Please enable Javascript
Skip to main content

ಸಂದೀಪ್ ಜೈನ್

ಮುಖ್ಯ ಉತ್ಪನ್ನ ಅಧಿಕಾರಿ ಮತ್ತು ಎಸ್‌ವಿಪಿ ಇಂಜಿನಿಯರಿಂಗ್

ಸಂದೀಪ್ ಜೈನ್ ಅವರು ಮುಖ್ಯ ಉತ್ಪನ್ನ ಅಧಿಕಾರಿ ಮತ್ತು SVP ಎಂಜಿನಿಯರಿಂಗ್‌ ಆಗಿದ್ದಾರೆ, ಎಂಜಿನಿಯರಿಂಗ್, ಉತ್ಪನ್ನ ನಿರ್ವಹಣೆ, ವಿನ್ಯಾಸ, ಅನ್ವಯಿಕ/ಡೇಟಾ ವಿಜ್ಞಾನ ಮತ್ತು ಉತ್ಪನ್ನ ಕಾರ್ಯಾಚರಣೆಗಳು ಸೇರಿದಂತೆ ಕಂಪನಿಯ ಜಾಗತಿಕ ಮೊಬಿಲಿಟಿ ಮತ್ತು ಡೆಲಿವರಿ ಉತ್ಪನ್ನಗಳ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ.

Uber ಗೆ ಸೇರುವ ಮೊದಲು, ಸಂದೀಪ್ ಅವರು ಶೋಧ ಜಾಹೀರಾತು ತಂಡದಲ್ಲಿ Google ನಲ್ಲಿ ಉತ್ಪನ್ನ ನಿರ್ವಹಣೆ ಉಪಾಧ್ಯಕ್ಷರಾಗಿದ್ದರು, ಅಲ್ಲಿ ಅವರು ಉತ್ತಮ ಸೇವೆ, ದರ ಮತ್ತು ಬಳಕೆದಾರರ ಅನುಭವ ಸೇರಿದಂತೆ ಬಳಕೆದಾರರ ವಾಣಿಜ್ಯ ಉದ್ದೇಶವನ್ನು ಜಾಹೀರಾತುದಾರರೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ನಕ್ಷೆಗಳು ಮತ್ತು ಶೋಧ ಎರಡರಲ್ಲೂ ಸ್ಥಳೀಯ ಜಾಹೀರಾತುದಾರರೊಂದಿಗೆ ಬಳಕೆದಾರರನ್ನು ಸಂಪರ್ಕಿಸುವ ಮೂಲಕ ಸ್ಥಳೀಯ ವಾಣಿಜ್ಯ ವ್ಯವಹಾರವನ್ನು ಸಕ್ರಿಯಗೊಳಿಸುವಲ್ಲಿ ಸಂದೀಪ್ ಅವರು ಕೆಲಸ ಮಾಡಿದ್ದಾರೆ. ಅವರ ವೃತ್ತಿಜೀವನದ ಆರಂಭದಲ್ಲಿ, ಸಂದೀಪ್ ಅವರು Zynga ದಲ್ಲಿ ಉಪಾಧ್ಯಕ್ಷರಾಗಿದ್ದರು ಮತ್ತು $100 ಬಿಲಿಯನ್ ಉದ್ಯಮ ಮೌಲ್ಯವನ್ನು ಹೊಂದಿರುವ ಸಾರ್ವಜನಿಕ ಕಂಪನಿಯಾದ FIS ಸ್ವಾಧೀನಪಡಿಸಿಕೊಂಡ ಟೆಕ್ ಸ್ಟಾರ್ಟ್ಅಪ್‌ ಒಂದರ ಸ್ಥಾಪಕರಾಗಿದ್ದಾರೆ.

ಸಂದೀಪ್ ಅವರು ಯುಸಿ ಬರ್ಕ್‌ಲೀ ಇಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚಲರ್ ಆಫ್ ಸೈನ್ಸ್ ಪದವಿ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಬೇಕರ್ ಸ್ಕಾಲರ್ ಆಗಿದ್ದರು.