Uber ಬಳಕೆಯ ಪ್ರವೇಶಿಸುವಿಕೆ
ನಮ್ಮ ತಂತ್ರಜ್ಞಾನ ಮತ್ತು ಚಾಲಕರು ಒದಗಿಸುವ ಸಾರಿಗೆಯು ಬಹಳಷ್ಟು ಅಂಗವಿಕಲ ಜನರಿಗೆ ನಡೆದಾಡುವ ಶಕ್ತಿ ನೀಡಿದೆ, ಮತ್ತು ಪ್ರತಿಯೊಬ್ಬರೂ ತಮ್ಮ ಸಮುದಾಯಗಳನ್ನು ಸುಲಭವಾಗಿ ಚಲಿಸುವ ಸಾಮರ್ಥ್ಯವನ್ನು ಬೆಂಬಲಿಸುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
ಅಂಗವಿಕಲ ಸವಾರರು
ಈ ರೀತಿಯ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಅಂಗವಿಕಲ ಸವಾರರಿಗೆ ಚಲನಶೀಲತೆ ಮತ್ತು ಸ್ವಾತಂತ್ರ್ಯವನ್ನು ಹೆಚ್ಚಿಸಲು Uber ತಂತ್ರಜ್ಞಾನ ಸಹಾಯ ಮಾಡುತ್ತದೆ:
ನಗದುರಹಿತ ಪಾವತಿಗಳು
Uber ನ ನಗದುರಹಿತ ಪಾವತಿ ಆಯ್ಕೆಯು ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿರುವ ಕಾರಣ, ಸವಾರರು ಹಣವನ್ನು ಎಣಿಸುವ ಬಗ್ಗೆ ಅಥವಾ ಚಾಲಕರೊಂದಿಗೆ ಬಿಲ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಹೆಚ್ಚೇನು ಚಿಂತಿಸಬೇಕಾಗಿಲ್ಲ.
ಬೇಡಿಕೆಯ ಮೇರೆಗೆ ಸಾರಿಗೆ
ಅಂಗವಿಕಲ ಸವಾರರು ಬಟನ್ ಸ್ಪರ್ಶಿಸುವ ಮೂಲಕ A ಇಂದ B ಗೆ ಪ್ರಯಾಣಿಸಲು Uber ಆ್ಯಪ್ ಇನ್ನಷ್ಟು ಸುಲಭಗೊಳಿಸುತ್ತದೆ. ಅವರು ಇನ್ನು ಮುಂದೆ ರವಾನೆದಾರರ ಮೂಲಕ ಸವಾರಿಗಳನ್ನು ವ್ಯವಸ್ಥೆ ಮಾಡಬೇಕಾಗಿಲ್ಲ ಅಥವಾ ಇತರೆ, ಕಡಿಮೆ ಅನುಕೂಲಕರ ಸವಾರಿಯನ್ನು ಹುಡುಕುವ ವಿಧಾನಗಳನ್ನು ಆಶ್ರಯಿಸಬೇಕಾಗಿಲ್ಲ.
ಮುಂಗಡ ಬೆಲೆ ನಿಗದಿ
ಸವಾರಿಯನ್ನು ವಿನಂತಿಸುವ ಮೊದಲು ಸವಾರರು ತಮ್ಮ ಟ್ರಿಪ್‌ನ ವೆಚ್ಚವನ್ನು ತಿಳಿಸಲು Uber ಮುಂಗಡ ಬೆಲೆಗಳನ್ನು ಬಳಸುತ್ತದೆ. ಇದು ಅವರಿಗೆ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ವಂಚನೆಯ ಅಪಾಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ತಾರತಮ್ಯ ವಿರೋಧಿ ನೀತಿಗಳು
ಸವಾರ ಮಾಡುವ ಪ್ರತಿಯೊಂದು ಟ್ರಿಪ್ ವಿನಂತಿಯು Uber ಆ್ಯಪ್‌ನಲ್ಲಿ ಹತ್ತಿರದ ಡ್ರೈವರ್‌ಗೆ ಸ್ವಯಂಚಾಲಿತವಾಗಿ ಮ್ಯಾಚ್ ಆಗುತ್ತದೆ, ಇದು ವಿಶ್ವಾಸಾರ್ಹ, ಕೈಗೆಟುಕುವ ಸಾರಿಗೆಯನ್ನು ಭದ್ರಪಡಿಸುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಕಾನೂನುಬಾಹಿರ ತಾರತಮ್ಯದ ಅವಕಾಶಗಳನ್ನು ಕಡಿಮೆ ಮಾಡುತ್ತದೆ.
ಸೇವಾ ಪ್ರಾಣಿ ನೀತಿಗಳು
ಕುರುಡು ಅಥವಾ ಕಡಿಮೆ ದೃಷ್ಟಿ ಸಾಮರ್ಥ್ಯವನ್ನು ಹೊಂದಿರುವ ಮತ್ತು ಸೇವಾ ಪ್ರಾಣಿಗಳ ಜೊತೆಗೆ ಪ್ರಯಾಣಿಸುತ್ತಿರುವ ಸವಾರರಿಗಾಗಿ, Uber ಸಮುದಾಯ ಮಾರ್ಗಸೂಚಿಗಳು ಮತ್ತು ಸೇವಾ ಪ್ರಾಣಿ ನೀತಿಯ ಪ್ರಕಾರ ಸೇವಾ ಪ್ರಾಣಿಗಳ ಸಾಗಣೆಗೆ ಸಂಬಂಧಿಸಿದಂತೆ ಅನ್ವಯವಾಗುವ ಎಲ್ಲಾ ಕಾನೂನುಗಳನ್ನ ು ಚಾಲಕರು ಸ್ಪಷ್ಟವಾಗಿ ಅನುಸರಿಸಬೇಕು.
ನಿಮ್ಮ ETA ಮತ್ತು ಸ್ಥಳವನ್ನು ಹಂಚಿಕೊಳ್ಳಿ
ಸವಾರರು ತಮ್ಮ ಮನಸ್ಸಿನ ಶಾಂತಿಗಾಗಿ, ತಮ್ಮ ಸವಾರಿ ವಿವರಗಳನ್ನು ನಿರ್ದಿಷ್ಟ ಮಾರ್ಗ ಮತ್ತು ಆಗಮನದ ಅಂದಾಜು ಸಮಯ ಸೇರಿದಂತೆ ಇನ್ನೂ ಕೆಲವು ಮಾಹಿತಿಗಳನ್ನು ಪ್ರೀತಿಪಾತ್ರರ ಜೊತೆಗೆ ಸುಲಭವಾಗಿ ಹಂಚಿಕೊಳ್ಳಬಹುದು. ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಸ್ವೀಕರಿಸುವ ಲಿಂಕ್‌ನಲ್ಲಿ, ಅವರು ಚಾಲಕನ ಹೆಸರು, ಫೋಟೋ ಮತ್ತು ವಾಹನ ಮಾಹಿತಿಯನ್ನು ನೋಡಬಹುದು, ಮತ್ತು ಸವಾರರು ತಮ್ಮ ತಲುಪಬೇಕಾದ ಸ್ಥಳಕ್ಕೆ ತಲುಪುವವರೆಗೆ ನೈಜ ಸಮಯದಲ್ಲಿ ನಕ್ಷೆಯಲ್ಲಿ ಎಲ್ಲಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡಬಹುದು-ಇದೆಲ್ಲರೂ Uber ಡೌನ್‌ಲೋಡ್ ಮಾಡದೆಯೇ ಸಾಧ್ಯವಿದ ೆ.