Please enable Javascript
Skip to main content

Uber for teens ಗೌಪ್ಯತೆ ಸೂಚನೆ

ನೀವು Uber for teens, ಬಳಸುವಾಗ ನಾವು ಸಂಗ್ರಹಿಸುವ ವೈಯಕ್ತಿಕ ಡೇಟಾ ("ಡೇಟಾ"), ನಾವು ಅದನ್ನು ಹೇಗೆ ಬಳಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ ಮತ್ತು ನಿಮ್ಮ ಡೇಟಾಗೆ ಸಂಬಂಧಿಸಿದಂತೆ ನಿಮ್ಮ ಹಕ್ಕುಗಳು ಮತ್ತು ಆಯ್ಕೆಗಳನ್ನು ಈ ಸೂಚನೆಯು ವಿವರಿಸುತ್ತದೆ. ನೀವು ಅದನ್ನು ನಿಮ್ಮ ಪಾಲಕ(ರು) ಅಥವಾ ಪೋಷಕ(ರ) (“ಪಾಲಕರು”) ಜೊತೆಗೆ ಓದಲು ಬಯಸಬಹುದು. ನೀವು Uber ನ ಸಂಪೂರ್ಣ ಗೌಪ್ಯತೆ ಸೂಚನೆಯನ್ನು ಇಲ್ಲಿ ಓದಬಹುದು.

ದೇಶ ನಿರ್ದಿಷ್ಟ ಮಾರ್ಗದರ್ಶನ ವಿಭಾಗದಲ್ಲಿ ಕೆಳಗೆ ಸೂಚಿಸದ ಹೊರತು, ಈ ಸೂಚನೆಯಲ್ಲಿ ವಿವರಿಸಿದ ಅಭ್ಯಾಸಗಳು Uber for teens ಅನ್ನು Uber ಒದಗಿಸುವಲ್ಲೆಲ್ಲಾ ಅನ್ವಯಿಸುತ್ತವೆ.

ನಿಮಗೆ ಪ್ರಶ್ನೆಗಳಿದ್ದರೆ, ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು. Uber ‌ನ ಗೌಪ್ಯತೆ ಅಭ್ಯಾಸಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು Uber ‌ನ ಗೌಪ್ಯತೆ ಕೇಂದ್ರದಲ್ಲಿ ಸಹ ಕಾಣಬಹುದು, ಇದನ್ನು ನೀವು Uber ಆ್ಯಪ್‌ಗಳಲ್ಲಿನ ಗೌಪ್ಯತೆ ಮೆನುವಿನಲ್ಲಿಯೂ ಕಾಣಬಹುದು.

1. Uber ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಯಾವಾಗ ಸಂಗ್ರಹಿಸುತ್ತದೆ?

2. ನನ್ನ ಡೇಟಾವನ್ನು Uber ಹೇಗೆ ಬಳಸುತ್ತದೆ?

3. Uber ನನ್ನ ಡೇಟಾವನ್ನು ನನ್ನ ಪೋಷಕ(ರ) ಜೊತೆಗೆ ಹಂಚಿಕೊಳ್ಳುತ್ತದೆಯೇ?

4. Uber ನನ್ನ ಡೇಟಾವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತದೆಯೇ?

5. ವೈಯಕ್ತಿಕಗೊಳಿಸಿದ ಜಾಹೀರಾತಿಗಾಗಿ Uber ನನ್ನ ಡೇಟಾವನ್ನು ಬಳಸುತ್ತದೆಯೇ?

6. ನನ್ನ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿಯಂತ್ರಿಸಲು ಸೆಟ್ಟಿಂಗ್‌ಗಳನ್ನು Uber ಒದಗಿಸುತ್ತದೆಯೇ?

7. ನನ್ನ ಡೇಟಾಗೆ ಸಂಬಂಧಿಸಿದಂತೆ ನನ್ನ ಹಕ್ಕುಗಳೇನು?

8. ನನ್ನ ಡೇಟಾಗೆ ಡೇಟಾ ನಿಯಂತ್ರಕ ಯಾರು?

9. ನಾನು Uber ‌ನ ಡೇಟಾ ಸಂರಕ್ಷಣಾ ಅಧಿಕಾರಿಯನ್ನು ಹೇಗೆ ಸಂಪರ್ಕಿಸಬಹುದು?

10. ನನ್ನ ಡೇಟಾವನ್ನು ಎಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ?

11. Uber ನನ್ನ ಡೇಟಾವನ್ನು ಎಷ್ಟು ಕಾಲ ಇಟ್ಟುಕೊಳ್ಳುತ್ತದೆ?

12. ಈ ಗೌಪ್ಯತೆ ಸೂಚನೆಗೆ ನವೀಕರಣಗಳು

13. ದೇಶ ನಿರ್ದಿಷ್ಟ ಮಾರ್ಗದರ್ಶನ

1. Uber ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಯಾವಾಗ ಸಂಗ್ರಹಿಸುತ್ತದೆ?

ನೀವು ಅಥವಾ ನಿಮ್ಮ ಪೋಷಕ(ರು) ನಮಗೆ ಒದಗಿಸುವ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ. ಇದು ಇವುಗಳನ್ನು ಒಳಗೊಂಡಿರುತ್ತದೆ:

  • ಖಾತೆ ಮಾಹಿತಿ: ನಿಮ್ಮ Uber for teens ಖಾತೆಯನ್ನು ರಚಿಸಲು ಮತ್ತು ನಿರ್ವಹಿಸಲು ನಮಗೆ ಅಗತ್ಯವಿರುವ ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಪಾವತಿ ಮಾಹಿತಿಯಂತಹ ಡೇಟಾ ಇದಾಗಿರುತ್ತದೆ.

  • ವಯಸ್ಸು: Uber for teens ಬಳಸಲು ನೀವು ಅರ್ಹರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ವಯಸ್ಸು ಮತ್ತು ಜನ್ಮ ದಿನಾಂಕವನ್ನು ಸಂಗ್ರಹಿಸುತ್ತೇವೆ.

  • ಗ್ರಾಹಕ ಬೆಂಬಲ ಡೇಟಾ: ನೀವು ಅಥವಾ ನಿಮ್ಮ ಪೋಷಕ(ರು) ನಮ್ಮ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಿದಾಗ ನಾವು ನಿಮ್ಮಿಂದ ಡೇಟಾವನ್ನು ಸಂಗ್ರಹಿಸುತ್ತೇವೆ, ಇದರಿಂದಾಗಿ Uber ಬಳಸುವಾಗ ನೀವು ಎದುರಿಸುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ಸಹಾಯ ಮಾಡಬಹುದು. ಇದು ನೀವು ಅಥವಾ ನಿಮ್ಮ ಪೋಷಕ(ರು) Uber ಬೆಂಬಲವನ್ನು ಸಂಪರ್ಕಿಸುವಾಗ ಒದಗಿಸುವ ಯಾವುದೇ ಮಾಹಿತಿಯನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ನಮ್ಮ ಬೆಂಬಲ ತಂಡದೊಂದಿಗೆ ಚಾಟ್ ಸಂದೇಶಗಳು ಅಥವಾ ಕರೆ ರೆಕಾರ್ಡಿಂಗ್‌ಗಳು.

  • ರೇಟಿಂಗ್‌ಗಳು ಮತ್ತು ಅಭಿಪ್ರಾಯ: ನಿಮ್ಮ ಚಾಲಕರು ಮತ್ತು ಡೆಲಿವರಿ ಪಾರ್ಟ್‌ನರ್‌ಗಳ ಬಗ್ಗೆ ಅಥವಾ ಅವರು ನಿಮ್ಮ ಬಗ್ಗೆ ಒದಗಿಸುವ ರೇಟಿಂಗ್‌ಗಳು ಮತ್ತು ಅಭಿಪ್ರಾಯವನ್ನು ನಾವು ಸಂಗ್ರಹಿಸುತ್ತೇವೆ. ರೇಟಿಂಗ್‌ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಇಲ್ಲಿ ಕಾಣಬಹುದು. Uber ಆ್ಯಪ್‌ನಲ್ಲಿ ಖಾತೆ ಮೆನುವಿನ ಅಡಿಯಲ್ಲಿ ನಿಮ್ಮ ರೇಟಿಂಗ್ ಅನ್ನು ನೀವು ನೋಡಬಹುದು.

  • ಸಮೀಕ್ಷೆ ಪ್ರತಿಕ್ರಿಯೆಗಳು.

ನೀವು Uber for teens ಬಳಸುವಾಗ ನಾವು ಸ್ವಯಂಚಾಲಿತವಾಗಿ ಸಹ ಡೇಟಾವನ್ನು ಸಂಗ್ರಹಿಸುತ್ತೇವೆ. ಇದು ಇವುಗಳನ್ನು ಒಳಗೊಂಡಿರುತ್ತದೆ:

  • ಸ್ಥಳ ಡೇಟಾ: ನೀವು ಸವಾರಿಗಾಗಿ ವಿನಂತಿಸಿದರೆ, ನಿಮ್ಮ ಟ್ರಿಪ್ ಸಮಯದಲ್ಲಿ ನಾವು ನಿಮ್ಮ ಚಾಲಕನ ಸ್ಥಳವನ್ನು ಟ್ರ್ಯಾಕ್ ಮಾಡುತ್ತೇವೆ ಮತ್ತು ಆ ಡೇಟಾವನ್ನು ನಿಮ್ಮ ಖಾತೆಗೆ ಲಿಂಕ್ ಮಾಡುತ್ತೇವೆ. ಇದು ನಿಮ್ಮ ಟ್ರಿಪ್‌ನಲ್ಲಿ ನೀವು ಎಲ್ಲಿದ್ದೀರಿ ಎಂಬುದನ್ನು ನಿಮಗೆ ಮತ್ತು ನಿಮ್ಮ ಪೋಷಕರಿಗೆ ಪ್ರದರ್ಶಿಸಲು ನಮಗೆ ಅನುಮತಿಸುತ್ತದೆ.

    ನಿಮ್ಮ ಅಂದಾಜು ಸ್ಥಳವನ್ನು ಸಹ ನಾವು ನಿರ್ಧರಿಸುತ್ತೇವೆ ಮತ್ತು ನಿಮ್ಮ ಫೋನ್‌ನಲ್ಲಿನ ಸೆಟ್ಟಿಂಗ್‌ಗಳ ಮೂಲಕ ಹಾಗೆ ಮಾಡಲು ನೀವು ನಮಗೆ ಅನುಮತಿಸಿದರೆ ನಿಮ್ಮ ನಿಖರವಾದ ಸ್ಥಳವನ್ನು ನಾವು ನಿರ್ಧರಿಸಬಹುದು. ನೀವು ಹಾಗೆ ಮಾಡಿದರೆ, ನೀವು ಸವಾರಿ ಅಥವಾ ಡೆಲಿವರಿಯನ್ನು ವಿನಂತಿಸಿದ ಸಮಯದಿಂದ ಸವಾರಿ ಮುಗಿಯುವವರೆಗೆ / ನಿಮ್ಮ ಆರ್ಡರ್ ಅನ್ನು ಡೆಲಿವರಿ ಮಾಡುವವರೆಗೆ ನಾವು ನಿಮ್ಮ ನಿಖರವಾದ ಸ್ಥಳವನ್ನು ಸಂಗ್ರಹಿಸುತ್ತೇವೆ. ನಿಮ್ಮ ಫೋನ್‌ನ ಸ್ಕ್ರೀನ್‌ನಲ್ಲಿ Uber ಆ್ಯಪ್ ತೆರೆದಿರುವಾಗ ಸಹ ನಾವು ಅಂತಹ ಡೇಟಾವನ್ನು ಸಂಗ್ರಹಿಸುತ್ತೇವೆ.

    ನಿಮ್ಮ ನಿಖರವಾದ ಸ್ಥಳವನ್ನು ಸಂಗ್ರಹಿಸಲು ನಮಗೆ ಅವಕಾಶ ನೀಡದೆಯೂ ಸಹ ನೀವು Uber ಅನ್ನು ಬಳಸಬಹುದು. ಆದಾಗ್ಯೂ, ಇದು ನಿಮಗೆ ಕಡಿಮೆ ಅನುಕೂಲಕರವಾಗಿರಬಹುದು, ಏಕೆಂದರೆ ನಿಮ್ಮ ಸ್ಥಳವನ್ನು ಪತ್ತೆಹಚ್ಚಲು ನಮಗೆ ಅನುಮತಿಸುವ ಬದಲು ನಿಮ್ಮ ಫೋನ್‌ನಲ್ಲಿ ನಿಮ್ಮ ಸ್ಥಳವನ್ನು ನೀವು ಟೈಪ್ ಮಾಡಬೇಕಾಗುತ್ತದೆ.

  • ಟ್ರಿಪ್ ಮತ್ತು ಆರ್ಡರ್ ಮಾಹಿತಿ: ನೀವು ವಿನಂತಿಸುವ ಟ್ರಿಪ್‌ಗಳು ಮತ್ತು ಡೆಲಿವರಿಗಳಿಗೆ ಸಂಬಂಧಿಸಿದ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ. ಇದರಲ್ಲಿ ನಿಮ್ಮ ಟ್ರಿಪ್‌ಗಳು ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸ್ಥಳಗಳು, ಡೆಲಿವರಿಗಾಗಿ ನೀವು ಆರ್ಡರ್ ಮಾಡುವ ಐಟಂಗಳು, ನಿಮ್ಮ ವಿನಂತಿ ಅಥವಾ ಆರ್ಡರ್‌ನ ದಿನಾಂಕ ಮತ್ತು ಸಮಯ, ಡೆಲಿವರಿ ವಿಳಾಸ ಮತ್ತು ಪಾವತಿಸಿದ ಮೊತ್ತ ಸೇರಿವೆ.

  • ಸಂವಹನಗಳ ಡೇಟಾ: ನೀವು Uber ಆ್ಯಪ್‌ಗಳ ಮೂಲಕ ನಿಮ್ಮ ಚಾಲಕ ಅಥವಾ ಡೆಲಿವರಿ ಪಾರ್ಟ್‌ನರ್ ಅನ್ನು ಸಂಪರ್ಕಿಸಿದಾಗ, ಯಾವುದೇ ಸಂದೇಶಗಳು ಅಥವಾ ಫೋನ್ ಕರೆಗಳ ವಿಷಯಗಳು (ನಾವು ಫೋನ್ ಕರೆಗಳನ್ನು ರೆಕಾರ್ಡ್ ಮಾಡುತ್ತಿದ್ದೇವೆ ಎಂದು ನಾವು ನಿಮಗೆ ಮೊದಲೇ ಹೇಳಿದರೆ) ಸೇರಿದಂತೆ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ.

  • ಆಡಿಯೋ ರೆಕಾರ್ಡಿಂಗ್‌ಗಳು: Uber for teens ನಿಮ್ಮ ಟ್ರಿಪ್‌ಗಳ ಆಡಿಯೊವನ್ನು ರೆಕಾರ್ಡ್ ಮಾಡಲು ನಿಮಗೆ ಅನುಮತಿಸುತ್ತದೆ. ನೀವು ಈ ವೈಶಿಷ್ಟ್ಯವನ್ನು ಆನ್ ಮಾಡಿದರೆ, ಆಡಿಯೊ ರೆಕಾರ್ಡಿಂಗ್‌ಗಳನ್ನು ಸ್ವಯಂಚಾಲಿತವಾಗಿ ಜನರೇಟ್ ಮಾ್ಡಲಾಗುತ್ತದೆ ಮತ್ತು ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ.

  • ಸಾಧನ ಡೇಟಾ: ನಮ್ಮ ಸೇವೆಗಳನ್ನು ಪ್ರವೇಶಿಸಲು ನೀವು ಬಳಸುವ ಫೋನ್ ಅಥವಾ ಇತರ ಸಾಧನಗಳ ಕುರಿತು ಡೇಟಾವನ್ನು ನಾವು ಸಂಗ್ರಹಿಸುತ್ತೇವೆ, ಇದರಲ್ಲಿ IP ವಿಳಾಸ, ಸಾಧನ ಗುರುತಿಸುವಿಕೆಗಳು ಮತ್ತು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್, ಸಾಫ್ಟ್‌ವೇರ್ ಮತ್ತು ಆದ್ಯತೆಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡಿರುತ್ತದೆ.

ನೀವು Uber ನ ಸೇವೆಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ, ಮೇಲೆ ವಿವರಿಸಿದ ಕೆಲವು ಡೇಟಾವನ್ನು ಸಂಗ್ರಹಿಸಲು ನಾವು “ಕುಕೀಗಳು” ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಬಳಸಬಹುದು. ಈ ತಂತ್ರಜ್ಞಾನಗಳ ನಮ್ಮ ಬಳಕೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Uber ‌ನ ಕುಕೀ ಸೂಚನೆ ಅನ್ನು ನೋಡಿ.

2. ನನ್ನ ಡೇಟಾವನ್ನು Uber ಹೇಗೆ ಬಳಸುತ್ತದೆ?

Uber for teens ಮೂಲಕ ಟ್ರಿಪ್‌ಗಳು ಅಥವಾ ಡೆಲಿವರಿಗಳಿಗಾಗಿ ವಿನಂತಿಸಲು ಮತ್ತು ಸ್ವೀಕರಿಸಲು ನಿಮಗೆ ಅನುವು ಮಾಡಿಕೊಡಲು Uber ನಿಮ್ಮ ಡೇಟಾವನ್ನು ಬಳಸುತ್ತದೆ. ಇದರಲ್ಲಿ ನಿಮ್ಮ ಖಾತೆಯನ್ನು ರಚಿಸಲು ಅಥವಾ ನವೀಕರಿಸಲು ನಿಮ್ಮ ಡೇಟಾವನ್ನು ಬಳಸುವುದು, ನಿಮ್ಮ ಚಾಲಕರಿಗೆ ನಿಮ್ಮನ್ನು ಪಿಕಪ್ ಮಾಡಲು ಅಥವಾ ನಿಮ್ಮ ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ಸಹಾಯ ಮಾಡುವುದು, ನಿಮ್ಮ ಸವಾರಿಗಳು ಅಥವಾ ಡೆಲಿವರಿಗಳನ್ನು ಟ್ರ್ಯಾಕ್ ಮಾಡುವುದು, ನಿಮಗೆ ಟ್ರಿಪ್ ಅಥವಾ ಡೆಲಿವರಿ ನವೀಕರಣಗಳನ್ನು ಒದಗಿಸುವುದು ಮತ್ತು ದರಗಳನ್ನು ಲೆಕ್ಕಾಚಾರ ಮಾಡುವುದನ್ನು ಒಳಗೊಂಡಿರುತ್ತದೆ.

ನಾವು ನಿಮ್ಮ ಡೇಟಾವನ್ನು ಈ ಕೆಳಗಿನ ಉದ್ದೇಶಗಳಿಗಾಗಿಯೂ ಬಳಸಬಹುದು:

  • ಸುರಕ್ಷತೆ, ಭದ್ರತೆ ಮತ್ತು ವಂಚನೆ : ಇದು ಟ್ರಿಪ್‌ಗಳ ಸಮಯದಲ್ಲಿ ನಿಮ್ಮ ಪೋಷಕ(ರ) ಜೊತೆಗೆ ನಿಮ್ಮ ಸ್ಥಳ ಡೇಟಾವನ್ನು ಹಂಚಿಕೊಳ್ಳುವುದು; ನಿಮ್ಮ ವಿನಂತಿಸಿದ ಡ್ರಾಪ್-ಆಫ್‌ನಲ್ಲಿ ನಿಮ್ಮ ಟ್ರಿಪ್ ಕೊನೆಗೊಳ್ಳುತ್ತದೆಯೇ ಎಂದು ಪರಿಶೀಲಿಸಲು ನಿಮ್ಮ ಸ್ಥಳ ಡೇಟಾವನ್ನು ಬಳಸುವುದು ಮತ್ತು ಅದು ಹಾಗಾಗದಿದ್ದರೆ ನಿಮ್ಮ ಪೋಷಕ(ರು) ಅಥವಾ ಪೊಲೀಸರಿಗೆ ಎಚ್ಚರಿಕೆ ನೀಡುವುದು; ವಂಚನೆಯನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಖಾತೆ, ಸ್ಥಳ ಮತ್ತು ಇತರ ಮಾಹಿತಿಯನ್ನು ಬಳಸುವುದು; ಟ್ರಿಪ್‌ಗಳು ಅಥವಾ ಡೆಲಿವರಿಗಳ ಸಮಯದಲ್ಲಿ ಸುರಕ್ಷತಾ ತಜ್ಞರಿಂದ ನೇರ ಬೆಂಬಲವನ್ನು ಒದಗಿಸಲು ನಿಮ್ಮ ಸ್ಥಳ, ಖಾತೆ ಮತ್ತು ಆರ್ಡರ್ ಮಾಹಿತಿಯನ್ನು ಬಳಸುವುದು; ಮತ್ತು Uber ‌ನ ನಿಯಮಗಳು ಮತ್ತು ಷರತ್ತುಗಳನ್ನು ಮತ್ತುಸಮುದಾಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ನಿಮ್ಮ ಡೇಟಾವನ್ನು (ಮತ್ತು ನೀವು ಸಂವಹನ ನಡೆಸುವ ಇತರ Uber ಬಳಕೆದಾರರ ಡೇಟಾವನ್ನು) ಬಳಸುವುದನ್ನು ಒಳಗೊಂಡಿರುತ್ತದೆ.
  • ಗ್ರಾಹಕ ಬೆಂಬಲ: ನೀವು Uber for teens ಬಳಸುವಾಗ ಅಥವಾ ನೀವು Uber ನ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಿದಾಗ ನೀವು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು ನಾವು ನಿಮ್ಮ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ.
  • ಸಂಶೋಧನೆ ಮತ್ತು ಅಭಿವೃದ್ಧಿ: ನೀವು ಮತ್ತು ಇತರರು Uber ಅನ್ನು ಹೇಗೆ ಬಳಸುತ್ತೀರಿ, ಮತ್ತು Uber ಅನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸೇವೆಗಳು ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲು ಅಥವಾ ಸುಧಾರಿಸಲು ಡೇಟಾವನ್ನು ಬಳಸುವುದನ್ನು ಇದು ಒಳಗೊಂಡಿದೆ.
  • ನೀವು ಮತ್ತು ನಿಮ್ಮ ಚಾಲಕ ಅಥವಾ ಡೆಲಿವರಿ ಪಾರ್ಟ್‌ನರ್ ನಡುವೆ ಸಂವಹನಗಳನ್ನು ಸಕ್ರಿಯಗೊಳಿಸುವುದು: ಇದು ನಿಮ್ಮ ಚಾಲಕ ಅಥವಾ ಡೆಲಿವರಿ ಪಾರ್ಟ್‌ನರ್ ಅನ್ನು ಸಂಪರ್ಕಿಸಲು ನಿಮಗೆ ಅನುಮತಿಸುತ್ತದೆ, ಉದಾಹರಣೆಗೆ, ನಿಮ್ಮ ಪಿಕ್-ಅಪ್ ಸ್ಥಳ ಅಥವಾ ಕಾರುಗಳಲ್ಲಿ ಬಿಟ್ಟಿರುವ ಐಟಂಗಳ ಕುರಿತು.
  • ಮಾರ್ಕೆಟಿಂಗ್: ನೀವು ಆನಂದಿಸಬಹುದು ಎಂಬುದಾಗಿ ನಾವು ಭಾವಿಸುವ Uber ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನಿಮಗೆ ತಿಳಿಸಲು ಸಂದೇಶಗಳನ್ನು ಕಳುಹಿಸುವುದಕ್ಕಾಗಿ ನಾವು ಡೇಟಾ ಬಳಸುತ್ತೇವೆ.
  • ಕಾನೂನು ಪ್ರಕ್ರಿಯೆಗಳು ಮತ್ತು ಅಗತ್ಯತೆಗಳು: ಕಾನೂನು ಕ್ರಮಗಳ ಸಂದರ್ಭದಲ್ಲಿ ಅಥವಾ ಕಾನೂನು ಜಾರಿ ಸಂಸ್ಥೆಗಳು ವಿನಂತಿಸಿದರೆ, Uber ಸೇವೆಗಳ ಬಳಕೆಗೆ ಸಂಬಂಧಿಸಿದ ಕ್ಲೈಮ್‌ಗಳು ಅಥವಾ ವಿವಾದಗಳನ್ನು ತನಿಖೆ ಮಾಡುವುದಕ್ಕಾಗಿ ಸೇರಿದಂತೆ ನಮ್ಮ ಕಾನೂನು ಅಗತ್ಯತೆಗಳನ್ನು ಪೂರೈಸುವ ಉದ್ದೇಶಗಳಿಗಾಗಿ ನಾವು ಡೇಟಾವನ್ನು ಬಳಸುತ್ತೇವೆ.

3. Uber ನನ್ನ ಡೇಟಾವನ್ನು ನನ್ನ ಪೋಷಕ(ರ) ಜೊತೆಗೆ ಹಂಚಿಕೊಳ್ಳುತ್ತದೆಯೇ?

ಹೌದು. ಟ್ರಿಪ್‌ಗಳಿಗೆ, ಇದು ನಿಮ್ಮ ಪಿಕ್-ಅಪ್ ಮತ್ತು ಡ್ರಾಪ್ ಆಫ್ ವಿಳಾಸಗಳು, ನೈಜ-ಸಮಯದ ಸ್ಥಳ, ಪ್ರಯಾಣಿಸಿದ ಮಾರ್ಗ, ದರ ಮತ್ತು ಪಾವತಿ ಮಾಹಿತಿಯನ್ನು ಒಳಗೊಂಡಿರುತ್ತದೆ. ಡೆಲಿವರಿಗಳಿಗೆ, ಇದು ನಿಮ್ಮ ಡೆಲಿವರಿ ಸ್ಥಳ, ವಿನಂತಿಸಿದ ಐಟಂಗಳು, ದರ ಮತ್ತು ಪಾವತಿ ಮಾಹಿತಿಯನ್ನು ಒಳಗೊಂಡಿರುತ್ತದೆ.

4. Uber ನನ್ನ ಡೇಟಾವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತದೆಯೇ?

ಹೌದು. ಇದರಲ್ಲಿ ಇವುಗಳ ಹಂಚಿಕೊಳ್ಳುವಿಕೆ ಸೇರಿದೆ:

  • ನಿಮ್ಮ ಮೊದಲ ಹೆಸರು, ಮತ್ತು ನಿಮ್ಮ ಚಾಲಕನೊಂದಿಗೆ ನಿಮ್ಮ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸ್ಥಳ.

  • ನಿಮ್ಮ ಮೊದಲ ಹೆಸರು, ಆರ್ಡರ್ ವಿವರಗಳು ಮತ್ತು ನೀವು ಆರ್ಡರ್ ಮಾಡುವ ರೆಸ್ಟೋರೆಂಟ್ ಅಥವಾ ವ್ಯಾಪಾರಿ ಮತ್ತು ನಿಮ್ಮ ಡೆಲಿವರಿ ಪಾರ್ಟ್‌ನರ್ ಜೊತೆಗೆ ಡೆಲಿವರಿ ಸ್ಥಳ.

  • ನಮ್ಮ ಆ್ಯಪ್‌ನಲ್ಲಿ ಡೇಟಾ ಹಂಚಿಕೆ ವೈಶಿಷ್ಟ್ಯಗಳನ್ನು ಬಳಸುವಾಗ ನೀವು ಹಂಚಿಕೊಳ್ಳಲು ಆಯ್ಕೆ ಮಾಡಿದ ಡೇಟಾ, ಉದಾಹರಣೆಗೆ ನೀವು ಇನ್ನೊಬ್ಬ Uber ಬಳಕೆದಾರರೊಂದಿಗೆ ನಿಮ್ಮ ನಿರೀಕ್ಷಿತ ಆಗಮನದ ಸಮಯ (ETA) ಅನ್ನು ಹಂಚಿಕೊಂಡಾಗ ಅಥವಾ ಘಟನೆಯೊಂದರ ನಂತರ ಪೊಲೀಸ್, ಅಗ್ನಿಶಾಮಕ ಅಥವಾ ತುರ್ತು ಸೇವೆಗಳೊಂದಿಗೆ ನಿಮ್ಮ ಮಾಹಿತಿಯನ್ನು ಹಂಚಿಕೊಂಡಾಗ.

  • Uber ನಿಮಗೆ ತನ್ನ ಸೇವೆಗಳನ್ನು ಒದಗಿಸಲು ಸಹಾಯ ಮಾಡುವ ಸೇವಾ ಪೂರೈಕೆದಾರರು ಮತ್ತು ಪಾರ್ಟ್‌ನರ್‌ಗಳೊಂದಿಗೆ. ಇದರಲ್ಲಿ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು, ಡೇಟಾವನ್ನು ಸಂಗ್ರಹಿಸಲು, ಗ್ರಾಹಕ ಬೆಂಬಲವನ್ನು ಒದಗಿಸಲು, ನಕ್ಷೆ ಸೇವೆಗಳನ್ನು ಸಕ್ರಿಯಗೊಳಿಸಲು, ನಿಮಗೆ ವೈಯಕ್ತೀಕರಿಸದ ಜಾಹೀರಾತುಗಳನ್ನು ಕಳುಹಿಸಲು, ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸಲು, ನಮ್ಮ ಸೇವೆಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಿಮೆಯನ್ನು ಒದಗಿಸಲು ನಮಗೆ ಸಹಾಯ ಮಾಡುವವರು ಒಳಗೊಂಡಿದ್ದಾರೆ. ಇದರಲ್ಲಿ ಅವುಗಳ ಪರಿಕರಗಳನ್ನು ನಮ್ಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಾವು ಬಳಸುವMeta ಮತ್ತುTikTok ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳು ಮತ್ತು ಲೆಕ್ಕಪರಿಶೋಧಕರು, ಸಲಹೆಗಾರರು ಮತ್ತು ವಕೀಲರಂತಹ ವೃತ್ತಿಪರ ಸೇವಾ ಪೂರೈಕೆದಾರರು ಸೇರಿದ್ದಾರೆ.

  • ಸಂಪೂರ್ಣವಾಗಿ ಅಥವಾ ಭಾಗಶಃ Uber ಒಡೆತನದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಕಂಪನಿಗಳೊಂದಿಗೆ.

  • ಸರ್ಕಾರಿ ಸಂಸ್ಥೆಗಳೊಂದಿಗೆ ಅಥವಾ ವಿಮಾ ಕ್ಲೈಮ್‌ಗಳು ಸೇರಿದಂತೆ ಕಾನೂನು ಪ್ರಕ್ರಿಯೆಗಳು ಅಥವಾ ವಿವಾದಗಳಿಗೆ ಸಂಬಂಧಿಸಿದಂತೆ ಕಾನೂನು ಕಾರಣಗಳಿಗಾಗಿ ಅಗತ್ಯವಿರುವ ಡೇಟಾ.

5. ವೈಯಕ್ತಿಕಗೊಳಿಸಿದ ಜಾಹೀರಾತಿಗಾಗಿ Uber ನನ್ನ ಡೇಟಾವನ್ನು ಬಳಸುತ್ತದೆಯೇ?

ಇಲ್ಲ. ನೀವು Uber for teens ಬಳಸುವಾಗ ಜಾಹೀರಾತುಗಳನ್ನು ನೋಡಬಹುದು, ಆದರೆ ಅವು ನಿಮಗೆ ವೈಯಕ್ತೀಕರಿಸಲ್ಪಟ್ಟಿರುವುದಿಲ್ಲ.

6. ನನ್ನ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿಯಂತ್ರಿಸಲು ಸೆಟ್ಟಿಂಗ್‌ಗಳನ್ನು Uber ಒದಗಿಸುತ್ತದೆಯೇ?

ಹೌದು! Uber ನ ಗೌಪ್ಯತೆ ಕೇಂದ್ರ ಮತ್ತು ಸೆಟ್ಟಿಂಗ್‌ಗಳು Uber ನಿಮ್ಮ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದನ್ನು ನಿಯಂತ್ರಿಸಲು ನಿಮಗೆ ಅವಕಾಶ ನೀಡುತ್ತವೆ. ಈ ಸೆಟ್ಟಿಂಗ್‌ಗಳಲ್ಲಿ ಇವುಗಳು ಸೇರಿವೆ:

a. ಸ್ಥಳ ಡೇಟಾ ಸಂಗ್ರಹಣೆ

ನಿಮ್ಮ ಫೋನ್‌ನಲ್ಲಿರುವ ಸೆಟ್ಟಿಂಗ್‌ಗಳು Uber ನಿಮ್ಮ ನಿಖರವಾದ ಸ್ಥಳ ಡೇಟಾವನ್ನು ಸಂಗ್ರಹಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತವೆ. ನೀವು ಆ ಸೆಟ್ಟಿಂಗ್‌ಗಳನ್ನು Uber ಆ್ಯಪ್‌ಗಳಲ್ಲಿರುವ ಗೌಪ್ಯತೆ ಕೇಂದ್ರ ದಲ್ಲಿನ ಸಾಧನ ಸ್ಥಳ ಮೆನು ಮುಖಾಂತರ ಪ್ರವೇಶಿಸಬಹುದು.

b. ಲೈವ್ ಸ್ಥಳವನ್ನು ಹಂಚಿಕೊಳ್ಳುವುದು

ಈ ಸೆಟ್ಟಿಂಗ್ ನಿಮಗೆ Uber ನಿಮ್ಮ ನಿಖರವಾದ ಸ್ಥಳವನ್ನು ನಿಮ್ಮ ಚಾಲಕ ಅಥವಾ ಡೆಲಿವರಿ ಪಾರ್ಟ್‌ನರ್‌ಗಳ ಜೊತೆಗೆ ಹಂಚಿಕೊಳ್ಳಬಹುದೇ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ನೀವು ಈ ಸೆಟ್ಟಿಂಗ್ ಅನ್ನು Uber ಆ್ಯಪ್‌ಗಳಲ್ಲಿರುವ ಗೌಪ್ಯತೆ ಕೇಂದ್ರ ದಲ್ಲಿನ ಲೈವ್ ಸ್ಥಳ ಮೆನು ಮೂಲಕ ಪ್ರವೇಶಿಸಬಹುದು.

c. ತುರ್ತು ಡೇಟಾ ಹಂಚಿಕೆ

ತುರ್ತು ಪರಿಸ್ಥಿತಿಯಲ್ಲಿ Uber ನಿಮ್ಮ ಡೇಟಾವನ್ನು (ನಿಮ್ಮ ಹೆಸರು, ಫೋನ್ ಸಂಖ್ಯೆ ಮತ್ತು ಸ್ಥಳ ಸೇರಿದಂತೆ) ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳೊಂದಿಗೆ ಹಂಚಿಕೊಳ್ಳಬಹುದೇ ಎಂಬುದನ್ನು ಆಯ್ಕೆ ಮಾಡಲು ಈ ಸೆಟ್ಟಿಂಗ್ ನಿಮಗೆ ಅನುಮತಿಸುತ್ತದೆ. ನೀವು ಈ ಸೆಟ್ಟಿಂಗ್ ಅನ್ನು ಗೌಪ್ಯತೆ ಕೇಂದ್ರ ದಲ್ಲಿರುವ ಲೈವ್ ಸ್ಥಳ ಮೆನು ಮೂಲಕ ಪ್ರವೇಶಿಸಬಹುದು.

d. ಅಧಿಸೂಚನೆಗಳು: ಕಡಿತಗಳು ಮತ್ತು ಸುದ್ದಿ

ಈ ಸೆಟ್ಟಿಂಗ್ Uber ‌ನಿಂದ ದರ ಕಡಿತಗಳು ಮತ್ತು ಸುದ್ದಿಗಳ ಕುರಿತು ಇಮೇಲ್‌ಗಳು ಮತ್ತು ಪುಶ್ ನೋಟಿಫಿಕೇಶನ್‌ಗಳನ್ನು Uber ಕಳುಹಿಸಬಹುದೇ ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ನೀವು ಈ ಸೆಟ್ಟಿಂಗ್ ಅನ್ನು ಇಲ್ಲಿ ಪ್ರವೇಶಿಸಬಹುದು.

e. ಮೂರನೇ-ಪಾರ್ಟಿ ಆ್ಯಪ್ ಪ್ರವೇಶ

ಈ ಸೆಟ್ಟಿಂಗ್ ನಿಮ್ಮ Uber ಖಾತೆಯನ್ನು ಪ್ರವೇಶಿಸಲು ನೀವು ಅನುಮತಿಸಿರುವ ಮೂರನೇ ಪಾರ್ಟಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲು ಮತ್ತು ನೀವು ಇನ್ನು ಮುಂದೆ ಬಯಸದ ಯಾವುದೇ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ನಿಮಗೆ ಅನುಮತಿಸುತ್ತದೆ. ನೀವು ಆ ಸೆಟ್ಟಿಂಗ್ ಅನ್ನು ಇಲ್ಲಿ ಪ್ರವೇಶಿಸಬಹುದು.

7. ನನ್ನ ಡೇಟಾಗೆ ಸಂಬಂಧಿಸಿದಂತೆ ನನ್ನ ಹಕ್ಕುಗಳೇನು?

ನಿಮ್ಮ ಡೇಟಾಗೆ ಸಂಬಂಧಿಸಿದಂತೆ ಈ ಕೆಳಗಿನ ಹಕ್ಕುಗಳನ್ನು ಚಲಾಯಿಸಲು ಇಲ್ಲಿ, Uber ನಗೌಪ್ಯತೆ ಕೇಂದ್ರದ ಮೂಲಕ, Uber ನ ಆ್ಯಪ್‌ಗಳಲ್ಲಿನ ಗೌಪ್ಯತೆ ಮೆನು ಮೂಲಕ ಮತ್ತು/ಅಥವಾ ಕೆಳಗಿನ ಲಿಂಕ್‌ಗಳ ಮೂಲಕ ನೀವು ವಿನಂತಿಗಳನ್ನು ಸಲ್ಲಿಸಬಹುದು.

ನೀವು ಎಲ್ಲಿ ವಾಸಿಸುತ್ತೀರಿ ಎಂಬುದರ ಆಧಾರದ ಮೇಲೆ, GDPR ಸೇರಿದಂತೆ ಡೇಟಾ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ನಿಮ್ಮ ದೇಶದ ಸರ್ಕಾರಿ ಏಜೆನ್ಸಿಗೆ ದೂರುಗಳನ್ನು ಸಲ್ಲಿಸುವ ಹಕ್ಕನ್ನು ಸಹ ನೀವು ಹೊಂದಿರಬಹುದು.

ನಿಮ್ಮ ದೂರು ಯುನೈಟೆಡ್ ಸ್ಟೇಟ್ಸ್‌ನಲ್ಲಿ Uber ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವುದಕ್ಕೆ ಸಂಬಂಧಿಸಿದ್ದರೆ, ನೀವು ಆ ದೂರುಗಳನ್ನು Uber ಜೊತೆಗೆ ಅಥವಾ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಟ್ರೇಡ್ ಕಮಿಷನ್‌ಗೆ ಅಥವಾ ಕೆಲವು ಸಂದರ್ಭಗಳಲ್ಲಿ "ಮಧ್ಯಸ್ಥಿಕೆ" ಎಂದು ಕರೆಯಲಾಗುವ ಕಾನೂನು ಪ್ರಕ್ರಿಯೆಯ ಮೂಲಕವೂ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Uber ನ ಗೌಪ್ಯತೆ ಸೂಚನೆ ನೋಡಿ.

a. ಡೇಟಾ ಪ್ರವೇಶ ಮತ್ತು ದತ್ತಾಂಶ ಪೋರ್ಟಬಿಲಿಟಿ ಹಕ್ಕುಗಳು

ಈ ಹಕ್ಕುಗಳು Uber ನಿಮ್ಮ ಕುರಿತಾಗಿ ಯಾವ ಡೇಟಾವನ್ನು ಹೊಂದಿದೆ ಎಂಬುದನ್ನು ನಿಮಗೆ ತಿಳಿಸಲು ಮತ್ತು ನಿಮ್ಮ ಡೇಟಾದ ಪ್ರತಿಯನ್ನು ನಿಮಗೆ ಒದಗಿಸಲು ವಿನಂತಿಸಲು ನಿಮಗೆ ಅವಕಾಶ ನೀಡುತ್ತವೆ.

ಮೇಲಿನ ವಿಧಾನಗಳ ಜೊತೆಗೆ, ನೀವು Uber ಆ್ಯಪ್‌ಗಳಲ್ಲಿ ನಿಮ್ಮ ಹೆಚ್ಚಿನ ಖಾತೆ ಮಾಹಿತಿಯನ್ನು ಪ್ರವೇಶಿಸಬಹುದು, ಅಥವಾ ನಮ್ಮ ನಿಮ್ಮ ಡೇಟಾವನ್ನು ಅನ್ವೇಷಿಸಿ ವೈಶಿಷ್ಟ್ಯವನ್ನು ನೀವು ಎಷ್ಟು ಟ್ರಿಪ್‌ಗಳು ಅಥವಾ ಆರ್ಡರ್‌ಗಳ ಸಂಖ್ಯೆ ಮತ್ತು ಎಷ್ಟು ದಿನಗಳಿಂದ Uber ಬಳಕೆದಾರರಾಗಿರುವಿರಿ ಎಂಬಂತಹ ಪದೇ ಪದೇ ವಿನಂತಿಸಿದ ಡೇಟಾದ ಸಾರಾಂಶವನ್ನು ನೋಡಲು ಬಳಸಿ.

ನೀವು ನಮ್ಮ ನನ್ನ ಡೇಟಾವನ್ನು ಡೌನ್‌ಲೋಡ್ ಮಾಡಿ ಪರಿಕರವನ್ನು ಸಹ ನಿಮ್ಮ ಖಾತೆ, ಬಳಕೆ, ಸಂವಹನಗಳು ಮತ್ತು ಸಾಧನದ ಡೇಟಾ ಸೇರಿದಂತೆ ಡೇಟಾದ ನಕಲನ್ನು (ಪೋರ್ಟಬಲ್ ಸ್ವರೂಪದಲ್ಲಿ) ಪಡೆಯಲು ಬಳಸಬಹುದು.

b. ಆಕ್ಷೇಪಣೆಯ ಹಕ್ಕು

ಈ ಹಕ್ಕು ನಿಮ್ಮ ಎಲ್ಲಾ ಅಥವಾ ಕೆಲವು ಡೇಟಾವನ್ನು ಬಳಸುವುದನ್ನು ನಿಲ್ಲಿಸುವಂತೆ ಅಥವಾ ನಿಮ್ಮ ಡೇಟಾದ ಬಳಕೆಯನ್ನು ನಾವು ಮಿತಿಗೊಳಿಸುವಂತೆ ವಿನಂತಿಸಲು ಅವಕಾಶ ನೀಡುತ್ತದೆ. ನೀವು ಆಕ್ಷೇಪಿಸಿದರೆ, ನಮ್ಮ ಸೇವೆಗಳನ್ನು ಒದಗಿಸಲು ಅಗತ್ಯವಿದ್ದರೆ ಅಥವಾ ಕಾನೂನಿನಿಂದ ಅನುಮತಿಸಲ್ಪಟ್ಟರೆ, Uber ನಿಮ್ಮ ಡೇಟಾವನ್ನು ಬಳಸುವುದನ್ನು ಮುಂದುವರಿಸಬಹುದು.

c. ತಿದ್ದುಪಡಿಯ ಹಕ್ಕು

ಈ ಹಕ್ಕು Uber ಗೆ ನಿಮ್ಮ ಬಗ್ಗೆ ಹೊಂದಿರುವ ಯಾವುದೇ ತಪ್ಪು ಮಾಹಿತಿಯನ್ನು ಸರಿಪಡಿಸಲು ನಿಮಗೆ ವಿನಂತಿಸಲು ಅನುಮತಿಸುತ್ತದೆ.

d. ಮರೆಯಲ್ಪಡುವ ಹಕ್ಕು

ಈ ಹಕ್ಕು ನಿಮ್ಮ ಖಾತೆಯನ್ನು ಮತ್ತು ನಿಮ್ಮ ಬಗ್ಗೆ ನಾವು ಸಂಗ್ರಹಿಸಿದ ಡೇಟಾವನ್ನು Uber ಅಳಿಸುವಂತೆ ನೀವು ವಿನಂತಿಸಲು ನಿಮಗೆ ಅನುಮತಿಸುತ್ತದೆ. ನೀವು ಆ ವಿನಂತಿಯನ್ನುಇಲ್ಲಿ ಅಥವಾ ಮೇಲಿನ ವಿಧಾನಗಳ ಮೂಲಕ ಸಲ್ಲಿಸಬಹುದು.

8. ನನ್ನ ಡೇಟಾಗೆ ಡೇಟಾ ನಿಯಂತ್ರಕ ಯಾರು?

"ಡೇಟಾ ನಿಯಂತ್ರಕ" ಎಂದರೆ ನಿಮ್ಮ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಬಳಸಲಾಗುತ್ತದೆ ಮತ್ತು ರಕ್ಷಿಸಲಾಗುತ್ತದೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯುತ ಕಂಪನಿ ಅಥವಾ ಕಂಪನಿಗಳಾಗಿವೆ. ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್ ಅಥವಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೀವು Uber for teens ಬಳಸುವಾಗ Uber Technologies Inc. (U.S. ‌ನಲ್ಲಿ ನೆಲೆಗೊಂಡಿದೆ) ಮತ್ತು Uber B.V. (ನೆದರ್‌ಲ್ಯಾಂಡ್ಸ್‌ನಲ್ಲಿ ನೆಲೆಗೊಂಡಿದೆ) ನಿಮ್ಮ ಡೇಟಾಗೆ ಡೇಟಾ ನಿಯಂತ್ರಕಗಳಾಗಿವೆ.

ನೀವು ಬೇರೆಲ್ಲಿಯಾದರೂ ನೀವು Uber for teens ಬಳಸಿದರೆ, Uber Technologies Inc. ಡೇಟಾ ನಿಯಂತ್ರಕವಾಗಿರುತ್ತದೆ.

9. ನಾನು Uber ‌ನ ಡೇಟಾ ಸಂರಕ್ಷಣಾ ಅಧಿಕಾರಿಯನ್ನು ಹೇಗೆ ಸಂಪರ್ಕಿಸಬಹುದು?

ನಿಮ್ಮ ಡೇಟಾವನ್ನು ಸಂಗ್ರಹಿಸುವಾಗ ಮತ್ತು ಬಳಸುವಾಗ ಯುರೋಪಿಯನ್ ಒಕ್ಕೂಟ ಮತ್ತು ಇತರೆಡೆಗಳಲ್ಲಿನ ಡೇಟಾ ಸಂರಕ್ಷಣಾ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು Uber ‌ನ ಡೇಟಾ ಸಂರಕ್ಷಣಾ ಅಧಿಕಾರಿ ("DPO") Uber ‌ಗೆ ಸಹಾಯ ಮಾಡುತ್ತಾರೆ. ಯಾವುದೇ ಪ್ರಶ್ನೆಗಳಿಗೆ ನೀವು Uber ‌ನ DPO ಅನ್ನು ಇಲ್ಲಿ, ಅಥವಾ ಇಲ್ಲಿಗೆ ಮೇಲ್ ಕಳುಹಿಸುವ ಮೂಲಕ ಸಂಪರ್ಕಿಸಬಹುದು Uber B.V. (Burgerweeshuispad 301, 1076 HR Amsterdam, The Netherlands).

10. ನನ್ನ ಡೇಟಾವನ್ನು ಎಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ?

Uber ಜಾಗತಿಕವಾಗಿ ಬಳಕೆದಾರರ ಡೇಟಾವನ್ನು ನಿರ್ವಹಿಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ. ಇದರರ್ಥ ನಿಮ್ಮ ವೈಯಕ್ತಿಕ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ದೇಶಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ, ಅವರ ಡೇಟಾ ಸಂರಕ್ಷಣಾ ಕಾನೂನುಗಳು ನೀವು ವಾಸಿಸುವ ಸ್ಥಳಗಳಿಗಿಂತ ಭಿನ್ನವಾಗಿರಬಹುದು. ನೀವು ವಾಸಿಸುವ ಸ್ಥಳದ ಹೊರಗೆ ನಿಮ್ಮ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸಿದಾಗ, GDPR ಒಳಗೊಂಡಂತೆ ಡೇಟಾ ಸಂರಕ್ಷಣಾ ಕಾನೂನುಗಳ ಪ್ರಕಾರ ಆ ಡೇಟಾವನ್ನು ರಕ್ಷಿಸಲು ನಾವು ಸೂಕ್ತ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತೇವೆ.

ಆ ಸುರಕ್ಷತಾ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Uber ‌ನಗೌಪ್ಯತೆ ಸೂಚನೆ ಅನ್ನು ನೋಡಿ.

11. Uber ನನ್ನ ಡೇಟಾವನ್ನು ಎಷ್ಟು ಕಾಲ ಇಟ್ಟುಕೊಳ್ಳುತ್ತದೆ?

ನಮ್ಮ ಸೇವೆಗಳನ್ನು ಒದಗಿಸಲು ಮತ್ತು ಈ ಸೂಚನೆಯಲ್ಲಿ ವಿವರಿಸಿದ ಇತರ ಉದ್ದೇಶಗಳಿಗಾಗಿ Uber ನಿಮ್ಮ ಡೇಟಾವನ್ನು ಅಗತ್ಯವಿರುವಷ್ಟು ಕಾಲ ಇಟ್ಟುಕೊಳ್ಳುತ್ತದೆ. ಈ ಉದ್ದೇಶಗಳಿಗಾಗಿ ಇನ್ನು ಮುಂದೆ ಅಗತ್ಯವಿಲ್ಲದಿದ್ದರೆ, ನಾವು ನಿಮ್ಮ ಡೇಟಾವನ್ನು ಅಳಿಸುತ್ತೇವೆ.

ನಿಮ್ಮ ಖಾತೆಯನ್ನು ಅಳಿಸಲು ನೀವು ಇಲ್ಲಿ ಅಥವಾ ಗೌಪ್ಯತೆ ಕೇಂದ್ರ ಮೂಲಕ ವಿನಂತಿಸಬಹುದು. ನೀವು ಖಾತೆ ಅಳಿಸುವಿಕೆಗಾಗಿ ವಿನಂತಿಸಿದರೆ, ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಅಥವಾ ಮೇಲೆ ವಿವರಿಸಿದಂತೆ ಇತರ ಕಾನೂನುಬದ್ಧ ಕಾರಣಗಳಿಗಾಗಿ ನಾವು ಡೇಟಾವನ್ನು ಇಟ್ಟುಕೊಳ್ಳಬೇಕಾಗಿಲ್ಲದಿದ್ದರೆ, ನಾವು ನಿಮ್ಮ ಡೇಟಾವನ್ನು ಅಳಿಸುತ್ತೇವೆ.

12. ಈ ಗೌಪ್ಯತೆ ಸೂಚನೆಗೆ ನವೀಕರಣಗಳು

ಕೆಲವೊಮ್ಮೆ ನಾವು ಈ ಸೂಚನೆಯನ್ನು ನವೀಕರಿಸಬೇಕಾಗುತ್ತದೆ.

ನಾವು ಪ್ರಮುಖ ಬದಲಾವಣೆಗಳನ್ನು ಮಾಡಿದರೆ, ನಾವು Uber ಆ್ಯಪ್‌ಗಳು ಮೂಲಕ ಅಥವಾ ಇಮೇಲ್ ಮೂಲಕ ನಿಮಗೆ ಮುಂಚಿತವಾಗಿ ತಿಳಿಸುತ್ತೇವೆ.

13. ದೇಶ ನಿರ್ದಿಷ್ಟ ಮಾರ್ಗದರ್ಶನ

  • ಅರ್ಜೆಂಟೀನಾದಲ್ಲಿನ ಬಳಕೆದಾರರಿಗೆ

    ಡೇಟಾ ಸಂರಕ್ಷಣಾ ಕಾನೂನಿನಡಿಯಲ್ಲಿ Uber ನಿಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂಬುದಾಗಿ ನೀವು ಭಾವಿಸಿದರೆ, ನೀವು ಸಾರ್ವಜನಿಕ ಮಾಹಿತಿಗೆ ಪ್ರವೇಶದ ಏಜೆನ್ಸಿಗೆ ದೂರುಗಳನ್ನು ಸಲ್ಲಿಸಬಹುದು.

  • ಆಸ್ಟ್ರೇಲಿಯಾದಲ್ಲಿನ ಬಳಕೆದಾರರಿಗೆ

    ಆಸ್ಟ್ರೇಲಿಯನ್ ಗೌಪ್ಯತೆ ತತ್ವಗಳೊಂದಿಗೆ ನಮ್ಮ ಅನುಸರಣೆಗೆ ಸಂಬಂಧಿಸಿದಂತೆ ನೀವು Uber ಅನ್ನು ಇಲ್ಲಿ ಸಂಪರ್ಕಿಸಬಹುದು. ಅಂತಹ ಸಂಪರ್ಕಗಳನ್ನು Uber ನ ಗ್ರಾಹಕ ಸೇವೆ ಮತ್ತು/ಅಥವಾ ಸಂಬಂಧಿತ ಗೌಪ್ಯತೆ ತಂಡಗಳು ಸಮಂಜಸವಾದ ಕಾಲಮಿತಿಯೊಳಗೆ ಪರಿಹರಿಸುತ್ತವೆ. ಅಂತಹ ಅನುಸರಣೆಯ ಕುರಿತಾಗಿನ ಕಳವಳಗಳ ಕುರಿತು ನೀವು ಇಲ್ಲಿ ನೀವು ಆಸ್ಟ್ರೇಲಿಯನ್ ಮಾಹಿತಿ ಆಯುಕ್ತರ ಕಚೇರಿಯನ್ನು ಸಹ ಸಂಪರ್ಕಿಸಬಹುದು.

  • ಬ್ರೆಜಿಲ್‌ನಲ್ಲಿರುವ ಬಳಕೆದಾರರಿಗೆ

    ಬ್ರೆಜಿಲ್‌ನ ಸಾಮಾನ್ಯ ಡೇಟಾ ಸಂರಕ್ಷಣಾ ಕಾನೂನಿಗೆ (Lei Geral de Proteção de Dados - LGPD) ಸಂಬಂಧಿಸಿದಂತೆ Uber ‌ನ ಗೌಪ್ಯತೆ ಅಭ್ಯಾಸಗಳ ಬಗ್ಗೆ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

    ದಯವಿಟ್ಟು "ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಸ್ವಿಟ್ಜರ್ಲೆಂಡ್ ಮತ್ತು ಬ್ರೆಜಿಲ್‌ನ ಬಳಕೆದಾರರಿಗಾಗಿ" ಎಂಬ ಶೀರ್ಷಿಕೆಯ ಕೆಳಗಿನ ವಿಭಾಗವನ್ನು ಸಹ ನೋಡಿ.

  • ಕೊಲಂಬಿಯಾ, ಹೊಂಡುರಾಸ್ ಮತ್ತು ಜಮೈಕಾದಲ್ಲಿನ ಬಳಕೆದಾರರಿಗಾಗಿ

    ಈ ಸೂಚನೆಯಲ್ಲಿ ಬಳಸಲಾದ "ಚಾಲಕರು" ಅನ್ನು "ಲೆಸ್ಸರ್‌ಗಳು" ಎಂದು ಕರೆಯಲಾಗುತ್ತದೆ.

  • ಮೆಕ್ಸಿಕೋದಲ್ಲಿರುವ ಬಳಕೆದಾರರಿಗೆ

    ಮೆಕ್ಸಿಕೋದ ವೈಯಕ್ತಿಕ ಡೇಟಾ ಸಂರಕ್ಷಣಾ ಕಾನೂನಿಗೆ (Ley Federal de Protección de Datos Personales en Posesión de los Particulares) ಸಂಬಂಧಿಸಿದಂತೆ Uber ‌ನ ಗೌಪ್ಯತೆ ಅಭ್ಯಾಸಗಳ ಕುರಿತಾದ ಮಾಹಿತಿಗಾಗಿ ದಯವಿಟ್ಟುಇಲ್ಲಿ ಕ್ಲಿಕ್ ಮಾಡಿ.

  • ದಕ್ಷಿಣ ಕೊರಿಯಾದಲ್ಲಿನ ಬಳಕೆದಾರರಿಗಾಗಿ

    ಈ ಸೂಚನೆಯು ದಕ್ಷಿಣ ಕೊರಿಯಾದ Uber for teens ಬಳಕೆದಾರರಿಗೆ ಅನ್ವಯಿಸುವುದಿಲ್ಲ. ಕೊರಿಯಾದಲ್ಲಿ ಅನ್ವಯಿಸುವ Uber for teens ಗೌಪ್ಯತೆ ಸೂಚನೆಯನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

  • ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿನ ಬಳಕೆದಾರರಿಗೆ

    ನನ್ನ ಡೇಟಾವನ್ನು ಬಳಸಲು Uber ಯಾವ ಕಾನೂನು ಆಧಾರಗಳನ್ನು ಹೊಂದಿದೆ?

    ನೀವು ವಾಸಿಸುವಲ್ಲಿನ ಡೇಟಾ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವಂತೆ, ನಿಮ್ಮ ಡೇಟಾವನ್ನು ಸಂಗ್ರಹಿಸಲು ಮತ್ತು ಬಳಸಲು Uber ನಿಮ್ಮ ಪೋಷಕ(ರ) ಒಪ್ಪಿಗೆಯನ್ನು ಕಾನೂನು ಆಧಾರವಾಗಿ ಅವಲಂಬಿಸಿದೆ.

  • ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಸ್ವಿಟ್ಜರ್ಲೆಂಡ್ ಮತ್ತು ಬ್ರೆಜಿಲ್‌ನಲ್ಲಿರುವ ಬಳಕೆದಾರರಿಗೆ

    ನನ್ನ ಡೇಟಾವನ್ನು ಬಳಸಲು Uber ಯಾವ ಕಾನೂನು ಆಧಾರಗಳನ್ನು ಹೊಂದಿದೆ?

    ನೀವು ವಾಸಿಸುವ ಸ್ಥಳದ ಡೇಟಾ ಸಂರಕ್ಷಣಾ ಕಾನೂನುಗಳು ಕೆಲವು ಸಂದರ್ಭಗಳು ಅನ್ವಯಿಸಿದಾಗ ಮಾತ್ರ ನಿಮ್ಮ ಡೇಟಾವನ್ನು ಬಳಸಲು Uber ಗೆ ಅವಕಾಶ ನೀಡುತ್ತವೆ. ನಿಮ್ಮ ಡೇಟಾವನ್ನು ಬಳಸುವುದಕ್ಕಾಗಿ ಇದನ್ನು "ಕಾನೂನು ಆಧಾರ" ಎಂದು ಕರೆಯಲಾಗುತ್ತದೆ. ಮೇಲೆ ವಿವರಿಸಿದ ಉದ್ದೇಶಗಳಿಗಾಗಿ ನಿಮ್ಮ ಡೇಟಾವನ್ನು ಬಳಸುವಾಗ Uber ಹೊಂದಿರುವ ಕಾನೂನು ಆಧಾರವನ್ನು ಕೆಳಗಿನ ಚಾರ್ಟ್ ಹೇಳುತ್ತದೆ.

ಕಾನೂನು ಆಧಾರ

ವಿವರಣೆ

ಡೇಟಾ ಬಳಕೆಗಾಗಿನ ಉದ್ದೇಶ

ಒಪ್ಪಂದ

ನೀವು ನಿಮ್ಮ Uber for teens ಖಾತೆಯನ್ನು ಹೊಂದಿಸಿದಾಗ ಮತ್ತು/ಅಥವಾ Uber ನಿಂದ ಸವಾರಿ ಅಥವಾ ಡೆಲಿವರಿಯನ್ನು ವಿನಂತಿಸಿದಾಗ, ಆ ಸೇವೆಗಳನ್ನು ನಿಮಗೆ ಒದಗಿಸಲು ನಾವು ಒಂದು ಒಪ್ಪಂದ ಅಥವಾ "ಕಾಂಟ್ರಾಕ್ಟ್" ಅನ್ನು ಮಾಡಿಕೊಳ್ಳುತ್ತೇವೆ. ನೀವು ವಿನಂತಿಸಿದ ಸೇವೆಗಳನ್ನು ಒದಗಿಸಲು ಮತ್ತು ಆ ಒಪ್ಪಂದದ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಿಮ್ಮ ಡೇಟಾವನ್ನು ನಾವು ಬಳಸಬೇಕಾದಾಗ ಈ ಕಾನೂನು ಆಧಾರವು ಅನ್ವಯಿಸುತ್ತದೆ.

  • ನಿಮ್ಮ ಖಾತೆಯನ್ನು ರಚಿಸುವುದು ಅಥವಾ ನವೀಕರಿಸುವುದು
  • ನಿಮ್ಮ ಚಾಲಕನಿಗೆ ನಿಮ್ಮನ್ನು ಪಿಕಪ್ ಮಾಡಲು ಅಥವಾ ನಿಮ್ಮ ತಲುಪಬೇಕಾದ ಸ್ಥಳಕ್ಕೆ ಕರೆದೊಯ್ಯಲು ಸಹಾಯ ಮಾಡುವುದು
  • ನಿಮ್ಮ ಸವಾರಿಗಳು ಅಥವಾ ಡೆಲಿವರಿಗಳನ್ನು ಟ್ರ್ಯಾಕ್ ಮಾಡುವುದು
  • ನಿಮಗೆ ಟ್ರಿಪ್ ಅಥವಾ ಡೆಲಿವರಿ ನವೀಕರಣಗಳನ್ನು ಒದಗಿಸುವುದು
  • ದರಗಳನ್ನು ಲೆಕ್ಕಹಾಕುವುದು
  • ಗ್ರಾಹಕ ಬೆಂಬಲ
  • ನೀವು ಮತ್ತು ನಿಮ್ಮ ಚಾಲಕ ಅಥವಾ ಡೆಲಿವರಿ ಪಾರ್ಟ್‌ನರ್ ನಡುವೆ ಸಂವಹನಗಳನ್ನು ಸಕ್ರಿಯಗೊಳಿಸುವುದು.

ಕಾನೂನುಬದ್ಧ ಆಸಕ್ತಿಗಳು

ನಿಮ್ಮ ಗೌಪ್ಯತೆಯ ಹಕ್ಕುಗಳಿಗೆ ಗಂಭೀರವಾಗಿ ಹಾನಿಯಾಗದ ರೀತಿಯಲ್ಲಿ Uber ಅಥವಾ ಇತರರಿಗೆ (ಇತರ Uber ಬಳಕೆದಾರರು ಸೇರಿದಂತೆ) ಪ್ರಯೋಜನವಾಗುವ ಉದ್ದೇಶಗಳಿಗಾಗಿ Uber ನಿಮ್ಮ ಡೇಟಾವನ್ನು ಬಳಸಬೇಕಾದಾಗ ಈ ಕಾನೂನು ಆಧಾರವು ಅನ್ವಯಿಸುತ್ತದೆ.

  • ಸುರಕ್ಷತೆ, ಭದ್ರತೆ ಮತ್ತು ವಂಚನೆ
  • ಗ್ರಾಹಕ ಬೆಂಬಲ
  • ಸಂಶೋಧನೆ ಮತ್ತು ಅಭಿವೃದ್ಧಿ
  • ಮಾರ್ಕೆಟಿಂಗ್

ಕಾನೂನು ಬಾಧ್ಯತೆ

ಕಾನೂನನ್ನು ಅನುಸರಿಸಲು ನಿಮ್ಮ ಡೇಟಾವನ್ನು ನಾವು ಬಳಸಬೇಕಾದಾಗ ಈ ಕಾನೂನು ಆಧಾರವು ಅನ್ವಯಿಸುತ್ತದೆ.

  • ಕಾನೂನು ಪ್ರಕ್ರಿಯೆಗಳು ಮತ್ತು ಅಗತ್ಯತೆಗಳು