2021 ಜನರು ಮತ್ತು ಸಂಸ್ಕೃತಿ ವರದಿ
ಕ್ರಿಯೆಯ ವರ್ಷ
Uber ನ ಆರಂಭಿಕ ದಿನಗಳಿಂದಲೂ, “ಒಂದು ಬಟನ್ ಟ್ಯಾಪ್ ಮಾಡಿ ಮತ್ತು ಸವಾರಿ ಮಾಡಿ” ಎಂಬ ಸರಳ ಸಂವಹನವು ಜನರ ಜೀವನವನ್ನು ಬದಲಿಸಿದೆ. ಮತ್ತು ಈಗ ಅದು ಹೆಚ್ಚು ಆಳವಾದ ಸಂಗತಿಯಾಗಿದೆ. Uber ನಲ್ಲಿ, ಜಗತ್ತು ಉತ್ತಮವಾಗಿ ಪ್ರಯಾಣಿಸುವ ವಿಧಾನವನ್ನು ಮರುರೂಪಿಸಲು ನಾವು ಕೆಲಸ ಮಾಡುತ್ತೇವೆ. ಪ್ರತಿಯೊಬ್ಬರೂ ದೈಹಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸುವ ಅಧಿಕಾರ ಹೊಂದಿರಬೇಕು ಎಂದು ನಾವು ನಂಬುತ್ತೇವೆ. ಇದಕ್ಕಾಗಿ, ನಾವು ವರ್ಣಭೇದ ನೀತಿಯ ವಿರುದ್ಧ ಹೋರಾಡಬೇಕು ಮತ್ತು ನಮ್ಮ ಕಂಪನಿಯ ಒಳಗೆ ಮತ್ತು ನಮ್ಮ ವೇದಿಕೆಯಲ್ಲಿ ಪೂರ್ಣ ಸಮಾನತೆಯ ಚಾಂಪಿಯನ್ ಆಗಬೇಕು. ನಮ್ಮ ಜಾಗತಿಕ ವ್ಯಾಪ್ತಿ, ನಮ್ಮ ತಂತ್ರಜ್ಞಾನ, ನಮ್ಮ ಡೇಟಾ ಹಾಗೂ ಅತ್ಯಂತ ಪ್ರಮುಖವಾಗಿ ನಮ್ಮ ಧ್ವನಿಯನ್ನು ನಾವು ಬಳಸಿಕೊಂಡು, ಸುರಕ್ಷಿತ ಮತ್ತು ಹೆಚ್ಚು ಒಳಗೊಂಡಿರುವ ಕಂಪನಿಯನ್ನು ರಚಿಸಬೇಕು ಮತ್ತು ನಾವು ಸೇವೆ ಸಲ್ಲಿಸುವ ಎಲ್ಲ ಸಮುದಾಯಗಳಿಗೆ ಪ್ರಬಲ ಪಾಲುದಾರನಾಗಬೇಕು.
2020 ನೇ ವರ್ಷ ಅತ್ಯಂತ ಸವಾಲಿನದಾಗಿತ್ತು. ಸಾಂಕ್ರಾಮಿಕ ರೋಗದಿಂದ ಮತ್ತು ಜನಾಂಗೀಯತೆಯ ಕುರಿತ ಜಾಗತಿಕ ವಿಷಯಗಳಿಂದಾಗಿ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಬೀರಿದ ಪರಿಣಾಮದಿಂದ Uber ಮತ್ತು ಸಮುದಾಯ ವ್ಯಾಪಕವಾಗಿ ಸಿಕ್ಕಿಹಾಕಿಕೊಂಡಿತ್ತು. ಆಘಾತಕಾರಿ ಪರಿಣಾಮವು ಸಮಾನ ಪ್ರಮಾಣದಲ್ಲಿರಲಿಲ್ಲ. ಸಮಾಜದಲ್ಲಿ ಅಸಮಾನತೆಯು ತುಂಬಾ ಆಳವಾಗಿ ಬೇರೂರಿದೆ ಎಂಬುದನ್ನು ಕೋವಿಡ್ ನಮ್ಮ ಅರಿವಿಗೆ ತಂದಿತು. ಈ ಎಲ್ಲದರ ಮಧ್ಯೆಯೂ, ಕೆಲಸ ಮತ್ತು ವ್ಯವಹಾರಕ್ಕಾಗಿ ನಮ್ಮ ಪ್ಲಾಟ್ಫಾರಂ ಬಳಸುವ ನಮ್ಮ ಉದ್ಯೋಗಿಗಳು, ನಮ್ಮ ನಗರಗಳು, ಮತ್ತು ನಮ್ಮ ಸವಾರರು, ಚಾಲಕರು, ಡೆಲಿವರಿ ಜನರು, ರೆಸ್ಟೋರೆಂಟ್ಗಳು ಮತ್ತು ವ್ಯಾಪಾರಿಗಳಿಗೆ ಬೆಂಬಲ ನೀಡಲು ಶ್ರಮಿಸಿತು.
ವೈವಿಧ್ಯತೆಗೆ ನಾಯಕತ್ವದ ಬದ್ಧತೆ
ನಮ್ಮ CEO, ದಾರಾ ಖೋಸ್ರೋಶಾಹಿ ಅವರು ಸೂಚಿಸಿರುವ ಪ್ರಕಾರ 2021 ರಲ್ಲಿ ಕಂಪನಿಯ 6 ಪ್ರಮುಖ ಆದ್ಯತೆಗಳಲ್ಲಿ ಹೆಚ್ಚಿನ ಸಮಾನತೆಯನ್ನು ಉತ್ತಮ ರೀತಿಯಲ್ಲಿ ಕಾಪಾಡುವುದು ಒಂದಾಗಿದೆ. ಇದರರ್ಥ, Uber ನಲ್ಲಿ ಜನಸಂಖ್ಯಾ ವೈವಿಧ್ಯತೆಯನ್ನು ಹೆಚ್ಚಿಸುವುದು ಮತ್ತು ಹೆಚ್ಚು ಸಕ್ರಿಯವಾಗಿ ಜನಾಂಗೀಯ ವಿಭಜನೆ ವಿರೋಧಿ ಕಂಪನಿಯಾಗುವುದು ಮತ್ತು ನಾವು ಸೇವೆ ಒದಗಿಸುತ್ತಿರುವ ಸಮುದಾಯಗಳ ಜೊತೆಗೆ ಮೈತ್ರಿಯಿಂದಿರುವುದು. ಕಾರ್ಯಕಾರಿ ನಾಯಕತ್ವ ತಂಡದ ಪ್ರತಿಯೊಬ್ಬ ಸದಸ್ಯರು ಇದನ್ನು ನಿಜವಾಗಿಸಲು ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ವಿಶೇಷವಾಗಿ ಅವರ ಇಡೀ ಸಂಸ್ಥೆ ಇದನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಇದನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳಲು ಬದ್ಧತೆ ಇವು ಕಂಪನಿಯ ಕಾರ್ಯತಂತ್ರದ ಮೂಲ ಉದ್ದೇಶಗಳಾಗಿವೆ.
ಬೊ ಯಂಗ್ ಲೀ, ವೈವಿಧ್ಯತೆ ಮತ್ತು ಸೇರ್ಪಡೆ ಮುಖ್ಯ ಅಧಿಕಾರಿ
"ಪ್ರಗತಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿದೆ. ಆದರೆ, ನಮ್ಮನ್ನು ವಿಳಂಬಗೊಳಿಸುತ್ತಿರುವುದು ಪರಿಹಾರದ ಕೊರತೆಯಲ್ಲ. ಜನಾಂಗೀಯತೆ ಮತ್ತು ಬಿಳಿಯರ ಪ್ರಾಬಲ್ಯದ ವರ್ತನೆಗಳ ವಿರುದ್ಧ ಎದ್ದು ನಿಲ್ಲಲು ಮತ್ತು ಬದ್ಧತೆಯನ್ನು ಉಳಿಸಿಕೊಳ್ಳಲು ಧೈರ್ಯ ಇಲ್ಲದಿದ್ದಾಗ ಕಂಪನಿಗಳು ಪ್ರಗತಿ ಸಾಧಿಸಲು ಪರಿಶ್ರಮ ಪಡುತ್ತವೆ. ವ್ಯಕ್ತಿಗಳು ಮತ್ತು ಕಂಪನಿಗಳು ತ್ವರಿತ ಬದಲಾವಣೆಯನ್ನು ಕಾಣದಿದ್ದಾಗ ಪ್ರಗತಿಯನ್ನು ಕಳೆದುಕೊಳ್ಳುತ್ತವೆ. ಆದರೆ, ಮಧ್ಯಮ ವೇಗದ ರೂಪಾಂತರವು ಹೆಚ್ಚು ಸುಸ್ಥಿರವಾಗಿರುತ್ತದೆ. ಅಸಮಾನತೆ ಮತ್ತು ವರ್ಣಭೇದ ನೀತಿಯು ರಾತ್ರೋರಾತ್ರಿ ಹೊರಹೊಮ್ಮಲಿಲ್ಲ ಮತ್ತು ಅವುಗಳನ್ನು ಸುಲಭ ಪರಿಹಾರಗಳೊಂದಿಗೆ ಸರಿಪಡಿಸಲು ಸಾಧ್ಯವಿಲ್ಲ. ಈ ಕೆಲಸ ಎಂದಿಗೂ ಮುಗಿಯುವುದಿಲ್ಲ. ನಮ್ಮಲ್ಲಿ ಬದ್ಧತೆ ಇದ್ದಲ್ಲಿ, ಬದಲಾವಣೆ ಸಂಭವಿಸುತ್ತದೆ ಎಂದು ನಾನು ನಂಬುತ್ತೇನೆ. ಸುಸ್ಥಿರ ಕ್ರಮಕ್ಕೆ ಬದ್ಧವಾಗುವ ಧೈರ್ಯವನ್ನು Uber ಯಾವಾಗಲೂ ಹೊಂದಿದೆ. ಇದು ನನ್ನ ಆರಂಭಿಕ ಯಶಸ್ಸು ಕೂಡಾ ಆಗಿದೆ.
“ನಾವು ಬಹಳ ವಿಶಿಷ್ಟ ಕಾಲದಲ್ಲಿದ್ದೇವೆ. ರೂಪಾಂತರಕ್ಕೆ ನಾವು ಸಿದ್ಧರಾಗಿದ್ದೇವೆ ಎಂಬುದನ್ನು ಖಚಿತಪಡಿಸೋಣ.”
ಡ್ಯಾರಾ ಖೋಸ್ರೋಶಾಹಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
“ಚಲನವಲನಗಳಿಗೆ ಶಕ್ತಿ ತುಂಬುವ ಕಂಪನಿಯಾಗಿ, ಪ್ರತಿಯೊಬ್ಬರೂ ದೈಹಿಕವಾಗಿ, ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಓಡಾಡುತ್ತಾರೆಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಅದನ್ನು ಮಾಡಲು, ಸಮಾಜದಾದ್ಯಂತ ಇರುವ ಜನಾಂಗೀಯತೆಯ ವಿರುದ್ಧ ಹೋರಾಟ ಮಾಡಲು ನಾವು ಸಹಾಯ ಮಾಡಬೇಕಿದೆ ಮತ್ತು ನಮ್ಮ ಕಂಪನಿಯ ಒಳಗೆ ಮತ್ತು ಹೊರಗೂ ಸಮಾನತೆಯಲ್ಲಿ ಮುಂಚೂಣಿಯಲ್ಲಿರಬೇಕು.
"ಒಂದು ವಿಷಯ ನಮಗೆ ಸ್ಪಷ್ಟವಾಗಿದೆ: ನಮ್ಮ ಉತ್ಪನ್ನಗಳು ಮಾತ್ರ ಸಮಾನತೆ ಮತ್ತು ನ್ಯಾಯಸಮ್ಮತತೆಯನ್ನು ಸುಧಾರಿಸುತ್ತದೆ ಎಂದು ನಾವು ಭಾವಿಸಲಾಗುವುದಿಲ್ಲ. ವೇಗವಾಗಿ ಬದಲಾವಣೆಯನ್ನು ಮಾಡುವುದಕ್ಕಾಗಿ ಜಾಗತಿಕ ವ್ಯಾಪ್ತಿ, ನಮ್ಮ ತಂತ್ರಜ್ಞಾನ ಮತ್ತು ನಮ್ಮ ಡೇಟಾವನ್ನು ನಾವು ಗಮನಿಸಬೇಕು. ಆಗ ನಾವು ಹೆಚ್ಚು ಸಕ್ರಿಯವಾದ ಜನಾಂಗೀಯತೆ ವಿರೋಧಿ ಕಂಪನಿಯಾಗುತ್ತೇವೆ. ಸುರಕ್ಷಿತ ಮತ್ತು ಹೆಚ್ಚು ಒಳಗೊಂಡ ಕಂಪನಿ ಮತ್ತು ಪ್ಲಾಟ್ಫಾರಂ ಆಗುತ್ತೇವೆ ಮತ್ತು ನಾವು ಸೇವೆ ಒದಗಿಸುವ ಎಲ್ಲ ಸಮುದಾಯಗಳಿಗೆ ವಿಶ್ವಾಸಾರ್ಹ ಪಾಲುದಾರರಾಗುತ್ತೇವೆ”
ಸದಸ್ಯರಿಗಾಗಿ ನಾಯಕತ್ವ ವಿಕಸನ ಅವಕಾಶಗಳ ಜೊತೆಗೆ ಗುರುತಿಸುವಿಕೆ ಮತ್ತು ಅಂತರ್ ವಿಭಾಗೀಯತೆಯ ಕುರಿತು ಅರಿವನ್ನು Uber ಉದ್ಯೋಗಿ ಸಂಪನ್ಮೂಲ ಸಮೂಹಗಳು ಒದಗಿಸುತ್ತವೆ.
ನಮ್ಮ ಕಾರ್ಯಪಡೆಯ ಜನಸಂಖ್ಯಾಶಾಸ್ತ್ರ
ಕಳೆದ 3 ವರ್ಷಗಳಲ್ಲಿ ನಮ್ಮ ಕಾರ್ಯಪಡೆಯ ಪ್ರಾತಿನಿಧ್ಯದ ಬಗ್ಗೆ ಈ ಕೆಳಗೆ ಸಮೀಪದ ನೋಟ ಇದೆ
ಚಾರ್ಟ್ಗಳು | ಜಾಗತಿಕ ಲಿಂಗ ಮತ್ತು ಯುಎಸ್ ಜನಾಂಗ/ಜನಾಂಗೀಯ ಪ್ರತಿನಿಧಿತ್ವ
ಕಾರ್ಯಪಡೆಯ ವೈವಿಧ್ಯತೆ (ಜಾಗತಿಕ)¹
ಕಾರ್ಯಪಡೆಯ ವೈವಿಧ್ಯತೆ (ಯುಎಸ್)²
ಕಾರ್ಯಪಡೆಯ ವೈವಿಧ್ಯತೆ (ಪ್ರಾದೇಶಿಕತೆ)
ಚಾರ್ಟ್ಗಳು | ನಮ್ಮ ನಾಯಕತ್ವ ಪ್ರಾತಿನಿಧ್ಯ⁴
ಕಾರ್ಯಪಡೆಯ ವೈವಿಧ್ಯತೆ (ಜಾಗತಿಕ)¹
ಕಾರ್ಯಪಡೆಯ ವೈವಿಧ್ಯತೆ (ಯುಎಸ್)²
ಜನರು ಮತ್ತು ಸಂಸ್ಕೃತಿ ವರದಿಯ 22 ರಿಂದ 25 ನೇ ಪುಟಗಳಲ್ಲಿ ಯುಎಸ್ನಲ್ಲಿರುವ ಜನಾಂಗದ ಪ್ರಾತಿನಿಧ್ಯದ ಪ್ರಕಾರವಾಗಿ ಸ್ತ್ರೀ/ಪುರುಷ ಮಾಹಿತಿ ಚಾರ್ಟ್ಗಳ ಮೇಲೆ ಕಣ್ಣಾಡಿಸಿ.
ಚಾರ್ಟ್ಗಳು | ನಮ್ಮ ಹೊಸ ನೇಮಕಾತಿಗಳ ಪ್ರಾತಿನಿಧ್ಯಗಳು⁵
ಹೊಸ ನೇಮಕಾತಿಯ ಪ್ರತಿನಿಧಿತ್ವ
% ಪ್ರಕಾರ ಹೊಸ ನೇಮಕಾತಿಗಳ ಜನಾಂಗೀಯತೆ ಪ್ರತಿನಿಧಿತ್ವ
ಜನರು ಮತ್ತು ಸಂಸ್ಕೃತಿ ವರದಿಯ ಪುಟ 27 ರಲ್ಲಿ ನಮ್ಮ ಹೊಸ ಯುಎಸ್ ನೇಮಕಾತಿಗಳ ಜನಾಂಗೀಯತೆ ಪ್ರತಿನಿಧಿತ್ವದ ಮೂಲಕ ಸ್ತ್ರೀ/ಪುರುಷ ಚಾರ್ಟ್ಗಳನ್ನು ನೋಡಿ.
¹ಮಾರ್ಚ್ 2019, ಆಗಸ್ಟ್ 2020 ಮತ್ತು ಮಾರ್ಚ್ 2021 ರ ಪ್ರಕಾರ ಕಾರ್ಯಪಡೆ ಪ್ರತಿನಿಧಿತ್ವ. 2021 ಜನರು ಮತ್ತು ಸಂಸ್ಕೃತಿ ವರದಿಯ PDF ಆವೃತ್ತಿಯನ್ನು ಆಳವಾದ ವ್ಯಾಖ್ಯಾನಗಳಿಗಾಗಿ ನೋಡಿ.
²ಜನಾಂಗ/ಜನಾಂಗೀಯತೆ ಸ್ವಯಂ ವರದಿ ಮಾಡದ ಉದ್ಯೋಗಿಗಳನ್ನು ಪ್ರತಿನಿಧಿತ್ವ ಶೇಕಡಾವಾರು ಹೊರಗಿಡುತ್ತದೆ. ಈ ಅಂಕಿಅಂಶಗಳ ಡಿನಾಮಿನೇಟರ್ "ಆಯ್ದ ಸಂಸ್ಥೆಯಲ್ಲಿ ಆಯ್ದ ಒಟ್ಟು ಪುರುಷ ಮತ್ತು ಮಹಿಳೆಯರು"
³ಲೆಕ್ಕಾಚಾರವು ನಮ್ಮ ಬೆಂಬಲ ಕಾರ್ಯಪಡೆಯನ್ನು ಒಳಗೊಂಡಿದೆ (ಉದ್ಯಮ ನಿಯಮಗಳಲ್ಲಿ ಗ್ರಾಹಕರ ಸೇವೆ ಉದ್ಯೋಗಿಗಳಿಗೆ ನಿರ್ದಿಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ). ಇದು ನಮ್ಮ ಪರಿಣಿತಿ ಕೇಂದ್ರಗಳು ಮತ್ತು ಗ್ರೀನ್ಲೈಟ್ ಕೇಂದ್ರಗಳ ಸಮುದಾಯ ವಿಶೇಷತೆಗಳನ್ನು ಒಳಗೊಂಡಿರುತ್ತದೆ.
⁴ಹಂತ 7 ಮತ್ತು ಹೆಚ್ಚಿನ ಎಕ್ಸೆಕ್ಯೂಟಿವ್ಗಳು ಮತ್ತು ಹಿರಿಯ ಆಡಳಿತವನ್ನು ಲೆಕ್ಕಾಚಾರವು ಒಳಗೊಂಡಿದೆ.
⁵2020 ರ ಹೊಸ Hire ಪ್ರತಿನಿಧಿತ್ವ ಡೇಟಾ 2020 ಆಗಸ್ಟ್ವರೆಗಿನದ್ದಾಗಿದೆ ಮತ್ತು 2021 ರ ಹೊಸ Hire ಡೇಟಾ 2020 ಏಪ್ರಿಲ್ನಿಂದ 2021 ಮಾರ್ಚ್ವರೆಗಿನದ್ದಾಗಿದೆ.
ವೈವಿಧ್ಯತೆ ಮತ್ತು ಸೇರ್ಪಡೆ ವರದಿಗಳು
2021 ಜನರು ಮತ್ತು ಸಂಸ್ಕೃತಿ ವರದಿ
2020 ಜನರು ಮತ್ತು ಸಂಸ್ಕೃತಿ ವರದಿ
2019 ವೈವಿಧ್ಯತೆ ಮತ್ತು ಸೇರ್ಪಡೆ ವರದಿ
ಕಂಪನಿ