ಗ್ರಾಹಕರು ಮತ್ತು ಉದ್ಯೋಗಿಗಳಿಗಾಗಿ ಗಿಫ್ಟ್ ಕಾರ್ಡುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ
ಗಿಫ್ಟ್ ಕಾರ್ಡುಗಳು ನಿಮ್ಮ ತಂಡಕ್ಕೆ ರಿವಾರ್ಡ್ ನೀಡಲು ಮತ್ತು ನಿಮ್ಮ ವ್ಯವಹಾರಕ್ಕೆ ಮುಖ್ಯವಾದ ಯಾರಿಗಾದರೂ ಧನ್ಯವಾದ ಹೇಳಲು ಉತ್ತಮ ಮಾರ್ಗವಾಗಿರುತ್ತದೆ.
ಗಿಫ್ಟ್ ಕಾರ್ಡುಗಳನ್ನು ವೋಚರ್ಗಳ ಜೊತೆಗೆ ಹೋಲಿಕೆ ಮಾಡಿ
ನೀವು ಕೆಲವು ರೀತಿಯಲ್ಲಿ ಸವಾರಿಗಳು ಮತ್ತು ಊಟಗಳ ಶುಲ್ಕಗಳನ್ನು ಭರಿಸಬಹುದು. ಯಾವ ವಿಧಾನವು ನಿಮಗೆ ಸೂಕ್ತವಾಗಿದೆ ಎನ್ನುವುದನ್ನು ಕಂಡುಕೊಳ್ಳಿ.
- ಅವಲೋಕನ
ಗಿಫ್ಟ್ ಕಾರ್ಡ್ಗಳು: ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಸೂಕ್ತವೆನಿಸುವಂತೆ ಬಳಸಲು ಅವರಿಗೆ ಕ್ರೆಡಿಟ್ ನೀಡಲು Uber ಕ್ರೆಡಿಟ್ ಖರೀದಿಸಿ.
ವೋಚರ್ಗಳು: ನೀವು Uber ಕ್ರೆಡಿಟ್ ಅನ್ನು ಉದ್ಯೋಗಿಗಳು ಅಥವಾ ಗ್ರಾಹಕರಿಗೆ ಮಾತ್ರ ವಿತರಿಸುತ್ತೀರಿ ಮತ್ತು ತೆಗೆದುಕೊಂಡ ಸವಾರಿಗಳು ಅಥವಾ ಊಟದ ಆರ್ಡರ್ ಬಿಲ್ಗಳನ್ನು ಮಾತ್ರ ಪಾವತಿಸುತ್ತೀರಿ. ನೀವು ಮಾನದಂಡಗಳನ್ನು ಸಹ ನಿಯಂತ್ರಿಸಬಹುದು ಹಾಗೂ ಕ್ರೆಡಿಟ್ ಮೊತ್ತವನ್ನು ಹೇಗೆ ಬಳಸಲಾಗಿದೆ ಎನ್ನುವುದನ್ನು ಸಹ ಟ್ರ್ಯಾಕ್ ಮಾಡಬಹುದು.
- ಇದು ಹೇಗೆ ಕೆಲಸ ಮಾಡುತ್ತದೆ?
ಗಿಫ್ಟ್ ಕಾರ್ಡ್ಗಳು: ನೀವು ಸ್ವೀಕೃತಿದಾರರಿಗೆ ಪಠ್ಯ, ಇಮೇಲ್ ಅಥವಾ ಮುದ್ರಣದ ಮೂಲಕ ಡಿಜಿಟಲ್ ಕಾರ್ಡ್ಗಳನ್ನು ಕಳುಹಿಸಬಹುದು—ಹೇಗೆ ವಿತರಿಸಬೇಕೆಂಬುದನ್ನು ನೀವು ನಿರ್ಧರಿಸಬಹುದು. ನಮ್ಮ ಮಾರಾಟ ತಂಡದ ಮೂಲಕ ಭೌತಿಕ ಗಿಫ್ಟ್ ಕಾರ್ಡುಗಳು ಲಭ್ಯವಿರುತ್ತವೆ. ಕಾರ್ಡ್ಗಳನ್ನು ಖರೀದಿಸಿ ಇಲ್ಲಿ.
ವೋಚರ್ಗಳು: ನೀವು ಸ್ವೀಕೃತಿದಾರರಿಗೆ Uber ಕ್ರೆಡಿಟ್ ವಿತರಿಸಿದಲ್ಲಿ, ಅವಧಿ ಮೀರುವ ದಿನಾಂಕಗಳು, ಸ್ಥಳ ನಿರ್ಬಂಧಗಳು ಮತ್ತು/ಅಥವಾ ಕ್ರೆಡಿಟ್ ಮೊತ್ತವನ್ನು ಬಳಸಿದ ದಿನ ಹಾಗೂ ಸಮಯದಂತಹ ನಿಯಂತ್ರಣಗಳನ್ನು ಅದಕ್ಕೆ ಹೊಂದಿಸಬಹುದು. ಸ್ವೀಕೃತಿದಾರರು ತಮ್ಮ Uber ಅಥವಾ Uber Eats ಆ್ಯಪ್ನಿಂದ ಸವಾರಿಗಳು ಅಥವಾ ಊಟಗಳನ್ನು ವಿನಂತಿಸಬಹುದು ಮತ್ತು ತಮ್ಮ ಖರೀದಿಯ ಮೇಲೆ ವೋಚರ್ ಮೌಲ್ಯವನ್ನು ಅನ್ವಯಿಸಬಹುದು. ನೀವು ಸೈನ್ ಅಪ್ ಮಾಡಬಹುದು ಇಲ್ಲಿ.
- ನಾನು ಹಣಪಾವತಿಸುವ ಬಗೆ ಹೇಗೆ?
ಗಿಫ್ಟ್ ಕಾರ್ಡ್ಗಳು: ಖರೀದಿಯ ಸಮಯದಲ್ಲಿ ನೀವು ಗಿಫ್ಟ್ ಕಾರ್ಡ್ ಮೊತ್ತವನ್ನು ಸಂಪೂರ್ಣ ಪ್ರಮಾಣದಲ್ಲಿ ಪಾವತಿಸುತ್ತೀರಿ.
ವೋಚರ್ಗಳು: ಬಳಕೆದಾರರು ವೋಚರ್ ರಿಡೀಮ್ ಮಾಡಿದಾಗ ಮತ್ತು ಸವಾರಿ ಅಥವಾ ಊಟದ ಆರ್ಡರ್ಗಳ ಬಿಲ್ ಪಾವತಿಸಲು ಅನ್ವಯಿಸಿದಾಗ ಮಾತ್ರವೇ ನೀವು ಪಾವತಿಸುತ್ತೀರಿ. ಉದಾಹರಣೆಗೆ, ನೀವು ವೋಚರ್ಗಳಲ್ಲಿ $100 ವಿತರಿಸಿದ್ದು ಅದರಲ್ಲಿ $50 ಮಾತ್ರ ಬಳಸಿದ್ದಲ್ಲಿ, ನೀವು $50 ಪಾವತಿಸುತ್ತೀರಿ.
- ವ್ಯವಹಾರಗಳಲ್ಲಿ ಈ ಉತ್ಪನ್ನಗಳನ್ನು ಹೇಗೆ ಬಳಸಲಾಗುತ್ತದೆ?
ಗಿಫ್ಟ್ ಕಾರ್ಡ್ಗಳು: ಕಂಪನಿಗಳು ಗಿಫ್ಟ್ ಕಾರ್ಡುಗಳನ್ನು ಬಳಸುವ ಕೆಲವು ವಿಧಾನಗಳೆಂದರೆ: ಉದ್ಯೋಗಿಗಳಿಗೆ ವರ್ಷಾಂತ್ಯದ ಅಥವಾ ರಜಾದಿನದ ಗಿಫ್ಟ್ಗಳನ್ನು ನೀಡುವುದು, ಕಾರ್ಪೊರೇಟ್ ಗಿಫ್ಟ್ಗಳು ಅಥವಾ ಗ್ರಾಹಕರ ಧನ್ಯವಾದ ಸಂದೇಶಗಳು ಮತ್ತು ಬಹುಮಾನಗಳು ಅಥವಾ ಕೊಡುಗೆಗಳು.
ವೋಚರ್ಗಳು: ಕಂಪನಿಗಳು ವೋಚರ್ಗಳನ್ನು ಬಳಸುವ ಕೆಲವು ವಿಧಾನಗಳೆಂದರೆ, ವರ್ಚುವಲ್ ಈವೆಂಟ್ನಲ್ಲಿ ಭಾಗವಹಿಸುವವರಿಗೆ ಊಟಗಳನ್ನು ಆರ್ಡರ್ ಮಾಡುವುದು, ತಮ್ಮ ವ್ಯಾಪಾರದ ಸ್ಥಳಕ್ಕೆ ಆಗಮಿಸುವ ಗ್ರಾಹಕರ ಸವಾರಿಗಳ ವೆಚ್ಚಗಳನ್ನು ಭರಿಸುವುದು ಮತ್ತು ತಮ್ಮ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ರಿವಾರ್ಡ್ ಆಗಿ ರಿಯಾಯಿತಿಯ ಊಟದ ಸೌಲಭ್ಯವನ್ನು ನೀಡುವುದು.
ಗಿಫ್ಟ್ ಕಾರ್ಡ್ಗಳನ್ನು ಖರೀದಿಸುವುದು ಸುಲಭ, ಬಳಸುವುದು ಅಷ್ಟೇ ಸರಳ
ಯಾವುದೇ ಸೇವಾ ಶುಲ್ಕಗಳು ಅಥವಾ ಮುಕ್ತಾಯ ದಿನಾಂಕಗಳಿಲ್ಲ
ನೀವು ಒಂದು ಪೈಸೆ ಹೆಚ್ಚುವರಿ ಹಣವನ್ನು ಪಾವತಿಸುವುದಿಲ್ಲ, ಮತ್ತು ಸ್ವೀಕರಿಸುವವರು ಪ್ರತಿ ಪೆನ್ನಿಯನ್ನು ಉಳಿಸಿಕೊಳ್ಳುತ್ತಾರೆ.
ಡಿಜಿಟಲ್ ಅಥವಾ ಭೌತಿಕ ಕಾರ್ಡ್ಗಳು
ಪಠ್ಯ, ಇಮೇಲ್ ಅಥವಾ ಮುದ್ರಣ ಪ್ರತಿಗಳ ಮೂಲಕ ವರ್ಚುವಲ್ ಕಾರ್ಡ್ಗಳನ್ನು ನೀಡಿ ಅಥವಾ ನೀವೇ ಡೆಲಿವರಿ ಮಾಡಲು ಭೌತಿಕ ಕಾರ್ಡ್ಗಳನ್ನು ಸ್ವೀಕರಿಸಿ.
ಊಟ ಮತ್ತು ಸವಾರಿಗಳಿಗೆ ಕ್ರೆಡಿಟ್
ಸಾವಿರಾರು ನಗರಗಳಲ್ಲಿ ಸವಾರಿಗಳು ಮತ್ತು ರೆಸ್ಟೋರೆಂಟ್ಗಳಲ್ಲಿ, ಸ್ವೀಕೃತಿದಾರರು ತಮ್ಮ ಕ್ರೆಡಿಟ್ ಅನ್ನು ಹೇಗೆ ಬಳಸಬೇಕೆಂದು ಆಯ್ಕೆ ಮಾಡುತ್ತಾರೆ.
ವಿವಿಧ ಕರೆನ್ಸಿಗಳಲ್ಲಿ ಲಭ್ಯವಿದೆ
ಗಿಫ್ಟ್ ಕಾರ್ಡುಗಳನ್ನು ಹಲವಾರು ಕರೆನ್ಸಿಗಳಲ್ಲಿ ಪುನಃ ಪಡೆದುಕೊಳ್ಳಬಹುದು, ಇದು ಜಾಗತಿಕ ತಂಡಗಳು ಮತ್ತು ಪ್ರಯಾಣಿಕರಿಗೆ ಅತ್ಯುತ್ತಮ ವಿಧಾನವಾಗಿದೆ.
ಹೊಂದಿಕೊಳ್ಳುವ, ಬಲ್ಕ್ ಡೆಲಿವರಿ
ಬಲ್ಕ್ ಫೈಲ್ ಮೂಲಕ ನೀವೇ ಡೆಲಿವರಿ ಮಾಡಿ ಅಥವಾ ನಮ್ಮ ಗಿಫ್ಟ್ ಕಾರ್ಡ್ ಇಮೇಲ್ ಬಳಸಿ.
ಕಂಪನಿಗಳು ನಮ್ಮ ಗಿಫ್ಟ್ ಕಾರ್ಡ್ಗಳನ್ನು ಹೇಗೆ ಬಳಸುತ್ತವೆ
ಉದ್ಯೋಗಿಗಳ ವಿಶೇಷ ಅನುಕೂಲಗಳು ಮತ್ತು ನೈತಿಕ ಸ್ಥೈರ್ಯ
ಉತ್ತಮ ಕೆಲಸ ಮಾಡಿದ ಉದ್ಯೋಗಿಗಳನ್ನು ಗುರುತಿಸಿ—ಸ್ಥೈರ್ಯ ಮತ್ತು ಕಾರ್ಯಕ್ಷಮತೆಯನ್ನು ಪ್ರೋತ್ಸಾಹಿಸಿ.
ಖರೀದಿಗೆ ಗ್ರಾಹಕ ರಿವಾರ್ಡ್ಗಳು
ಹೊಸ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಗಿಫ್ಟ್ ಕಾರ್ಡುಗಳನ್ನು ನೀಡುವ ಮೂಲಕ ನಿಮ್ಮ ಮಾರ್ಕೆಟಿಂಗ್ ಪ್ರಚಾರಗಳಿಗೆ ಪ್ರಮೋಷನ್ ಸೇರಿಸಿ.
ಗ್ರಾಹಕ ಸೇವೆಯ ಸರಕುಗಳು
ವಿಶೇಷ ಗಿಫ್ಟ್ಗಳನ್ನು ನೀಡುವ ಮೂಲಕ ಗ್ರಾಹಕರ ನಿಷ್ಠೆಯನ್ನು ಹೆಚ್ಚಿಸಿ, ಆ ಮೂಲಕ ಅವರನ್ನು ನೀವು ಪರಿಗಣಿಸಿದ್ದೀರಿ ಎನ್ನುವುದನ್ನು ತಿಳಿಸಿ.
ವರ್ಚುವಲ್ ಈವೆಂಟ್ಗಳಿಗೆ ಊಟಗಳು
ವರ್ಚುವಲ್ ಸಮ್ಮೇಳನಗಳು, ಸಭೆಗಳು ಅಥವಾ ವೆಬ್ನಾರ್ಗಳ ಸಮಯದಲ್ಲಿ ಪಾಲ್ಗೊಳ್ಳುವವರನ್ನು ಚೆನ್ನಾಗಿ ಪೋಷಿಸಿ.
ಸಮೀಕ್ಷೆಯ ಪ್ರತಿಕ್ರಿಯೆಗಾಗಿ ಪ್ರೋತ್ಸಾಹ ಧನಗಳು
Uber Cash ಅಥವಾ Uber Credit ಪ್ರೋತ್ಸಾಹ ಧನದೊಂದಿಗೆ ಪ್ರತಿಕ್ರಿಯೆ ದರಗಳನ್ನು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸಿ.
"Uber Eats ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ, ಉತ್ತರ ಅಮೆರಿಕಾದ Coca-Cola ಕಂಪನಿಯ ಉದ್ಯೋಗಿಗಳಿಗೆ ನಾವು $100 ಗಿಫ್ಟ್ ಕಾರ್ಡಗನ್ನು ನೀಡುವುದು ಮಾತ್ರವಲ್ಲದೇ, ಆದರ ಆರ್ಥಿಕತೆಗೆ ಮತ್ತು ಊಟ ಡೆಲಿವರಿ ಮತ್ತು ರೆಸ್ಟೋರೆಂಟ್ ಕೈಗಾರಿಕೆಗಳಿಗೆ ಸ್ವಲ್ಪ ಮಟ್ಟಿಗಿನ ಸಂಪನ್ಮೂಲವನ್ನು ಪೂರೈಸುವುದಕ್ಕೂ ಕೂಡ ಸಾಧ್ಯವಾಯಿತು.”
Brian Sappington, ಮುಖ್ಯ ಡಿಜಿಟಲ್ ಇಂಟಿಗ್ರೇಷನ್ ಅಧಿಕಾರಿ, ಕೋಕಾ-ಕೋಲಾ, ಉತ್ತರ ಅಮೇರಿಕಾ
"COVID-19 ನ ಕ್ಷಿಪ್ರ ವಿಕಾಸದ ಪರಿಣಾಮವಾಗಿ ಅಭೂತಪೂರ್ವ NBA ವಿರಾಮ ಉಂಟಾಗುತ್ತದೆ, ನಮ್ಮ ನಿಷ್ಠಾವಂತ ಸದಸ್ಯರು ಮತ್ತು ಪಾರ್ಟ್ನರ್ ಜೊತೆಗೆ ಸಂಪರ್ಕದಲ್ಲಿರಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ. Uber ಗಿಫ್ಟ್ ಕಾರ್ಡುಗಳನ್ನು ಕಳುಹಿಸುವುದು ಸೂಕ್ತ ಪರಿಹಾರವಾಗಿದೆ, ಮತ್ತು ಅವುಗಳನ್ನು ಹೇಗೆ ಸ್ವೀಕರಿಸಲಾಗಿದೆ ಎಂಬುದನ್ನು ನೋಡುವುದಕ್ಕೆ ನಾವು ಕುತೂಹಲಭರಿತರಾಗಿದ್ದೇವೆ. ”
Brandon Schneider, ಮುಖ್ಯ ಕಂದಾಯ ಅಧಿಕಾರಿ, ಗೋಲ್ಡನ್ ಸ್ಟೇಟ್ ವಾರಿಯರ್ಸ್
"ನಮ್ಮ ತಂಡವು ಪ್ರತ್ಯೇಕವಾಗಿರುವಾಗ, ಸಂಪರ್ಕದಲ್ಲಿರಲು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನನ್ನ ಮೆಚ್ಚುಗೆಯನ್ನು ತೋರಿಸಲು ನಾನು ಒಂದು ಮಾರ್ಗವನ್ನು ಹುಡುಕ ಬಯಸುತ್ತೇನೆ. ಪ್ರತಿಯೊಬ್ಬರೂ Uber Eats ಬಗ್ಗೆ ಪರಿಚಿತರಾಗಿದ್ದಾರೆ, ಮತ್ತು ಗಿಫ್ಟ್ ಕಾರ್ಡುಗಳು ತಕ್ಷಣ ಅವರಿಗೆ ದೊಡ್ಡ ಧನ್ಯವಾದಗಳನ್ನು ತಿಳಿಸುತ್ತವೆ.”
Ashton Lubman, ಫ್ರ್ಯಾಂಚೈಸ್ ಪಾರ್ಟ್ನರ್, 1-800-GOT-JUNK?
ಆಗಾಗ ಕೇಳಲಾಗುವ ಪ್ರಶ್ನೆಗಳು
- ಸ್ವೀಕೃತಿದಾರರು Uber ಮೂಲಕ ಲಭ್ಯವಿರುವ ಪ್ರತಿಯೊಂದಕ್ಕೂ ಗಿಫ್ಟ್ ಕಾರ್ಡುಗಳನ್ನು ಬಳಸಬಹುದೇ?
ಹೌದು, ಗಿಫ್ಟ್ ಕಾರ್ಡ್ಗಳನ್ನು ಖಾತೆಗೆ ಅನ್ವಯಿಸಿದ ನಂತರ ಆ್ಯಪ್ನ ವಾಲೆಟ್ ವಿಭಾಗದಲ್ಲಿ Uber Cash ಅಥವಾ Uber Credit ಆಗಿ ಬದಲಾಗುತ್ತವೆ ಮತ್ತು ಈ ಮೊತ್ತವನ್ನು Uber ಸವಾರಿಗಳಿಗಾಗಿ ಅಥವಾ Uber Eats ನಲ್ಲಿ ಆರ್ಡರ್ ಮಾಡುವ ಊಟದ ಬಿಲ್ಗಳನ್ನು ಪಾವತಿಸಲು ಬಳಸಬಹುದಾಗಿದೆ.
- ಗಿಫ್ಟ್ ಕಾರ್ಡ್ಗಳು ತೆರಿಗೆಗಳು ಮತ್ತು ಶುಲ್ಕಗಳನ್ನು ಒಳಗೊಳ್ಳುತ್ತವೆಯೇ?
ಹೌದು, Uber ಗಿಫ್ಟ್ ಕಾರ್ಡುಗಳು ಯಾವುದೇ Uber ವಹಿವಾಟಿನ ತೆರಿಗೆಗಳು, ಶುಲ್ಕಗಳು ಅಥವಾ ಟಿಪ್ಸ್ ಅನ್ನು ಒಳಗೊಂಡಿರುತ್ತದೆ.
- ಗಿಫ್ಟ್ ಕಾರ್ಡ್ಗಳು ಎಲ್ಲಿ ಲಭ್ಯವಿದೆ?
ಗಿಫ್ಟ್ ಕಾರ್ಡುಗಳು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಭಾರತ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಲಭ್ಯವಿದೆ. ಬೆಂಬಲಿತ ಕರೆನ್ಸಿಗಳಲ್ಲಿ AUD, BRL, CAD, INR, MXN, ZAF, GBP, ಮತ್ತು USD ಸೇರಿವೆ.
- ಗಿಫ್ಟ್ ಕಾರ್ಡ್ಗಳು ಭೌತಿಕವೇ ಅಥವಾ ಡಿಜಿಟಲ್ ಆಗಿದೆಯೇ?
ಗಿಫ್ಟ್ ಕಾರ್ಡ್ಗಳು ಡೀಫಾಲ್ಟ್ ಆಗಿ ಡಿಜಿಟಲ್ ಆಗಿರುತ್ತವೆ (ಭೌತಿಕವಲ್ಲ). ಭೌತಿಕ ಗಿಫ್ಟ್ ಕಾರ್ಡ್ಗಳು US ನಲ್ಲಿ ಮಾತ್ರವೇ ಲಭ್ಯವಿದೆ ಹಾಗೂ ಅದನ್ನು ನಮ್ಮ ಮಾರಾಟ ತಂಡದ ಮೂಲಕ ಖರೀದಿಸಬೇಕು.
- ನಾನು ಗಿಫ್ಟ್ ಕಾರ್ಡುಗಳನ್ನು ನೀಡುವುದು ಹೇಗೆ?
ಸ್ವೀಕೃತಿದಾರರು ಪಠ್ಯ, ಇಮೇಲ್ ಅಥವಾ ಮುದ್ರಣದ ಮೂಲಕ ಡಿಜಿಟಲ್ ಕಾರ್ಡ್ಗಳನ್ನು ಸ್ವೀಕರಿಸಬಹುದು—ಹೇಗೆ ವಿತರಿಸಬೇಕೆಂಬುದನ್ನು ನೀವು ನಿರ್ಧರಿಸಿ. ನಾವು ಹೆವಿ ಲಿಫ್ಟಿಂಗ್ ಮಾಡಬಹುದು ಮತ್ತು ಪ್ರತಿ ಗಿಫ್ಟ್ ಕೋಡ್ ಅನ್ನು ವೈಯಕ್ತಿಕ ಸ್ವೀಕೃತಿದಾರರಿಗೆ ಇಮೇಲ್ ಮಾಡಬಹುದು, ಅಥವಾ ಅವುಗಳನ್ನು ನೀವೇ ಡೆಲಿವರಿ ಮಾಡುವ ಸಲುವಾಗಿ ಭೌತಿಕ ಗಿಫ್ಟ್ ಕಾರ್ಡುಗಳನ್ನು ಸ್ವೀಕರಿಸಲು ನೀವು ಆಯ್ಕೆ ಮಾಡಬಹುದು.
- ನಾನು ಗಿಫ್ಟ್ ಕಾರ್ಡುಗಳಿಗೆ ಪಾವತಿಸುವುದು ಹೇಗೆ?
ಆಯ್ದ ಮಾರುಕಟ್ಟೆಗಳಲ್ಲಿ ನೀವು ACH/wire ವರ್ಗಾವಣೆ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಆಯ್ಕೆ ಮಾಡಬಹುದು. ನಿಮ್ಮ ಬ್ಯಾಂಕಿಂಗ್ ಸಂಸ್ಥೆಯು ತಂತಿ ವರ್ಗಾವಣೆ ಶುಲ್ಕವನ್ನು ಅನ್ವಯಿಸಬಹುದು, ಅದನ್ನು ಭರಿಸುವ ಜವಾಬ್ದಾರಿಯನ್ನು ನೀವು ಹೊಂದಿರುತ್ತೀರಿ.
- ಯಾವ ಯಾವ ಮೌಲ್ಯಗಳಲ್ಲಿ ಲಭ್ಯವಿದೆ?
ಪ್ರತಿ ದೇಶದಲ್ಲಿ ಕನಿಷ್ಠ ಮತ್ತು ಗರಿಷ್ಠ ಗಿಫ್ಟ್ ಕಾರ್ಡ್ ಮೊತ್ತಗಳಿರುತ್ತವೆ. ಲಭ್ಯವಿರುವ ಯಾವುದೇ ಕರೆನ್ಸಿಗಳಲ್ಲಿ ನಾವು ಡಿಜಿಟಲ್ ಗಿಫ್ಟ್ ಕೋಡ್ಗಳನ್ನು ಸಂಪೂರ್ಣ ಪ್ರಮಾಣದಲ್ಲಿ ರಚಿಸಬಹುದು. ದಯವಿಟ್ಟು ನಮ್ಮ ಮಾರಾಟ ತಂಡದೊಂದಿಗೆ ಮೌಲ್ಯಗಳ ಅವಶ್ಯಕತೆಗಳನ್ನು ಚರ್ಚಿಸಿ.
ಗಿಫ್ಟ್ ಕಾರ್ಡುಗಳೊಂದಿಗೆ ಪ್ರಾರಂಭಿಸಿ
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು
ಗ್ರಾಹಕ ಬೆಂಬಲ