Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (LAS)

ಸಾಂಪ್ರದಾಯಿಕ ಹ್ಯಾರಿ ರೀಡ್ ವಿಮಾನ ನಿಲ್ದಾಣ ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವನ್ನು ಹುಡುಕುತ್ತಿದ್ದೀರಾ? ನೀವು ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೆಗಾಸ್ ಪ್ರದರ್ಶನಕ್ಕೆ ಹೋಗುತ್ತಿರಲಿ ಅಥವಾ ಸ್ಟ್ರಿಪ್ ‌ನಿಂದ ಹ್ಯಾರಿ ರೀಡ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಆ್ಯಪ್ ‌ ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು LAS ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.

ಲಾಸ್ ವೇಗಾಸ್, NV 89119
+1 702-261-5211

search
ಎಲ್ಲಿಂದ?
Navigate right up
search
ಎಲ್ಲಿಗೆ?

ಜಗತ್ತಿನೆಲ್ಲೆಡೆ ಸವಾರಿ ಮಾಡಲು ವಿನಂತಿಸಿ

ಈಗಲೇ ಬಟನ್‌ ಟ್ಯಾಪ್‌ ಮಾಡಿ ಮತ್ತು 700 ಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಲ್ಲಿ ಏರ್‌ಪೋರ್ಟ್ ಸಾರಿಗೆ ಸೇವೆಯನ್ನು ಪಡೆಯಿರಿ.

ಸ್ಥಳೀಯರಂತೆ ತಿರುಗಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರಿಗೆ ಎಲ್ಲಾ ವಿಚಾರಗಳನ್ನು ನಿಭಾಯಿಸಲು ಬಿಡಿ, ಹೀಗಾಗಿ ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯವಿಲ್ಲ.

Uber ನಲ್ಲಿ ಆರಾಮದಾಯಕ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ಸಹ ನೈಜ-ಸಮಯದ ಬೆಲೆ ಮತ್ತು ನಗದು-ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.

ಪ್ರದೇಶದಲ್ಲಿ ಸವಾರಿ ಮಾಡುವಮಾರ್ಗಗಳು

ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಲ್ಲಿ ಪಿಕಪ್ಮಾಡಿ (LAS)

ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ

ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ LAS ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.

ಆ್ಯಪ್‌ನಲ್ಲಿ ಮಾರ್ಗಗಳನ್ನು ಅನುಸರಿಸಿ

ನೀವು LAS ಪಿಕಪ್ ಪಾಯಿಂಟ್‌ಗಳ ಬಗ್ಗೆ ನಿರ್ದೇಶನಗಳನ್ನು ಆ್ಯಪ್‌ನಲ್ಲಿ ನೇರವಾಗಿ ಪಡೆಯುತ್ತೀರಿ. ಪಿಕಪ್ ಸ್ಥಳಗಳು ಪ್ರತಿ ನಿಲ್ದಾಣಗಳಿಗೂ ಬದಲಾಗಬಹುದು. ರೈಡ್‌ಶೇರ್ ಪಿಕಪ್ ಚಿಹ್ನೆಗಳು ಲಾಸ್ ವೇಗಾಸ್ ಹ್ಯಾರಿ ರೀಡ್ ವಿಮಾನ ನಿಲ್ದಾಣದಲ್ಲಿಯೂ ಲಭ್ಯವಿರಬಹುದು.

ನಿಮ್ಮ ಚಾಲಕರನ್ನು ಭೇಟಿ ಮಾಡಿ

ಆ್ಯಪ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ನಿಮಗೆ ನಿಯೋಜಿಸಲಾದ LAS ಪಿಕಪ್ ಸ್ಥಳಕ್ಕೆ ಹೋಗಿ. ದಯವಿಟ್ಟು ಗಮನಿಸಿ: ಈ ಸ್ಥಳವು ಯಾವಾಗಲೂ ನಿಮ್ಮ ಹತ್ತಿರದ ನಿರ್ಗಮನದಲ್ಲಿರಬೇಕೆಂದಿಲ್ಲ. ನಿಮ್ಮ ಚಾಲಕರ ಹೆಸರು, ಪರವಾನಗಿ ಫಲಕ ಮತ್ತು ಕಾರಿನ ಬಣ್ಣವನ್ನು ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ನೀವು ಒಳಗೆ ಹೋಗುವ ಮೊದಲು ನಿಮ್ಮ ಸವಾರಿಯನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಕಾಂಟ್ಯಾಕ್ಟ್‌ ಮಾಡಿ.

ಹ್ಯಾರಿ ರೀಡ್ ವಿಮಾನ ನಿಲ್ದಾಣ ನಕ್ಷೆ

ಹ್ಯಾರಿ ರೀಡ್ ವಿಮಾನ ನಿಲ್ದಾಣವು 2 ಮುಖ್ಯ ಟರ್ಮಿನಲ್‌ಗಳನ್ನು ಹೊಂದಿದೆ, ಟರ್ಮಿನಲ್ 1 ಮತ್ತು ಟರ್ಮಿನಲ್ 3, ಇಲ್ಲಿ ಒಟ್ಟು 5 ಹಾದಿಗಳು ಮತ್ತು 110 ಗೇಟ್‌ಗಳಿವೆ.

ಲಾಸ್ ವೇಗಾಸ್ ವಿಮಾನ ನಿಲ್ದಾಣದ ನಕ್ಷೆ

ಸವಾರರಿಂದ ಪ್ರಮುಖ ಪ್ರಶ್ನೆಗಳು

  • ಹೌದು. ನೀವು Uber ನೊಂದಿಗೆ ಸವಾರಿ ವಿನಂತಿಸಿಕೊಳ್ಳಬಹುದಾದ ಜಗತ್ತಿನೆಲ್ಲೆಡೆ ಇರುವ ವಿಮಾನ ನಿಲ್ದಾಣಗಳ ಈ ಪಟ್ಟಿಗೆ ಹೋಗಿ.

  • LAS ಗೆ ಹೋಗಲು (ಅಥವಾ ಬರಲು) ತಗಲುವ Uber ಟ್ರಿಪ್ ವೆಚ್ಚವು ನೀವು ವಿನಂತಿಸಿರುವ ಸವಾರಿಯ ಪ್ರಕಾರ, ಟ್ರಿಪ್‌ನ ಅಂದಾಜು ದೂರ ಮತ್ತು ಅವಧಿ, ಟೋಲ್‌ಗಳು ಹಾಗೂ ಸವಾರಿಗಳಿಗೆ ಪ್ರಸ್ತುತ ಇರುವ ಬೇಡಿಕೆಗಳನ್ನು ಅವಲಂಬಿಸಿರುತ್ತದೆ.

    ನೀವು ವಿನಂತಿಸುವ ಮೊದಲು ಇಲ್ಲಿಗೆ ಹೋಗಿ ನಿಮ್ಮ ಪಿಕಪ್ ಸ್ಥಳ ಹಾಗೂ ತಲುಪಬೇಕಾದ ಸ್ಥಳವನ್ನು ನಮೂದಿಸುವ ಮೂಲಕ ಅಂದಾಜು ದರವನ್ನು ನೋಡಬಹುದು. ನಂತರ, ನೀವು ಸವಾರಿಗಾಗಿ ವಿನಂತಿಸಿದಾಗ ನೈಜ-ಸಮಯದ ಅಂಶಗಳ ಆಧಾರದ ಮೇಲೆ ಆ್ಯಪ್‌ನಲ್ಲಿ ನಿಮ್ಮ ನಿಜವಾದ ದರ ಕಾಣಿಸುತ್ತದೆ.

  • ರೈಡ್ ಶೇರ್ ಪಿಕಪ್ ಸ್ಥಳಗಳು ನೀವು ವಿನಂತಿಸುವ ಸವಾರಿಯ ಪ್ರಕಾರ ಮತ್ತು ವಿಮಾನ ನಿಲ್ದಾಣದ ಗಾತ್ರವನ್ನು ಅವಲಂಬಿಸಿರಬಹುದು. ನಿಮ್ಮ ಚಾಲಕರನ್ನು ಎಲ್ಲಿ ಭೇಟಿ ಮಾಡಬೇಕೆಂಬುದರ ಕುರಿತು ಆ್ಯಪ್‌ನಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಿ. ವಿಮಾನ ನಿಲ್ದಾಣದಲ್ಲಿ ಗೊತ್ತುಪಡಿಸಿದ ರೈಡ್‌ ಶೇರ್ ವಲಯಗಳನ್ನು ಸೂಚಿಸುವ ಚಿಹ್ನೆಗಳಿಗಾಗಿ ಸಹ ನೀವು ಹುಡುಕಬಹುದು.

    ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.

ಇನ್ನಷ್ಟು ಮಾಹಿತಿ

  • Uber ಜೊತೆ ಚಾಲನೆ ಮಾಡುತ್ತಿರುವಿರಾ?

    ಸವಾರರನ್ನು ಎಲ್ಲಿಂದ ಪಿಕಪ್‌ ಮಾಡಬೇಕು ಎಂಬುದರಿಂದ ಹಿಡಿದು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ತನಕ, ನಿಮ್ಮ ವಿಮಾನ ನಿಲ್ದಾಣದ ಟ್ರಿಪ್‌ಗಳನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕಂಡುಕೊಳ್ಳಿ.

  • ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

    ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಂದ ಡ್ರಾಪ್‌ಆಫ್‌ ಮತ್ತು ಪಿಕಪ್‌ ಪಡೆಯಿರಿ.

1/2

ಲಾಸ್ ವೇಗಾಸ್ ವಿಮಾನ ನಿಲ್ದಾಣದ ಸಂದರ್ಶಕರ ಮಾಹಿತಿ

ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (LAS) ಲಾಸ್ ವೆಗಾಸ್, ನೆವಾಡಾ ಮತ್ತು ವಿಶಾಲವಾದ ಲಾಸ್ ವೆಗಾಸ್ ವ್ಯಾಲಿಗೆ ಸೇವೆ ಒದಗಿಸುವ ಪ್ರಾಥಮಿಕ ವಿಮಾನ ನಿಲ್ದಾಣವಾಗಿದೆ. ವಿಮಾನಗಳ ಹಾರಾಟದ ಆಧಾರದಲ್ಲಿ ಇದು ವಿಶ್ವದ 8ನೇ ಅತ್ಯಂತ ಕಾರ್ಯನಿರತ ವಿಮಾನ ನಿಲ್ದಾಣವಾಗಿದೆ. ಪ್ಯಾರಡೈಸ್‌ನಲ್ಲಿರುವ ಇದು ಲಾಸ್ ವೇಗಾಸ್ ‌ನಗರದ ದಕ್ಷಿಣಕ್ಕೆ ಸುಮಾರು 5 ಮೈಲಿಗಳ (8 ಕಿಲೋಮೀಟರ್) ದೂರದಲ್ಲಿದೆ ಮತ್ತು ನಗರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರಿಗೆ ಸುಲಭ ಆ್ಯಕ್ಸೆಸ್ ‌ಒದಗಿಸುತ್ತದೆ. ವಿಮಾನ ನಿಲ್ದಾಣವು ಉತ್ತಮ ರಸ್ತೆ ಮತ್ತು ಸಂಚಾರ ಪರಿಸ್ಥಿತಿಗಳನ್ನು ಹೊಂದಿದ್ದು, ನಗರದಿಂದ ಸುಮಾರು 15 ನಿಮಿಷಗಳ ಪ್ರಯಾಣದ ಸಮಯ ತೆಗೆದುಕೊಳ್ಳುತ್ತದೆ.

LAS ವಿಮಾನ ನಿಲ್ದಾಣದ ಟರ್ಮಿನಲ್‌ಗಳು

LAS ವಿಮಾನ ನಿಲ್ದಾಣವನ್ನು 2 ಟರ್ಮಿನಲ್‌ಗಳಾಗಿ ವಿಂಗಡಿಸಲಾಗಿದೆ: ಟರ್ಮಿನಲ್ 1 ಮತ್ತು ಟರ್ಮಿನಲ್ 3. ಟರ್ಮಿನಲ್ 1 ರಲ್ಲಿ ಪ್ರಯಾಣಿಕರಿಗಾಗಿ 4 ಹಾದಿಗಳಿವೆ (A, B, C ಮತ್ತು D) ಮತ್ತು ಟರ್ಮಿನಲ್ 3 ಒಂದು ಹಾದಿಯನ್ನು (E) ಹೊಂದಿದೆ. ಹ್ಯಾರಿ ರೀಡ್ ವಿಮಾನ ನಿಲ್ದಾಣದ ಲೌಂಜ್‌ಗಳು ಎರಡೂ ಟರ್ಮಿನಲ್‌ಗಳಲ್ಲಿವೆ. ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ನೀವು ನಿಮ್ಮ ಟ್ರಿಪ್ ಅನ್ನು ಯೋಜಿಸಬಹುದು.

LAS ಟರ್ಮಿನಲ್ 1

  • ಅಲ್ಲಿಜಿಯಂಟ್
  • ಅಮೆರಿಕನ್
  • ಡೆಲ್ಟಾ
  • ಸೌತ್‌ವೆಸ್ಟ್
  • ಸ್ಪಿರಿಟ್
  • ಸೆಂಚೂರಿಯನ್ ಲೌಂಜ್
  • LAS ನಲ್ಲಿರುವ ಕ್ಲಬ್
  • ಯುನೈಟೆಡ್ ಕ್ಲಬ್

LAS ಟರ್ಮಿನಲ್ 3

  • ಏರೋಮೆಕ್ಸಿಕೋ
  • ಏರ್ ಕೆನಡಾ
  • ಬ್ರಿಟಿಷ್ ಏರ್‌ವೇಸ್
  • ಕಾಂಡೋರ್
  • ಕೋಪಾ
  • ಎಡೆಲ್ವೈಝ್‌
  • ಯುರೋವಿಂಗ್ಸ್
  • ಹೈನಾನ್
  • ಇಂಟರ್‌ಜೆಟ್
  • ಕೊರಿಯನ್ ಏರ್
  • LATAM
  • ನಾರ್ವೇಯನ್
  • ಥಾಮಸ್‌ ಕುಕ್
  • ವರ್ಜಿನ್ ಅಟ್ಲಾಂಟಿಕ್
  • ವಿವಾ
  • ವೊಲಾರಿಸ್
  • ವೆಸ್ಟ್‌ಜೆಟ್
  • LAS ನಲ್ಲಿರುವ ಕ್ಲಬ್

LAS ಅಂತರರಾಷ್ಟ್ರೀಯ ಟರ್ಮಿನಲ್

ಹ್ಯಾರಿ ರೀಡ್ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ವಿಮಾನಗಳಿಗೆ ಬೋರ್ಡಿಂಗ್ ಕೇವಲ ಟರ್ಮಿನಲ್ 3 ರಲ್ಲಿ ಗೇಟ್‌ಗಳು E1 ರಿಂದ E7 ವರೆಗೆ ನಡೆಯುತ್ತದೆ. ವಿಶ್ವದಾದ್ಯಂತ 150 ಕ್ಕೂ ಹೆಚ್ಚು ನಗರಗಳಿಗೆ ಲಾಸ್ ವೇಗಾಸ್ ವಿಮಾನ ನಿಲ್ದಾಣವು ತಡೆರಹಿತ ವಿಮಾನ ಸೇವೆಗಳನ್ನು ಒದಗಿಸುತ್ತದೆ. LAS ನ ಟರ್ಮಿನಲ್ 3 ನಲ್ಲಿ ಕ್ಲಬ್ ಇದೆ, ‌ಶುಲ್ಕ ಪಾವತಿಸಿದಲ್ಲಿ ಎಲ್ಲಾ ಪ್ರಯಾಣಿಕರಿಗೆ ಇಲ್ಲಿ ಲೌಂಜ್‌ ಲಭ್ಯವಿದೆ.

LAS ನಲ್ಲಿ ಡೈನಿಂಗ್

80 ಕ್ಕೂ ಹೆಚ್ಚು ಡೈನಿಂಗ್ ಮತ್ತು ರಿಫ್ರೆಶ್‌ಮೆಂಟ್‌ ಆಯ್ಕೆಗಳು ವಿಮಾನ ನಿಲ್ದಾಣದಾದ್ಯಂತ ಲಭ್ಯವಿವೆ. ಈ ಆಯ್ಕೆಗಳಲ್ಲಿ ಫಾಸ್ಟ್‌ ಫುಡ್‌, ಅಂತರರಾಷ್ಟ್ರೀಯ ಆಹಾರ, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಾಫಿ ಶಾಪ್‌ಗಳು ಸೇರಿವೆ. ಭದ್ರತೆ ತಪಾಸಣೆಗೆ ಒಳಗಾಗುವ ಮೊದಲು ನೀವು ತಿನ್ನಲು ಬಯಸಿದರೆ, ಟರ್ಮಿನಲ್ 1 ನಲ್ಲಿ ಸಾರ್ವಜನಿಕ ಶಾಪಿಂಗ್ ಮತ್ತು ಟಿಕೆಟಿಂಗ್ ಪ್ರದೇಶಗಳಲ್ಲಿ ಕೆಲವು ಆಯ್ಕೆಗಳಿವೆ. ಭದ್ರತೆ ತಪಾಸಣೆಯನ್ನು ಹಾದು ಹೋದ ನಂತರ, ಹ್ಯಾರಿ ರೀಡ್ ವಿಮಾನ ನಿಲ್ದಾಣದ ಇನ್ನೂ ಅನೇಕ ಆಹಾರ ಆಯ್ಕೆಗಳನ್ನು ಕಾಣಬಹುದು.

LAS ಸುತ್ತ ತಿರುಗಾಡುವುದು

ಹ್ಯಾರಿ ರೀಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 3 ಪ್ರತ್ಯೇಕ ಮಾರ್ಗಗಳನ್ನು ಒಳಗೊಂಡಿರುವ ಸ್ವಯಂಚಾಲಿತ ಟ್ರಾಮ್ ವ್ಯವಸ್ಥೆಯಾದ ಪೀಪಲ್ ಮೂವರ್ಸ್ ಸಿಸ್ಟಂ ಅನ್ನು ಬಳಸಬಹುದು: ಟರ್ಮಿನಲ್ 1 ಅನ್ನು C ಗೇಟ್ ಹಾದಿಗೆ ಸಂಪರ್ಕಿಸುವ ಗ್ರೀನ್ ಲೈನ್, ಟರ್ಮಿನಲ್ 1 ಅನ್ನು D ಗೇಟ್ ಹಾದಿಗೆ ಸಂಪರ್ಕಿಸುವ ಬ್ಲೂ ಲೈನ್ ಮತ್ತು D ಗೇಟ್ ಹಾದಿಗೆ ಟರ್ಮಿನಲ್ 3 ಅನ್ನು ಸಂಪರ್ಕಿಸುವ ರೆಡ್ ಲೈನ್.

LAS ನಲ್ಲಿ ಮಾಡಬಹುದಾದ ಕೆಲಸಗಳು

ಹ್ಯಾರಿ ರೀಡ್ ವಿಮಾನ ನಿಲ್ದಾಣವು 2 ಟರ್ಮಿನಲ್ ಕಟ್ಟಡಗಳಾದ್ಯಂತ ಕಲಾಕೃತಿ ಪ್ರದರ್ಶನಗಳು, ಶಿಲ್ಪಗಳು, ಮ್ಯೂರಲ್‌ಗಳು ಮತ್ತು ಮೊಸಾಯಿಕ್‌ಗಳು ಸೇರಿದಂತೆ ವಿವಿಧ ಆಕರ್ಷಣೆಗಳನ್ನು ಹೊಂದಿದೆ. ಲೆವೆಲ್ 2 ರಲ್ಲಿರುವ ಗೇಟ್ D ನಲ್ಲಿ ಪ್ಲೇ ಏರಿಯಾವನ್ನು ಮಕ್ಕಳು ಬಳಸಬಹುದು ಮತ್ತು ವಯಸ್ಕರು ವಿಮಾನ ನಿಲ್ದಾಣದಾದ್ಯಂತ ಇರುವ 1,000 ಕ್ಕೂ ಹೆಚ್ಚು ಸ್ಲಾಟ್ ಮಶೀನ್‌ಗಳಲ್ಲಿ ಆಡಬಹುದು. ಹೆಚ್ಚುವರಿಯಾಗಿ, ಪ್ರಯಾಣಿಕರು ದಕ್ಷಿಣ ನೆವಾಡಾದ ವಾಯುಯಾನ ಇತಿಹಾಸವನ್ನು ವಿವರಿಸುವ ವಿಮಾನ ನಿಲ್ದಾಣದ ವಸ್ತುಸಂಗ್ರಹಾಲಯವನ್ನು ಅನ್ವೇಷಿಸಬಹುದು. ವಸ್ತುಸಂಗ್ರಹಾಲಯಕ್ಕೆ ಪ್ರವೇಶ ಉಚಿತವಾಗಿದೆ, ಇದು ಬ್ಯಾಗೇಜ್ ಕ್ಲೈಮ್ ಪ್ರದೇಶದ ಮೇಲಿರುವ ಕಾಲ್ನಡಿಗೆ ಪ್ರದೇಶದಲ್ಲಿದೆ.

LAS ನಲ್ಲಿ ಕರೆನ್ಸಿ ವಿನಿಮಯ

ಹ್ಯಾರಿ ರೀಡ್ ವಿಮಾನ ನಿಲ್ದಾಣದ ಕರೆನ್ಸಿ ವಿನಿಮಯ ಸ್ಥಳಗಳನ್ನು ಟರ್ಮಿನಲ್ 1 ಮತ್ತು ಟರ್ಮಿನಲ್ 3‌ ರ ಬ್ಯಾಗೇಜ್ ಪ್ರದೇಶಗಳಲ್ಲಿ ಕಾಣಬಹುದು.

LAS ಬಳಿ ಇರುವ ಹೋಟೆಲ್‌ಗಳು

ನಿಮಗೆ ನಿಲುಗಡೆಯಿದ್ದಲ್ಲಿ ಅಥವಾ ರಾತ್ರಿ ನಿಮ್ಮ ಫ್ಲೈಟ್ ವಿಳಂಬವಾದಲ್ಲಿ ಅಥವಾ LAS ಸಮೀಪದ ಸ್ಥಳಕ್ಕೆ ಭೇಟಿಯಾಗುವ ಉದ್ದೇಶಕ್ಕಾಗಿ ಉಳಿದುಕೊಳ್ಳಲು ನಿಮಗೆ ಸ್ಥಳ ಬೇಕಿದ್ದರೆ, ಹತ್ತಿರದಲ್ಲಿ 60 ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ವಸತಿ ಸೌಲಭ್ಯಗಳಿವೆ.

LAS ಸಮೀಪದ ಆಸಕ್ತಿಕರ ಸ್ಥಳಗಳು

  • ಹೂವರ್ ಅಣೆಕಟ್ಟು
  • ಲಾಸ್ ವೇಗಾಸ್ ಸ್ಟ್ರಿಪ್
  • ರೆಡ್ ರಾಕ್ ಕ್ಯಾನಿಯನ್

LAS ಪ್ರಯಾಣಿಕರಿಗೆ ಸುರಕ್ಷತಾ ಸಲಹೆಗಳು

  • Uber ಪ್ಲಾಟ್‌ಫಾರ್ಮ್ ಮೂಲಕ ಬುಕ್ ಮಾಡಿದ ಟ್ರಿಪ್‌ಗಳನ್ನು ಮಾತ್ರ ಕೈಗೊಳ್ಳಿ: ನಿಮ್ಮ ಟ್ರಿಪ್ ‌ ಸ್ಟೇಟಸ್‌ ಅನ್ನು ನೀವು ವಿಶ್ವಾಸಾರ್ಹ ಕಾಂಟ್ಯಾಕ್ಟ್‌ ಜೊತೆಗೆ ಹಂಚಿಕೊಳ್ಳಬಹುದು ಮತ್ತು ನಿಮ್ಮ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್‌ ಮೂಲಕವೇ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ನಡೆಸಬೇಕು.
  • ನಿಮ್ಮ ಸವಾರಿಯನ್ನು ಪರಿಶೀಲಿಸಿ: ಬ್ರ್ಯಾಂಡ್ ಮತ್ತು ಮಾಡೆಲ್, ಪರವಾನಗಿ ಪ್ಲೇಟ್ ಮತ್ತು ಚಾಲಕನ ಫೋಟೋ ಆ್ಯಪ್‌ನಲ್ಲಿರುವುದಕ್ಕೆ ಹೋಲಿಕೆಯಾಗುತ್ತದೆಯೇ ಎಂಬದನ್ನು ವಾಹನ ಪ್ರವೇಶಿಸುವ ಮುನ್ನ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಸವಾರಿಯನ್ನು ಪರಿಶೀಲಿಸಿ: ಸವಾರರು ತಮ್ಮ ಪ್ರತಿಯೊಂದು ಸವಾರಿಗಳನ್ನು ಅನನ್ಯ, 4-ಅಂಕಿಯ PIN ನೊಂದಿಗೆ ಪರಿಶೀಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ, ಅದನ್ನು ಅವರು ತಮ್ಮ ಚಾಲಕರಿಗೆ ಮೌಖಿಕವಾಗಿ ಒದಗಿಸಬಹುದು. ಟ್ರಿಪ್‌ ಅನ್ನು ಪ್ರಾರಂಭಿಸಲು ಚಾಲಕರು ಅದನ್ನು ತಮ್ಮ ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಸವಾರರಿಗೆ ಅವರು ಸರಿಯಾದ ಕಾರನ್ನು ಹತ್ತುತ್ತಿದ್ದಾರೆ ಮತ್ತು ಚಾಲಕರಿಗೆ ಅವರು ಸರಿಯಾದ ಸವಾರರನ್ನು ಪಿಕಪ್‌ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
  • 911 ಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ: ಟ್ರಿಪ್‌ ಸಮಯದಲ್ಲಿ ತುರ್ತು ಪರಿಸ್ಥಿತಿ ಇದ್ದಲ್ಲಿ, ಸವಾರರು ಮತ್ತು ಚಾಲಕರು 911 ಗೆ ಕರೆ ಮಾಡಬಹುದು ಅಥವಾ ಸಂದೇಶ ಕಳುಹಿಸಬಹುದು ಮತ್ತು ಅವರನ್ನು ತಕ್ಷಣವೇ 911 ಆಪರೇಟರ್‌ಗೆ ಕನೆಕ್ಟ್‌ ಮಾಡಲಾಗುತ್ತದೆ. ಎಲ್ಲಾ ಸಂಬಂಧಿತ ಟ್ರಿಪ್ ಮತ್ತು ವಾಹನದ ಮಾಹಿತಿಯನ್ನು ಪರದೆಯ ಮೇಲೆ ಒಟ್ಟುಗೂಡಿಸಿ ತೋರಿಸಲಾಗುತ್ತದೆ (ಅದು ಫೋನ್ ಕರೆಯಾಗಿದ್ದರೆ) ಅಥವಾ ಟ್ರಿಪ್ ವಿವರಗಳನ್ನು ಪಠ್ಯ ಸಂದೇಶದಲ್ಲಿ ಸ್ವಯಂ ರಚಿಸಲಾಗುತ್ತದೆ
  • ವಿಶ್ವಾಸಾರ್ಹ ಕಾಂಟ್ಯಾಕ್ಟ್‌ಗಳು: ಸವಾರರು ತಮ್ಮ ಟ್ರಿಪ್ ಅನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಸ್ವಯಂಚಾಲಿತವಾಗಿ ಪ್ರಾಂಪ್ಟ್ ಪಡೆಯಲು ಆಯ್ಕೆ ಮಾಡಬಹುದು.

LAS ಬಗ್ಗೆ ಇಲ್ಲಿಇನ್ನಷ್ಟು ಮಾಹಿತಿ ಕಂಡುಕೊಳ್ಳಿ.

Facebook
Instagram
Twitter

ಈ ಪುಟವು Uber ನಿಯಂತ್ರಣದಲ್ಲಿಲ್ಲದ ಮತ್ತು ಕಾಲಕಾಲಕ್ಕೆ ಬದಲಾಯಿಸಬಹುದಾದ ಅಥವಾ ಅಪ್‌ಡೇಟ್‌ ಮಾಡಬಹುದಾದ ಮೂರನೇ-ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ. ಈ ಪುಟದಲ್ಲಿ ಒಳಗೊಂಡಿರುವ, Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸಿರದ ಯಾವುದೇ ಮಾಹಿತಿಯು ಕೇವಲ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಇದೆ ಮತ್ತು ಇಲ್ಲಿ ಒಳಗೊಂಡಿರುವ ಮಾಹಿತಿಯನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ಯಾವುದೇ ರೀತಿಯ ವಾರಂಟಿಗಳ ರಚನೆಗೆ ಯಾವುದೇ ವಿಧದಲ್ಲಿ ಅವಲಂಬಿಸುವಂತಿಲ್ಲ ಅಥವಾ ವ್ಯಾಖ್ಯಾನಿಸುವಂತಿಲ್ಲ ಅಥವಾ ಅರ್ಥೈಸುವಂತಿಲ್ಲ. ದೇಶ, ಪ್ರದೇಶ ಮತ್ತು ನಗರದ ಪ್ರಕಾರ ಕೆಲವು ಅಗತ್ಯತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.