿಮ್ಮ ತಂಡದ ಖರ್ಚು ಮತ್ತು ಬಳಕೆಯಲ್ಲಿ ನಾವು ಸಾಟಿಯಿಲ್ಲದ ಪಾರದರ್ಶಕತೆಯನ್ನು ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಪ್ರೋಗ್ರಾಂ ಅನ್ನು ಇನ್ನೂ ಉತ್ತಮಗೊಳಿಸಬಹುದು ಮತ್ತು ನಿಮ್ಮ ತಳಮಟ್ಟದ ಕಾರ್ಯಗಳನ್ನು ಸುಧಾರಿಸಬಹುದು.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو