ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ
ವೈವಿಧ್ಯಮಯ ಪ್ಲಾಟ್ಫಾರ್ಮ್ನಲ್ಲಿ ಸೇವೆ ಸಲ್ಲಿಸಲು ವೈವಿಧ್ಯಮಯ ತಂಡಗಳನ್ನು ನಿರ್ಮಿಸುವುದು
Uber ಪ್ಲಾಟ್ಫಾರ್ಮ್ನಲ್ಲಿ, ನಮ್ಮ ದಿನದ 1.9 ಕೋಟಿ ಟ್ರಿಪ್ಗಳಲ್ಲಿ ಅಭೂತಪೂರ್ವ ಸಂಖ್ಯೆಯ ವಿಭಿನ್ನ ಜನರು ಪರಸ್ಪರ ಸಂವಹನ ನಡೆಸುತ್ತಾರೆ. ನಮ್ಮ ಉತ್ಪನ್ನಗಳನ್ನು ಬಳಸುವ ವೈವಿಧ್ಯಮಯ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ರೀತಿಯಲ್ಲಿ ನಾವು ನಮ್ಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ವ್ಯವಹಾರವನ್ನು ಮುನ್ನಡೆಸಬೇಕು. ಅಂದರೆ, ನಾವು ಕಾರ್ಯನಿರ್ವಹಿಸುವ ಮತ್ತು ನೇಮಿಸಿಕೊಳ್ಳುವ ಸಮುದಾಯಗಳ ವೈವಿಧ್ಯತೆಯನ್ನು ಆಂತರಿಕವಾಗಿ ಪ್ರತಿಬಿಂಬಿಸುವುದು ಮತ್ತು ಆ ವೈವಿಧ್ಯತೆಯನ್ನು ಸಮೃದ್ಧಗೊಳಿಸುವುದು ನಮ್ಮ ಕಾರ್ಯಪಡೆಗೆ ಅಗತ್ಯವಾಗಿದೆ ಮತ್ತು ಜನರಲ್ಲಿ ತಾವು ಇಲ್ಲಿಗೆ ಸೇರಿದವರು ಎಂಬ ಭಾವನೆಯನ್ನು ಬೆಳೆಸುವ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ನಮ್ಮದಾಗಿದ್ದು, ಈ ಮೂಲಕ ನಾವು ನಮ್ಮ ಹಂಚಿತ ಯಶಸ್ಸಿಗೆ ಕೊಡುಗೆ ನೀಡಬಹುದಾಗಿದೆ.
ಸಮಯಾವಧಿಯಲ್ಲಿ ಹಂತ ಹಂತವಾಗಿ ಮತ್ತು ಸುಸ್ಥಿರ ಬದಲಾವಣೆಗಳನ್ನು ಮಾಡುವ ಮೂಲಕ, Uber ತನ್ನ ಬುನಾದಿಯನ್ನು ತಳಮಟ್ಟದಿಂದ ಮರುನಿರ್ಮಿಸಿದೆ ಮತ್ತು ನಮ್ಮ ಸಂಸ್ಕೃತಿಯನ್ನು ಸಂಪೂರ್ಣವಾಗಿ ಮರುರೂಪಿಸಿದೆ. ಐದು ವರ್ಷಗಳ ನಂತರ, ವೈವಿಧ್ಯತೆಯು ನಮ್ಮನ್ನು ಹೇಗೆ ಸುದೃಢಗೊಳಿಸುತ್ತಿದೆ ಮತ್ತು ಜಗತ್ತನ್ನು ಉತ್ತಮದೆಡೆಗೆ ಸಾಗಿಸಲು ಹೆಚ್ಚು ಸಮಾನ ಮತ್ತು ಅಂತರ್ಗತ ವಾತಾವರಣವನ್ನು ನಿರ್ಮಿಸಲು ನಮಗೆ ಹೇಗೆ ಅನುವು ಮಾಡಿಕೊಡುತ್ತಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.
ಉದ್ಯೋಗಿ ಸಂಪನ್ಮೂಲ ಸಮೂಹಗಳು
ಸದಸ್ಯರಿಗಾಗಿ ನಾಯಕತ್ವ ವಿಕಸನ ಅವಕಾಶಗಳ ಜೊತೆಗೆ ಗುರುತು ಮತ್ತು ಅಂತರ್-ವಿಭಾಗೀಯತೆಯ ಕುರಿತು ಅರಿವನ್ನು Uber ಉದ್ಯೋಗಿ ಸಂಪನ್ಮೂಲ ಸಮೂಹಗಳು ಒದಗಿಸುತ್ತವೆ.
Uber ನಲ್ಲಿ ವಿಕಲಚೇತನರು
ವಿಕಲಚೇತರನ ಜೊತೆಗೆ ವಾಸಿಸುತ್ತಿರುವ ಆರೈಕೆದಾರರು ಮತ್ತು ಉದ್ಯೋಗಿಗಳಿಗಾಗಿ Uber ಸಮುದಾಯ
Uber ನಲ್ಲಿ ವಿವಿಧ ನಂಬಿಕೆಯವರು
ವಿವಿಧ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಗಳ ಜನರಿಗಾಗಿ Uber ಸಮುದಾಯ
ವಾರ್ಷಿಕ ಜನರು ಮತ್ತು ಸಂಸ್ಕೃತಿ ವರದಿ ಮಾಡುವಿಕೆ
ಪ್ರತಿ ವರ್ಷ, ಮಾನವ ಬಂಡವಾಳ ನಿರ್ವಹಣೆಗೆ ನಮ್ಮ ವಿಧಾನವನ್ನು ಹಂಚಿಕೊಳ್ಳಲು ನಾವು ನಮ್ಮ ಜನರು ಮತ್ತು ಸಂಸ್ಕೃತಿ ವರದಿಯನ್ನು ಪ್ರಕಟಿಸುತ್ತೇವೆ; ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ; ಮತ್ತು ಸಂಸ್ಕೃತಿ. ನಾವು ನವೀಕರಿಸಿದ ಪ್ರಾತಿನಿಧ್ಯ ಡೇಟಾವನ್ನು ಹಂಚಿಕೊಳ್ಳುತ್ತೇವೆ ಮತ್ತು ನಮ್ಮ ಸಂಭಾವ್ಯ ಗುರಿಗಳತ್ತ ಸಾಗುವಲ್ಲಿ ನಾವು ಹೇಗೆ ಪ್ರಗತಿ ಸಾಧಿಸುತ್ತಿದ್ದೇವೆ ಎಂಬುದನ್ನು ವಿವರಿಸುತ್ತೇವೆ. ವರದಿಯು ನಮ್ಮ ಕಾರ್ಯಪಡೆಯ ಡೇಟಾ ಮತ್ತು ಮಾನವ ಬಂಡವಾಳ ಪದ್ಧತಿಗಳ ಸುತ್ತ ಪಾರದರ್ಶಕತೆಯನ್ನು ಹೆಚ್ಚಿಸುವ ನಮ್ಮ ವಿಧಾನದ ನಿರ್ಣಾಯಕ ಅಂಶವಾಗಿದೆ.
ನಾವು ಸಂಪರ್ಕ ಸಾಧಿಸುವ ಪ್ರತಿಯೊಬ್ಬರಿಗೂ ಹೆಚ್ಚು ಸಮಾನ ಅನುಭವ ಒದಗಿಸಲು Uber ಪ್ರಯತ್ನಿಸುತ್ತಿದೆ. ಈ ಸ್ಟೋರಿಯನ್ನು ಉತ್ತಮವಾಗಿ ಹೇಳಲು, ನಮ್ಮ ಹೊಸ ಪರಿಸರ, ಸಾಮಾಜಿಕ ಮತ್ತು ಆಡಳಿತ ವರದಿಯಾಗಲು ನಮ್ಮ ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ವರದಿಯೊಂದಿಗೆ ನಮ್ಮ ಜನರು ಮತ್ತು ಸಂಸ್ಕೃತಿ ವರದಿಯನ್ನು ಸಂಯೋಜಿಸುವ ಮೂಲಕ Uber ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ನಾವು ರಚಿಸಿದ್ದೇವೆ.
ಸಮಾನ ಅವಕಾಶ ಉದ್ಯೋಗದಾತರಾಗಿರುವುದು
ಉದ್ಯೋಗದಾತರ ಮಾಹಿತಿ ವರದಿ ಎಂದೂ ಕರೆಯಲ್ಪಡುವ EEO-1 ವರದಿಯನ್ನು US ಫೆಡರಲ್ ಸರ್ಕಾರದಿಂದ ಕಡ್ಡಾಯಗೊಳಿಸಲಾಗಿದೆ ಮತ್ತು ಜನಾಂಗ/ಜನಾಂಗೀಯತೆ, ಲಿಂಗ ಮತ್ತು ಹುದ್ದೆಯ ವಿಭಾಗದ ಪ್ರಕಾರ ಉದ್ಯೋಗ ಡೇಟಾವನ್ನು ಕಂಪನಿಗಳು ವರದಿ ಮಾಡುವುದನ್ನು ಅಗತ್ಯವಾಗಿಸಿದೆ.
ನಮ್ಮ ಸಂಪೂರ್ಣ ಕಾರ್ಯಪಡೆಯಲ್ಲಿ ವೈವಿಧ್ಯತೆ, ಸಮಗ್ರತೆ ಮತ್ತು ಸಮಾನತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಳೆಯಲು ಈ ವರದಿಯನ್ನು ಬಳಸಲಾಗುತ್ತದೆ. ಮೂಲಭೂತವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ Uber ನ US ಉದ್ಯೋಗಿಗಳ ಸ್ಥೂಲ ಚಿತ್ರಣ ಇದಾಗಿರುತ್ತದೆ. ವೈವಿಧ್ಯಮಯ ಕಾರ್ಯಸ್ಥಳವನ್ನು ಪೋಷಿಸುವುದರಿಂದ ನಮ್ಮ ವಿಸ್ತಾರವಾದ DEI ಕಾರ್ಯತಂತ್ರದ ಪ್ರಕಾರ ನಮ್ಮ ವ್ಯವಹಾರಕ್ಕೆ ಅದರ ಗುರಿಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ಸಹಾಯ ಮಾಡುತ್ತದೆ. ನಮ್ಮ ಉದ್ಯೋಗಿ ಜನಸಂಖ್ಯಾ ಡೇಟಾದ ಸುತ್ತ ಪಾರದರ್ಶಕತೆಯನ್ನು ಹೆಚ್ಚಿಸುವ ಹಾಗೂ ವಿಸ್ತೃತವಾದ ವಿವರ ಒದಗಿಸುವ ನಮ್ಮ ಬದ್ಧತೆಯ ಭಾಗವಾಗಿ ಈ ವರದಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ನಾವು ಆಯ್ಕೆ ಮಾಡುತ್ತೇವೆ.
2021 EEO-1 ವರದಿ
2022 EEO-1 ವರದಿ
2021 EEO-1 ವರದಿ
2020 EEO-1 ವರದಿ
2019 EEO-1 ವರದಿ