Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (JFK)

ಸಾಂಪ್ರದಾಯಿಕ JFK Airport ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವಾದುದನ್ನು ಹುಡುಕುತ್ತಿದ್ದೀರಾ? ನೀವು JFK ಯಿಂದ ಟೈಮ್ಸ್ ಸ್ಕ್ವೇರ್‌ಗೆ ಹೋಗುತ್ತಿರಲಿ ಅಥವಾ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಿಂದ JFK ಗೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಆ್ಯಪ್‌ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು JFK ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.

Queens, NY 11430
+1 718-244-4444

search
ಎಲ್ಲಿಂದ?
Navigate right up
search
ಎಲ್ಲಿಗೆ?

ಜಗತ್ತಿನೆಲ್ಲೆಡೆ ಸವಾರಿ ಮಾಡಲು ವಿನಂತಿಸಿ

ಈಗಲೇ ಬಟನ್‌ ಟ್ಯಾಪ್‌ ಮಾಡಿ ಮತ್ತು 700 ಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಲ್ಲಿ ಏರ್‌ಪೋರ್ಟ್ ಸಾರಿಗೆ ಸೇವೆಯನ್ನು ಪಡೆಯಿರಿ.

ಸ್ಥಳೀಯರಂತೆ ತಿರುಗಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರಿಗೆ ಎಲ್ಲಾ ವಿಚಾರಗಳನ್ನು ನಿಭಾಯಿಸಲು ಬಿಡಿ, ಹೀಗಾಗಿ ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯವಿಲ್ಲ.

Uber ನಲ್ಲಿ ಆರಾಮದಾಯಕ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ಸಹ ನೈಜ-ಸಮಯದ ಬೆಲೆ ಮತ್ತು ನಗದು-ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.

ಪ್ರದೇಶದಲ್ಲಿ ಸವಾರಿ ಮಾಡುವಮಾರ್ಗಗಳು

ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಲ್ಲಿ ಪಿಕಪ್ಮಾಡಿ (JFK)

ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ

ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ JFK ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.

ಟರ್ಮಿನಲ್‌ನಿಂದ ನಿರ್ಗಮಿಸಿ

ನೀವು JFK ಪಿಕಪ್ ಪಾಯಿಂಟ್‌ಗಳ ಬಗ್ಗೆ ನಿರ್ದೇಶನಗಳನ್ನು ಆ್ಯಪ್‌ನಲ್ಲಿ ನೇರವಾಗಿ ಪಡೆಯುತ್ತೀರಿ.

1, 4 ಮತ್ತು 8 ಟರ್ಮಿನಲ್‌ಗಳಿಗಾಗಿ, ಆಗಮನ ಅಥವಾ ಬ್ಯಾಗೇಜ್ ಕ್ಲೈಮ್‌ನಿಂದ ಹೊರಗೆ ಹೋಗಿ ಮತ್ತು "ರೈಡ್ ಆ್ಯಪ್ ಪಿಕಪ್" ಮತ್ತು "ರಸ್ತೆ ಸಾರಿಗೆ" ಗಾಗಿ ಚಿಹ್ನೆಗಳನ್ನು ಅನುಸರಿಸಿ.

ಟರ್ಮಿನಲ್ 5 ಗಾಗಿ, ಹಂತ 4 ರಲ್ಲಿ ಸ್ಕೈವಾಕ್ ಮೂಲಕ ಏರ್‌ಟ್ರೈನ್‌ಗೆ ಮುಂದುವರಿಯಿರಿ. ಏರ್‌ಟ್ರೈನ್ ಬಳಸಿ ಮತ್ತು ಟರ್ಮಿನಲ್ 7 ರಲ್ಲಿ ನಿರ್ಗಮಿಸಿ. ರೈಡ್ ಆ್ಯಪ್ ‌ಪಿಕಪ್‌ಗಾಗಿ ಆರೇಂಜ್‌ ಲಾಟ್‌ಗೆ ಹೋಗಲು ಚಿಹ್ನೆಗಳನ್ನು ಅನುಸರಿಸಿ. ನೀವು ಆರೆಂಜ್ ಲಾಟ್ ರೈಡ್ ಆ್ಯಪ್ ಪಿಕಪ್ ಪ್ರದೇಶವನ್ನು ತಲುಪಿದ ನಂತರ ನಿಮ್ಮ ಸವಾರಿಗೆ ವಿನಂತಿಸಿ.

ಟರ್ಮಿನಲ್ 7 ಗಾಗಿ, "ಪಾರ್ಕಿಂಗ್", "ಏರ್ ಟ್ರೈನ್" ಮತ್ತು "ರೈಡ್ ಆ್ಯಪ್ ಪಿಕಪ್" ಗಾಗಿ ಚಿಹ್ನೆಗಳನ್ನು ಅನುಸರಿಸಿ. ಆರೆಂಜ್ ಪಾರ್ಕಿಂಗ್ ಗ್ಯಾರೇಜ್‌ನ ಹಂತ 2 ಕ್ಕೆ ಹೋಗಲು ಗ್ಯಾರೇಜ್‌ನಲ್ಲಿರುವ ಎಲಿವೇಟರ್‌ಗಳನ್ನು ಬಳಸುವ ಮೂಲಕ ಅಥವಾ ಟರ್ಮಿನಲ್ 7 ನಿರ್ಗಮನ ಹಂತಕ್ಕೆ ಹೋಗುವ ಮೂಲಕ ಟರ್ಮಿನಲ್‌ನಿಂದ ನಿರ್ಗಮಿಸಿ ಮತ್ತು ರಸ್ತೆಯನ್ನು ದಾಟುವ ಮೂಲಕ ಆರೆಂಜ್ ಲಾಟ್‌ ಅನ್ನು ತಲುಪಿ.

ನಿಮ್ಮ ಸ್ಥಳವನ್ನು ಖಚಿತಪಡಿಸಿ

Select your terminal and JFK pick-up location as specified by the app. Please note: this location may not always be at your nearest exit.

Your driver’s name, number plate and car colour will be shown in the app. Verify your ride before you get in. If you can’t find your driver, contact them through the app.

JFK ತನ್ನ 130 ಗೇಟ್‌ಗಳು ಮತ್ತು 5 ಟರ್ಮಿನಲ್‌ಗಳೊಂದಿಗೆ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ: 1, 4, 5, 7 ಮತ್ತು 8.

ಸವಾರರಿಂದ ಪ್ರಮುಖ ಪ್ರಶ್ನೆಗಳು

  • ಹೌದು. ನೀವು Uber ನೊಂದಿಗೆ ಸವಾರಿ ವಿನಂತಿಸಿಕೊಳ್ಳಬಹುದಾದ ಜಗತ್ತಿನೆಲ್ಲೆಡೆ ಇರುವ ವಿಮಾನ ನಿಲ್ದಾಣಗಳ ಈ ಪಟ್ಟಿಗೆ ಹೋಗಿ.

  • JFK ಗೆ ಹೋಗಲು (ಅಥವಾ ಬರಲು) ತಗಲುವ Uber ಟ್ರಿಪ್ ವೆಚ್ಚವು ನೀವು ವಿನಂತಿಸಿರುವ ಸವಾರಿಯ ಪ್ರಕಾರ, ಟ್ರಿಪ್‌ನ ಅಂದಾಜು ದೂರ ಮತ್ತು ಅವಧಿ, ಟೋಲ್‌ಗಳು ಹಾಗೂ ಸವಾರಿಗಳಿಗೆ ಪ್ರಸ್ತುತ ಇರುವ ಬೇಡಿಕೆಯನ್ನು ಅವಲಂಬಿಸಿರುತ್ತದೆ.

    ನೀವು ವಿನಂತಿಸುವ ಮೊದಲು ಇಲ್ಲಿಗೆ ಹೋಗಿ ನಿಮ್ಮ ಪಿಕಪ್ ಸ್ಥಳ ಹಾಗೂ ತಲುಪಬೇಕಾದ ಸ್ಥಳವನ್ನು ನಮೂದಿಸುವ ಮೂಲಕ ಅಂದಾಜು ದರವನ್ನು ನೋಡಬಹುದು. ನಂತರ, ನೀವು ಸವಾರಿಗಾಗಿ ವಿನಂತಿಸಿದಾಗ ನೈಜ-ಸಮಯದ ಅಂಶಗಳ ಆಧಾರದ ಮೇಲೆ ಆ್ಯಪ್‌ನಲ್ಲಿ ನಿಮ್ಮ ನಿಜವಾದ ದರ ಕಾಣಿಸುತ್ತದೆ.

  • ಪಿಕಪ್ ಸ್ಥಳಗಳು ನೀವು ವಿನಂತಿಸುವ ಸವಾರಿಯ ಪ್ರಕಾರ ಮತ್ತು ವಿಮಾನ ನಿಲ್ದಾಣದ ಗಾತ್ರವನ್ನು ಅವಲಂಬಿಸಿರಬಹುದು. ನಿಮ್ಮ ಚಾಲಕರನ್ನು ಎಲ್ಲಿ ಭೇಟಿ ಮಾಡಬೇಕೆಂಬುದರ ಕುರಿತು ಆ್ಯಪ್‌ನಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಿ. ವಿಮಾನ ನಿಲ್ದಾಣದಲ್ಲಿ ಗೊತ್ತುಪಡಿಸಿದ ರೈಡ್ ಶೇರ್ ವಲಯಗಳನ್ನು ಸೂಚಿಸುವ ಚಿಹ್ನೆಗಳಿಗಾಗಿ ಸಹ ನೀವು ಹುಡುಕಬಹುದು.

    ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.

ಇನ್ನಷ್ಟು ಮಾಹಿತಿ

  • Uber ಜೊತೆ ಚಾಲನೆ ಮಾಡುತ್ತಿರುವಿರಾ?

    ಸವಾರರನ್ನು ಎಲ್ಲಿಂದ ಪಿಕಪ್‌ ಮಾಡಬೇಕು ಎಂಬುದರಿಂದ ಹಿಡಿದು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ತನಕ, ನಿಮ್ಮ ವಿಮಾನ ನಿಲ್ದಾಣದ ಟ್ರಿಪ್‌ಗಳನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕಂಡುಕೊಳ್ಳಿ.

  • ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

    ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಂದ ಡ್ರಾಪ್‌ಆಫ್‌ ಮತ್ತು ಪಿಕಪ್‌ ಪಡೆಯಿರಿ.

1/2

JFK ವಿಮಾನ ನಿಲ್ದಾಣದ ಸಂದರ್ಶಕರ ಮಾಹಿತಿ

ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ವಿಶ್ವದ 22ನೇ ಅತ್ಯಂತ ಕಾರ್ಯನಿರತ ವಿಮಾನ ನಿಲ್ದಾಣವಾಗಿದ್ದು, ವಾರ್ಷಿಕವಾಗಿ 59 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ನ್ಯೂಯಾರ್ಕ್‌ ನಗರದ ಕ್ವೀನ್ಸ್ ‌ ಪ್ರದೇಶದಲ್ಲಿರುವ ಇದು ಮಿಡ್‌ಟೌನ್‌ ಮ್ಯಾನ್‌ಹ್ಯಾಟನ್‌ನ ಆಗ್ನೇಯಕ್ಕೆ ಸುಮಾರು 16 ಮೈಲಿ (26 ಕಿಲೋಮೀಟರ್) ದೂರದಲ್ಲಿದೆ. ಇದು ಸೂಕ್ತ ರಸ್ತೆ ಮತ್ತು ಸಂಚಾರ ಪರಿಸ್ಥಿತಿಗಳಲ್ಲಿ 35 ನಿಮಿಷಗಳನ್ನು ತೆಗೆದುಕೊಳ್ಳುವ ಪ್ರಯಾಣವಾಗಿದೆ.

JFK ವಿಮಾನ ನಿಲ್ದಾಣದ ಟರ್ಮಿನಲ್‌ಗಳು

JFK ವಿಮಾನ ನಿಲ್ದಾಣವು 5 ಮುಖ್ಯ ಪ್ರಯಾಣಿಕರ ಟರ್ಮಿನಲ್‌ಗಳನ್ನು ಹೊಂದಿದೆ: 1, 4, 5, 7 ಮತ್ತು 8, ಇವುಗಳ ನಡುವೆ 130 ಗೇಟ್‌ಗಳಿವೆ. ಅಮೆರಿಕನ್ ಮತ್ತು ಡೆಲ್ಟಾ ಸೇರಿದಂತೆ ಅನೇಕ ವಾಹಕಗಳಿಗೆ ಲೌಂಜ್‌ಗಳನ್ನು ವಿಮಾನ ನಿಲ್ದಾಣದಾದ್ಯಂತ ಅನೇಕ ಸ್ಥಳಗಳಲ್ಲಿ ಕಾಣಬಹುದು. ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ನೀವು ನಿಮ್ಮ ಟ್ರಿಪ್ ಅನ್ನು ಯೋಜಿಸಬಹುದು.

JFK ಟರ್ಮಿನಲ್ 1

  • ಏರ್ ಚೀನಾ
  • ಏರ್ ಫ್ರಾನ್ಸ್
  • ಏರ್ ನ್ಯೂಜಿಲೆಂಡ್
  • ಏರ್ ಸರ್ಬಿಯಾ
  • ಏರ್ ಸೆನೆಗಲ್
  • ಏಷ್ಯಾನಾ ಏರ್‌ಲೈನ್ಸ್
  • ಆಸ್ಟ್ರಿಯನ್ ಏರ್ಲೈನ್ಸ್
  • ಅಜೋರೆಸ್ ಏರ್‌ಲೈನ್ಸ್
  • ಬ್ರಸೆಲ್ಸ್ ಏರ್‌ಲೈನ್ಸ್
  • ಕೇಮನ್ ಏರ್‌ವೇಸ್
  • ಚೀನಾ ಈಸ್ಟರ್ನ್
  • ಈಸ್ಟರ್ನ್ ಏರ್‌ಲೈನ್ಸ್
  • ಈಜಿಪ್ಟ್‌ಏರ್
  • EVA ಏರ್
  • ಫ್ಲೇರ್ ಏರ್‌ಲೈನ್ಸ್
  • ITA ಏರ್‌ವೇಸ್
  • ಕೊರಿಯನ್ ಏರ್
  • ಲುಫ್ತಾನ್ಸಾ
  • ನಿಯೋಸ್
  • ಫಿಲಿಪೈನ್ ಏರ್‌ಲೈನ್ಸ್
  • ರಾಯಲ್ ಏರ್ ಮರೋಕ್
  • ಸೌದಿಯಾ
  • ಸ್ವಿಸ್
  • TAP ಪೋರ್ಚುಗಲ್
  • ಟರ್ಕಿಶ್ ಏರ್‌ಲೈನ್ಸ್
  • ವಿವಾ ಏರೋಬಸ್
  • ವೊಲಾರಿಸ್

JFK ಟರ್ಮಿನಲ್ 4

  • ಏರೋಮೆಕ್ಸಿಕೋ
  • ಏರ್ ಯುರೋಪಾ
  • ಏರ್ ಇಂಡಿಯಾ
  • ಏವಿಯಾಂಕಾ
  • ಏವಿಯಾಂಕಾ ಬ್ರೆಸಿಲ್
  • ಕೆರಿಬಿಯನ್ ಏರ್‌ಲೈನ್ಸ್
  • ಚೀನಾ ಏರ್‌ಲೈನ್ಸ್
  • ಕೋಪಾ ಏರ್‌ಲೈನ್ಸ್
  • ಡೆಲ್ಟಾ
  • El Al
  • ಎಮಿರೇಟ್ಸ್
  • ಎತಿಹಾದ್
  • ಹವಾಯಿಯನ್ ಏರ್‌ಲೈನ್ಸ್
  • ಕೀನ್ಯಾ ಏರ್‌ವೇಸ್
  • KLM ರಾಯಲ್ ಡಚ್‌ ಏರ್‌ಲೈನ್ಸ್
  • LATAM
  • ಸಿಂಗಾಪುರ್ ಏರ್‌ಲೈನ್ಸ್
  • ಉಜ್ಬೇಕಿಸ್ತಾನ್ ಏರ್‌ಲೈನ್ಸ್
  • ವರ್ಜಿನ್ ಅಟ್ಲಾಂಟಿಕ್
  • ವೊಲಾರಿಸ್
  • ವೆಸ್ಟ್‌ಜೆಟ್
  • ಕ್ಸಿಯಾಮೆನ್‌ಏರ್

JFK ಟರ್ಮಿನಲ್ 5

  • ಕೇಪ್ ಏರ್
  • ಜೆಟ್‌ಬ್ಲೂ

JFK ಟರ್ಮಿನಲ್ 7

  • ಏರ್ ಲಿಂಗಸ್
  • ಏರೋಲಿನಾಸ್ ಅರ್ಜೆಂಟಿನಾಸ್
  • ಏರ್ ಕೆನಡಾ
  • ಅಲಾಸ್ಕಾ ಏರ್‌ಲೈನ್ಸ್
  • ANA (ಆಲ್ ನಿಪ್ಪಾನ್)
  • ಕಾಂಡೋರ್
  • ಇಥಿಯೋಪಿಯನ್ ಏರ್‌ಲೈನ್ಸ್
  • ಐಸ್‌ಲ್ಯಾಂಡ್‌ಏರ್
  • ಕುವೈತ್ ಏರ್‌ವೇಸ್
  • LOT
  • ನಾರ್ಸ್ ಅಟ್ಲಾಂಟಿಕ್ ಏರ್‌ವೇಸ್
  • ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ (SAS)
  • ಸನ್ ‌ಕಂಟ್ರಿ ಏರ್‌ಲೈನ್ಸ್
  • ಉಕ್ರೇನ್ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್

JFK ಟರ್ಮಿನಲ್ 8

  • ಅಮೆರಿಕನ್‌ ಏರ್‌ಲೈನ್ಸ್
  • ಬ್ರಿಟಿಷ್ ಏರ್‌ವೇಸ್
  • ಕ್ಯಾಥೆ ಪೆಸಿಫಿಕ್
  • ಚೀನಾ ಸದರ್ನ್
  • ಫಿನ್‌ಏರ್
  • ಐಬೇರಿಯಾ
  • ಜಪಾನ್ ಏರ್‌ಲೈನ್ಸ್
  • ಲೆವೆಲ್
  • ಕ್ವಾಂಟಾಸ್
  • ಕತಾರ್ ಏರ್‌ವೇಸ್
  • ರಾಯಲ್ ಜೋರ್ಡಾನಿಯನ್

JFK ಅಂತರರಾಷ್ಟ್ರೀಯ ಟರ್ಮಿನಲ್

JFK ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸೇವೆಗಳು ಎಲ್ಲಾ ಟರ್ಮಿನಲ್‌ಗಳಲ್ಲಿವೆ. JFK ವಿಮಾನ ನಿಲ್ದಾಣವು 50 ಕ್ಕೂ ಹೆಚ್ಚು ದೇಶಗಳಿಗೆ ತಡೆರಹಿತ ವಿಮಾನಯಾನ ಸೇವೆಗಳನ್ನು ಒದಗಿಸುತ್ತದೆ.

JFK ವಿಮಾನ ನಿಲ್ದಾಣದಲ್ಲಿ ಡೈನಿಂಗ್

ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣವು ಎಲ್ಲಾ ಟರ್ಮಿನಲ್‌ಗಳಲ್ಲಿ ವ್ಯಾಪಕ ಶ್ರೇಣಿಯ ಡೈನಿಂಗ್‌ ಆಯ್ಕೆಗಳನ್ನು ಹೊಂದಿದೆ. 150 ಕ್ಕೂ ಹೆಚ್ಚು ಡೈನಿಂಗ್ ಆಯ್ಕೆಗಳೊಂದಿಗೆ, ಕಾಫಿ ಶಾಪ್‌ಗಳು, ಫಾಸ್ಟ್ ಫುಡ್ ಚೈನ್‌ಗಳು ಮತ್ತು JFK ವಿಮಾನ ನಿಲ್ದಾಣ ಬಾರ್‌ಗಳು ಸೇರಿದಂತೆ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳಿಗಾಗಿ ತಮ್ಮ ಇಚ್ಛೆಯ ಸ್ಥಳವನ್ನು ಆಯ್ಕೆಮಾಡಬಹುದು. ಟೇಬಲ್ ಸೇವೆಯೊಂದಿಗೆ ಊಟವನ್ನು ಬಯಸುವ ಪ್ರಯಾಣಿಕರು JFK ವಿಮಾನ ನಿಲ್ದಾಣದ ರೆಸ್ಟೋರೆಂಟ್‌ಗಳಲ್ಲಿ ಒಂದರಲ್ಲಿ ಊಟ ಮಾಡಲು ಆಯ್ಕೆಮಾಡಬಹುದು.

JFK ವಿಮಾನ ನಿಲ್ದಾಣದಲ್ಲಿ ತಿರುಗಾಡುವುದು

JFK ವಿಮಾನ ನಿಲ್ದಾಣದ ಶಟಲ್ ಸಾರಿಗೆಯನ್ನು ಏರ್‌ಟ್ರೈನ್ ಒದಗಿಸುತ್ತದೆ, ಇದು ಎಲ್ಲಾ ಪ್ರಯಾಣಿಕರ ಟರ್ಮಿನಲ್‌ಗಳನ್ನು ವಿಮಾನ ನಿಲ್ದಾಣ ಪಾರ್ಕಿಂಗ್ ಸ್ಥಳಗಳು, ಹೋಟೆಲ್ ಶಟಲ್ ಪಿಕಪ್ ಪ್ರದೇಶ, ಬಾಡಿಗೆ ಕಾರು ಕೇಂದ್ರ ಹಾಗೂ ಜಮೈಕಾ ಮತ್ತು ಹೊವಾರ್ಡ್ ಬೀಚ್ ನಿಲ್ದಾಣಗಳಲ್ಲಿ NYC ಯ ಸಾರ್ವಜನಿಕ ಸಾರಿಗೆ ಜಾಲಕ್ಕೆ ಸಂಪರ್ಕಿಸುವ ವ್ಯವಸ್ಥೆಯನ್ನು ಒದಗಿಸುತ್ತದೆ.

JFK ವಿಮಾನ ನಿಲ್ದಾಣದಲ್ಲಿ ಮಾಡಬಹುದಾದ ಕೆಲಸಗಳು

JFK ವಿಮಾನ ನಿಲ್ದಾಣದ ಶಾಪಿಂಗ್ ಅವಕಾಶಗಳಿಗಾಗಿ, ಪ್ರಯಾಣಿಕರು ಸ್ಮಾರಕಗಳು, ಉಡುಗೊರೆಗಳು ಮತ್ತು ಉನ್ನತ-ಮಟ್ಟದ ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವ ಸ್ಟೋರ್‌ಗಳು ಮತ್ತು ನ್ಯೂಸ್‌ಸ್ಟ್ಯಾಂಡ್‌ಗಳಿಗೆ ಭೇಟಿ ನೀಡಬಹುದು. ಸಂವಾದಾತ್ಮಕ ಚಟುವಟಿಕೆಗಳು ಮತ್ತು ಆಟಿಕೆಗಳನ್ನು ಹೊಂದಿರುವ ಸುರಕ್ಷಿತ ಆಟದ ಪ್ರದೇಶವನ್ನು ಮಕ್ಕಳು ಟರ್ಮಿನಲ್‌ 5 ರಲ್ಲಿ ಆ್ಯಕ್ಸೆಸ್‌ ಮಾಡಬಹುದು. JFK ವಿಮಾನ ನಿಲ್ದಾಣ ಮಸಾಜ್‌ಗಾಗಿ, ಪ್ರಯಾಣಿಕರು ಟರ್ಮಿನಲ್‌ಗಳು 1, 4 ಮತ್ತು 8 ರಲ್ಲಿರುವ ಸ್ಪಾಗಳಿಗೆ ಭೇಟಿ ನೀಡಬಹುದು.

JFK ವಿಮಾನ ನಿಲ್ದಾಣದಲ್ಲಿ ಕರೆನ್ಸಿ ವಿನಿಮಯ

JFK ವಿಮಾನ ನಿಲ್ದಾಣದ ಕರೆನ್ಸಿ ವಿನಿಮಯ ಕಚೇರಿಗಳನ್ನು ಎಲ್ಲಾ ಟರ್ಮಿನಲ್‌ಗಳಲ್ಲಿ ಕಾಣಬಹುದು.

JFK ವಿಮಾನ ನಿಲ್ದಾಣದ ಸಮೀಪವಿರುವ ಹೋಟೆಲ್‌ಗಳು

ನಿಮಗೆ ನಿಲುಗಡೆಯಿದ್ದಲ್ಲಿ ಅಥವಾ ರಾತ್ರಿ ನಿಮ್ಮ ಫ್ಲೈಟ್ ವಿಳಂಬವಾದಲ್ಲಿ ಅಥವಾ JFK ಸಮೀಪದ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶಕ್ಕಾಗಿ ಉಳಿದುಕೊಳ್ಳಲು ನಿಮಗೆ ಸ್ಥಳ ಬೇಕಿದ್ದರೆ, ಹತ್ತಿರದಲ್ಲಿ 10 ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ವಸತಿ ಸೌಲಭ್ಯಗಳಿವೆ. ಸಂದರ್ಶಕರು ಮ್ಯಾನ್‌ಹ್ಯಾಟನ್‌ನಲ್ಲಿ ಅಥವಾ ನ್ಯೂಯಾರ್ಕ್ ನಗರದ ಬೇರೆಡೆ ಉಳಿಯಲು ಸಹ ಆಯ್ಕೆಮಾಡಬಹುದು.

JFK ವಿಮಾನ ನಿಲ್ದಾಣದ ಬಳಿ ಆಸಕ್ತಿಕರ ತಾಣಗಳು

  • ಬ್ರಾಡ್‌ವೇ ಮತ್ತು ಥಿಯೇಟರ್ ಜಿಲ್ಲೆ
  • ಸೆಂಟ್ರಲ್ ಪಾರ್ಕ್
  • ಎಂಪೈರ್ ಸ್ಟೇಟ್ ಬಿಲ್ಡಿಂಗ್
  • ಲಿಬರ್ಟಿ ಪ್ರತಿಮೆ ಮತ್ತು ಎಲ್ಲಿಸ್ ದ್ವೀಪ

JFK ಬಗ್ಗೆ ಇಲ್ಲಿ ಇನ್ನಷ್ಟು ಮಾಹಿತಿ ಕಂಡುಕೊಳ್ಳಿ.

Facebook
Twitter

ಈ ಪುಟವು Uber ನಿಯಂತ್ರಣದಲ್ಲಿಲ್ಲದ ಮತ್ತು ಕಾಲಕಾಲಕ್ಕೆ ಬದಲಾಯಿಸಬಹುದಾದ ಅಥವಾ ಅಪ್‌ಡೇಟ್‌ ಮಾಡಬಹುದಾದ ಮೂರನೇ-ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ. ಈ ಪುಟದಲ್ಲಿ ಒಳಗೊಂಡಿರುವ, Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸಿರದ ಯಾವುದೇ ಮಾಹಿತಿಯು ಕೇವಲ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಇದೆ ಮತ್ತು ಇಲ್ಲಿ ಒಳಗೊಂಡಿರುವ ಮಾಹಿತಿಯನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ಯಾವುದೇ ರೀತಿಯ ವಾರಂಟಿಗಳ ರಚನೆಗೆ ಯಾವುದೇ ವಿಧದಲ್ಲಿ ಅವಲಂಬಿಸುವಂತಿಲ್ಲ ಅಥವಾ ವ್ಯಾಖ್ಯಾನಿಸುವಂತಿಲ್ಲ ಅಥವಾ ಅರ್ಥೈಸುವಂತಿಲ್ಲ. ದೇಶ, ಪ್ರದೇಶ ಮತ್ತು ನಗರದ ಪ್ರಕಾರ ಕೆಲವು ಅಗತ್ಯತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.